Advertisement

ಫೆ.7ರಿಂದ ರಾಜ್ಯಾದ್ಯಂತ ದಡಾರ, ರುಬೆಲಾ ಲಸಿಕೆ ಅಭಿಯಾನ

12:11 PM Jan 31, 2017 | Team Udayavani |

ಬೆಂಗಳೂರು: ಮಾರಕವಾದ ದಡಾರ ಮತ್ತು ರುಬೆಲಾ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಫೆ.7ರಿಂದ 28ರವರೆಗೆ ಲಸಿಕೆ ಹಾಕುವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರಿನಲ್ಲೂ ನಡೆಯುವ ಅಭಿಯಾನಕ್ಕೆ ಎಲ್ಲಾ ಸದಸ್ಯರು ಸಹಕರಿಸುವಂತೆ ಆರೋಗ್ಯ ವಿಭಾಗದ ಅಧಿಕಾರಿಯೊಬ್ಬರು ಕೌನ್ಸಿಲ್‌ ಸಭೆಯಲ್ಲಿ ಮನವಿ ಮಾಡಿದರು.

Advertisement

ದಡಾರ ಕಾಯಿಲೆ ಮಕ್ಕಳಲ್ಲೇ ಕಂಡುಬರುತ್ತದೆ. ಈ ಕಾಯಿಲೆಯಿಂದ ವಿಶ್ವದಲ್ಲಿ ಪ್ರತಿ ಗಂಟೆಗೆ 17 ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಶೇ.40ರಷ್ಟು ಭಾರತದವರಾಗಿದ್ದಾರೆ. ಆದ್ದರಿಂದ ದೇಶದಲ್ಲಿ ಆದ್ಯತೆ ಮೇರೆಗೆ ಧಿಪೋಲಿಯೊ ಮಾದರಿಯಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆ ಉದ್ದೇಶಿಸಿದೆ.

ಮೊದಲ ಹಂತದಲ್ಲಿ ಕರ್ನಾಟಕ, ಗೋವಾ, ತಮಿಳುನಾಡು, ಪುದುಚೇರಿ, ಲಕ್ಷದ್ವೀಪದಲ್ಲಿ ಆರಂಭವಾಗಲಿದೆ. ರಾಜ್ಯದಲ್ಲಿ 1.26 ಕೋಟಿ ಮಕ್ಕಳಿಗೆ ಲಸಿಕೆ ಹಾಕಿಸುವ ಗುರಿ ಇದ್ದು, ಬೆಂಗಳೂರು ನಗರ ಜಿಲ್ಲೆಯಲ್ಲೇ 26 ಲಕ್ಷ ಮಕ್ಕಳಿಗೆ ಈ ಚುಚ್ಚುಮದ್ದು ಹಾಕಲಾಗುವುದು.

9 ತಿಂಗಳಿಂದ 15 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಇದನ್ನು ಕಡ್ಡಾಯವಾಗಿ ಹಾಕಿಸಬೇಕು. ಇದಕ್ಕಾಗಿ ಪೋಷಕರು ಸಹಕರಿಸಬೇಕು. ಪಾಲಿಕೆ ಸದಸ್ಯರು ಕೂಡ ಆಯಾ ವಾರ್ಡ್‌ಗಳಲ್ಲಿ ಈ ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next