Advertisement
ಇದು 24 ಗಂಟೆಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸಲಿದೆ. ವಾರಕ್ಕೆ 2 ಬಾರಿ ಮಾಪನ ಮಾಡಲಾಗುತ್ತದೆ. ಯಾವುದೇ ಸಮಯದಲ್ಲಿ ಕೂಡ ಮಾಹಿತಿ ಪಡೆದುಕೊಳ್ಳಬಹುದು. ಗಾಳಿಯ ವೇಗ, ದಿಕ್ಕು, ಒತ್ತಡ, ವಾತಾವರಣದ ತೇವಾಂಶ, ಉಷ್ಣತೆಗಳನ್ನು ಕೂಡ ಇದರಲ್ಲಿ ಮಾಪನ ಮಾಡಲು ಸಾಧ್ಯವಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು ಈ ಮಾಪನ ಕೇಂದ್ರದಿಂದ ಮಾಹಿತಿ ಪಡೆದುಕೊಳ್ಳಬಹುದಾಗಿದೆ.ಪ್ರಮೋದ್ ಶ್ಲಾಘನೆ
ಲಕ್ಷ್ಮಣ್ ಅವರು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾದ ಅನಂತರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಸಿಬಂದಿಗಳ ನೇಮಕ, ಬಡ್ತಿ, ಹೊಸ ಕಟ್ಟಡಗಳ ನಿರ್ಮಾಣ ಮೊದಲಾದವು ನಡೆದಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ಲಾ ಸಿದರು.
ಮಾಲಿನ್ಯ
ನಗರಗಳಲ್ಲಿ ಮಾಲಿನ್ಯಕ್ಕೆ ವಾಹನಗಳ ಹೊಗೆಯೇ ಮುಖ್ಯ ಕಾರಣ. ವಾಹನಗಳ ಹೊಗೆಯಿಂದ ಶೇ.50-60ರಷ್ಟು ಮಾಲಿನ್ಯವಾಗುತ್ತದೆ. ಕೈಗಾರಿಕೆಗಳಿಂದ ಶೇ.10-15ರಷ್ಟು ಮಾಲಿನ್ಯವಾಗುತ್ತದೆ. ಉಡುಪಿ ಯಲ್ಲಿಯೂ ವಾಹನಗಳಿಂದ ಮಾಲಿನ್ಯ ಹೆಚ್ಚು. ಉಡುಪಿ ನಗರದಲ್ಲಿ ಸುಮಾರು 1ಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳ ಓಡಾಟವಿದೆ. ಕೈಗಾರಿಕೀಕರಣ, ರಸ್ತೆ ಧೂಳು, ಕಟ್ಟ, ರಸ್ತೆ ನಿರ್ಮಾಣ ಕಾಮಗಾರಿಗಳು ವಾಯುಮಾಲಿನ್ಯಕ್ಕೆ ಕಾರಣವಾಗುವ ಇತರ ಅಂಶಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೂರು
ಉಡುಪಿ ಜಿಲ್ಲೆಯ 3 ಕೈಗಾರಿಕೆಗಳ ವಿರುದ್ಧ ಮತ್ತು 1 ಫಿಶ್‌ಮೀಲ್ ವಿರುದ್ಧ ದೂರುಗಳು ಬಂದಿವೆ. ಈ ಬಗ್ಗೆ ನಿರಂತರವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಫಿಶ್‌ಮೀಲ್‌ಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿದರೆ ಅದರಿಂದ ಬರುವ ವಾಸನೆಯನ್ನು ಶೇ.60ರಷ್ಟು ತಡೆಯಬಹುದಾಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.