Advertisement

ಸ್ವಚ್ಛ ಮೇವ ಜಯತೆ, ಪ್ಲಾಸ್ಟಿಕ್‌ ನಿಷೇಧಕ್ಕೆ ಕ್ರಮ

03:23 PM Sep 25, 2019 | Team Udayavani |

ಹಾಸನ: ರಾಜ್ಯಾದ್ಯಂತ ನಡೆಯುತ್ತಿರುವ  ಸ್ವಚ್ಛ  ಮೇವ ಜಯತೆ ಜಾಥಾವನ್ನು ಯಶಸ್ವಿಯಾಗಿ ನಡೆಸಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‌ ಭಾಸ್ಕರ್‌ ನಿರ್ದೇಶನ ನೀಡಿದ್ದಾರೆ.

Advertisement

ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ರಾಜ್ಯ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್‌ ಅವರು ಹಳ್ಳಿ, ಹಳ್ಳಿಗೆ ಸ್ವಚ್ಛತಾ ಅರಿವು ಜಾಥಾ ತಲುಪುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕಲಾ ತಂಡಗಳನ್ನು ಬಳಸಿಕೊಂಡು ಬೀದಿ ನಾಟಕಗಳ ಮೂಲಕ ಪ್ಲಾಸ್ಟಿಕ್‌ ಮುಕ್ತ ಗ್ರಾಮ ಪರಿಕಲ್ಪನೆ ಕುರಿತು ಜಾಗೃತಿಮೂಡಿಸಿ ಮತ್ತು ಶಾಲಾ ಮಕ್ಕಳನ್ನು ಸ್ವಚ್ಚತಾ ಆಂದೋಲನಕ್ಕೆ ಮುಖ್ಯ ರಾಯಭಾರಿಗಳನ್ನಾಗಿ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸೂಚಿಸಿದರು.

ಪ್ರತಿಜ್ಞಾವಿಧಿ ಸ್ವೀಕರಿಸಿ: ಅ. 2ರ ಗಾಂಧಿ ಜಯಂತಿಯ ಪ್ರಯುಕ್ತ ರಾಜ್ಯಾದ್ಯಂತ ಪ್ರತಿಜ್ಞಾ ವಿಧಿ ಸ್ವೀಕಾರ ಮತ್ತು ಶ್ರಮದಾನದ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ನಿರ್ದೇಶನ ನೀಡಿದ ಅವರು, ಅ. 3 ರಿಂದ 27 ರ ವರೆಗೆ ಪ್ಲಾಸ್ಟಿಕ್‌ ಮರುಬಳಕೆ ಜಾಗೃತಿ ಕಾರ್ಯಕ್ರಮ ನಡೆಸುವಂತೆ ಸೂಚಿಸಿದರು.

ವೆಬ್‌ನಲ್ಲಿ ಮಾಹಿತಿ ನೀಡಿ:  ಸ್ವಚ್ಛ  ಮೇವ ಜಯತೆ ಮತ್ತು ಗಾಂಧಿ ಜಯಂತಿ ಭಾಗವಾಗಿ ನಡೆಯುವ ಎಲ್ಲಾ ಕಾರ್ಯಕ್ರಮಗಳ ಕುರಿತು ಭಾರತ ಸರ್ಕಾರ ವರದಿ ಕೇಳುವುದರಿಂದ ಎಲ್ಲಾ ಜಿಲ್ಲೆಯಲ್ಲಿಯೂ ಪೋಟೋಗಳನ್ನು ವೆಬ್‌ಸೈಟ್‌ ನಲ್ಲಿ ಅಪ್‌ಲೋಡ್‌ ಮಾಡಿ ದಾಖಲಿಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಸೂಚಿಸಿದರು.

ಅತಿವೃಷ್ಟಿ ಹಾನಿ ಪರಿಹಾರ ನೀಡಲು ಸೂಚನೆ: ಅತಿವೃಷ್ಟಿಯಿಂದ ಉಂಟಾಗಿರುವ ಮನೆಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜೀವ್‌ ಗಾಂಧಿ ಪೋರ್ಟಲ್‌ನಲ್ಲಿ ನೋಂದಣಿ, ಜಿಪಿಎಸ್‌ ಅಳವಡಿಕೆ ಕಾರ್ಯಗಳನ್ನು ತುರ್ತಾಗಿ ಮುಗಿಸ ಬೇಕೆಂದು ಡೀಸಿಆರ್‌.ಗಿರೀಶ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ಜಿಪಿಎಸ್‌ ಅಳವಡಿಸಿ: ವಿಡಿಯೋ ಸಂವಾದದ ನಂತರ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ತಹಶೀಲ್ದಾರ್‌ ಹಂತದಲ್ಲಿ ಜಿಪಿಎಸ್‌ ಅಳವಡಿಕೆ ಬಾಕಿಯಿದ್ದು ಅದನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಸಭೆಯಲ್ಲಿ ಎಡೀಸಿ ಎಚ್‌.ಎಲ್‌. ನಾಗರಾಜ್‌, ಜಿಪಂ ಸಿಇಒ ಬಿ.ಎ.ಪರಮೇಶ್‌, ಅಭಿವೃದ್ಧಿ ಮುಖ್ಯ ಕಾರ್ಯದರ್ಶಿ ಮಹೇಶ್‌, ಪೌರಾಯುಕ್ತ ಕೃಷ್ಣಮೂರ್ತಿ, ತಹಶೀಲ್ದಾರರಾದ ಮೇಘನ, ರಕ್ಷಿತ್‌, ನಟೇಶ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next