Advertisement

ಕೋವಿಡ್ ವೈರಸ್ ತಡೆಗಟ್ಟಲು ಕ್ರಮ : ವಿ.ಸೋಮಣ್ಣ

06:29 PM Apr 23, 2021 | Team Udayavani |

ಬೆಂಗಳೂರು : ಕೋವಿಡ್19 ನಿಯಂತ್ರಣಕ್ಕೆ ಹೌಸಿಂಗ್ ಬೋರ್ಡ್ ಬಳಿ ಇರುವ ಯುನಾನಿ, ಆರ್ಯವೇದ ಆಸ್ಪತ್ರೆಯನ್ನು ನಾಳೆಯಿಂದ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುವುದು ಎಂದು ಸಚಿವರಾದ ವಿ.ಸೋಮಣ್ಣರವರು ತಿಳಿಸಿದ್ದಾರೆ.

Advertisement

ವಸತಿ ಸಚಿವರಾದ ವಿ.ಸೋಮಣ್ಣ ರವರು ಮತ್ತು ಅಬಕಾರಿ ಖಾತೆ ಸಚಿವರಾದ ಗೋಪಾಲಯ್ಯರವರು ಗೋವಿಂದರಾಜನಗರ ವಿಧಾನಸಭಾ ಮತ್ತು ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ಅಧಿಕಾರಿ ಮತ್ತು ತಜ್ಞ ವೈದ್ಯರುಗಳ ಜೊತೆಯಲ್ಲಿ ಕೋವಿಡ್-19ರ ಪರಿಸ್ಥಿತಿ ಮತ್ತು ನಿಭಾಯಿಸಲು ಬೇಕಾದ ಕ್ರಮಗಳ ಬಗ್ಗೆ ಚರ್ಚೆ ಮಾಡಿದರು. ಹಾಗೂ ಅಮ್ಲಜನಕ ಸಿಲಿಂಡರ್ ದಾಸ್ತಾನು ವಿಕ್ಷಣೆ ಮಾಡಿದರು.

ಗಾಬರಿ, ಅತಂಕಪಡಬೇಡಿ ಇದ್ದರಿಂದ ಮಾನಸಿಕವಾಗಿ ಕುಗ್ಗುತ್ತೀರಿ. ಎ.ಸಿಂಪಟಮ್ ಇರುವ ರೋಗಿಗಳು ಹೋಂ ಕ್ಲಾರಂಟೈನ್ ಮಾಡಲಾಗುವುದು, ಅವರಿಗೆ ಔಷಧಿ, ಮಾತ್ರೆಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು. ಜ್ವರ ಪರೀಕ್ಷಾ ಕೇಂದ್ರ ಆರಂಭಿಸಲಾಗುವುದು ಎಂದರು.

ಇದು ಸಾರ್ವಜನಿಕರು ಎಚ್ಚರ ವಹಿಸುವ ಸಂದರ್ಭ. ಮಾಸ್ಕ್ ಧರಿಸಿ ಅವ್ಯಶಕತೆ ಇದ್ದಲ್ಲಿ ಮನೆಯಿಂದ ಹೊರಬನ್ನಿ. ಸಾಮಾಜಿಕ ಅಂತರಕಾಯ್ದುಕೊಳ್ಳಿ ಮತ್ತು ಕೈಯನ್ನು ಆಗಾಗ ತೊಳೆಯುತ್ತಿರಿ. ಕೋವಿಡ್ ನಿಯಂತ್ರಣ ಮಾಡಬೇಕಾದರೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೇಳಿದರು.

ಕೋವಿಡ್ ರೋಗಿಗಳಿಗೆ 200 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಗೋವಿಂದರಾಜನಗರ  ಜನರಿಗೆ ಮೊದಲ ಆದ್ಯತೆ ನೀಡಲಾಗುವುದು. ಏಕೆಂದರೆ ಬಡ ಮತ್ತು ನಿರ್ಗತಿಕ ಜನರು ಮತ್ತು ಮಧ್ಯಮ ವರ್ಗದ ಜನರು ಇಲ್ಲಿ ಹೆಚ್ಚು ವಾಸಿಸುತ್ತಾರೆ. ಮಹಾಲಕ್ಷ್ಮಿ ಲೇಔಟ್  ಮತ್ತು ರಾಜಾಜಿನಗರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದು. ರೋಗಿಗಳು ಭಯಭೀತರಾಗಬಾರದು. ನಾವು ಕೋವಿಡ್ ತಡೆಯಲು ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ವಸತಿ ಸಚಿವ ಶ್ರೀ ವಿ.ಸೋಮಣ್ಣರವರು ಹೇಳಿದರು

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next