Advertisement

ರೈತ, ಕಾರ್ಮಿಕರ ಹಿತ ಕಾಪಾಡಲು ಕ್ರಮ

05:32 AM Jun 12, 2020 | Lakshmi GovindaRaj |

ಪಾಂಡವಪುರ: ಕಳೆದ ಹಲವು ವರ್ಷಗಳಿಂದ ನಿಲುಗಡೆ ಗೊಂಡಿದ್ದ ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಶೀಘ್ರವೇ ಪ್ರಾರಂಭಿಸಿ, ಈ ಭಾಗದ ರೈತರ ಹಾಗೂ ಕಾರ್ಮಿಕರ ಹಿತ ಕಾಪಾಡಲು ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದು  ಸಕ್ಕರೆ ಸಚಿವ ಶಿವರಾಮ್‌ ಹೆಬ್ಬಾರ್‌ ಹೇಳಿದರು. ಪಿಎಸ್‌ಎಸ್‌ಕೆ ಕಾರ್ಖಾನೆಗೆ ಭೇಟಿ ನೀಡಿ ಕಾರ್ಖಾನೆಯ ಸ್ಥಿತಿಗತಿಗಳ ಬಗ್ಗೆ ಅವಲೋಕಿಸಿದ ಅವರು, ಕಾರ್ಖಾನೆಯ ಒಳಾಂಗಣದಲ್ಲಿ ಪರಿಶೀಲಿಸಿ ಕಾರ್ಖಾ ನೆಯ ಅಧಿಕಾರಿಗಳೊಂದಿಗೆ  ಚರ್ಚಿಸಿದರು.

Advertisement

ಟೆಂಡರ್‌ ಪ್ರಕ್ರಿಯೆ ಅಂತ್ಯ: ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಉತ್ತರ ಕರ್ನಾಟಕ ಭಾಗದ ಹೆಸರಾಂತ ನಿರಾಣಿ ಷುಗರ್ ಕಂಪನಿಗೆ 40 ವರ್ಷಗಳ ಕಾಲ ಗುತ್ತಿಗೆ ನೀಡ ಲಾಗಿದ್ದು, ಟೆಂಡರ್‌ ಪ್ರಕ್ರಿಯೆ ಅಂತ್ಯಗೊಂಡಿದೆ. ಖಾಸಗಿ ಕಂಪನಿಗೆ  ಗುತ್ತಿಗೆ ನೀಡಿರುವುದರಿಂದ ಅವರು ಕಾರ್ಖಾನೆ ಯನ್ನು ಶೀಘ್ರವೇ ಆರಂಭಿಸಿ, ರೈತರಿಗೆ ಅನುಕೂಲ ಮಾಡಿಕೊಡಲಿದ್ದಾರೆ. ರೈತರ ಕಬ್ಬಿನ ಬಾಕಿಯನ್ನು ನಿಗದಿತ ಸಮಯದಲ್ಲಿ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು  ಎಂದು ತಿಳಿಸಿದರು.

ಪಿಎಸ್‌ಎಸ್‌ಕೆ ಕಾರ್ಖಾನೆ ನೌಕರರಿಗೆ ಕಳೆದ 37 ತಿಂಗಳಿಂದ ಸಂಬಳ ನೀಡದಿರುವ ಬಗ್ಗೆ ಸರ್ಕಾರದ ಗಮನದಲ್ಲಿದ್ದು, ಬಾಕಿ ಉಳಿಸಿಕೊಂಡಿರುವ ನೌಕರರ ಸಂಬಳವನ್ನು ಬಿಡುಗಡೆಗೊಳಿಸಿ, ಅನುಕೂಲ ಕಲ್ಪಿಸಲಾಗುವುದು. ನೌಕರರನ್ನು  ಇಲ್ಲಿಯೇ ಉಳಿಸಿಕೊಳ್ಳಲಾಗು ವುದು. ಕಾರ್ಖಾನೆ ಆಸ್ತಿಯನ್ನು ರಕ್ಷಣೆ ಮಾಡಲಾಗು ವುದು. ಕಾರ್ಖಾನೆಯಲ್ಲಿ ಉಪ ಉತ್ಪನ್ನಗಳ ಘಟಕವನ್ನು ಆರಂಭಿಸುವ ಬಗ್ಗೆ ಗುತ್ತಿಗೆ ಪಡೆದಿರುವವರು ನಿರ್ಧರಿಸುತ್ತಾರೆ ಎಂದು ಹೇಳಿದರು.

ಸಚಿವ  ಕೆ.ಸಿ.ನಾರಾಯಣಗೌಡ, ಶಾಸಕ ಸಿ.ಎಸ್‌.ಪುಟ್ಟ ರಾಜು, ಕಾರ್ಮಿಕ ಆಯುಕ್ತ ಅಕ್ರಂಪಾಷ, ಡೀಸಿ ಡಾ. ಎಂ.ವಿ.ವೆಂಕಟೇಶ್‌, ಉಪ ವಿಭಾಗಾಧಿಕಾರಿ ಸಿ.ಆರ್‌. ಶೈಲಜಾ, ತಹಶೀಲ್ದಾರ್‌ ಪ್ರಮೋದ್‌.ಎಲ್‌.ಪಾಟೀಲ್‌, ಪಿಎಸ್‌ಎಸ್‌ಕೆ ವ್ಯವಸ್ಥಾಪಕ  ನಿರ್ದೇಶಕ ಕೆಂಡಗಾವಿ, ಮಾಜಿ ಅಧ್ಯಕ್ಷ ಕೆ.ಎಸ್‌.ನಂಜುಂಡೇಗೌಡ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next