Advertisement

ಎಲುಬಿಲ್ಲದ ನಾಲಗೆಯ ಚಾಳಿ

09:58 AM Dec 13, 2019 | sudhir |

ದಿನದಿನಕ್ಕೆ ಮಹಿಳೆಯರ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡುವ ರಾಜಕಾರಣಿಗಳ ಸಂಖ್ಯೆಹೆಚ್ಚುತ್ತಿದೆ. ಜನನಾಯಕರಿಗೆ‌ ಸೂಕ್ಷ್ಮತೆಯ ಪ್ರಜ್ಞೆಯೊಂದನ್ನು ಜನಾಭಿಪ್ರಾಯದ ಮೂಲಕ ಮೂಡಿಸುವ ಉದ್ದೇಶದಿಂದ ಪತ್ರಿಕೆ ಈ ಅಭಿಯಾನವನ್ನು ಹಮ್ಮಿಕೊಂಡಿತ್ತು. ಇದಕ್ಕೆ ಓದುಗರು ಬಹು ಸಂಖ್ಯೆಯಲ್ಲಿ ಪ್ರತಿಸ್ಪಂದಿಸಿದ್ದು, ಆಯ್ದವುಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

Advertisement

ಮನಸ್ಸಿಗೆ ಹೆಚ್ಚು ನೋವು
ನಾಗರಿಕತೆ ಉಳ್ಳ ಮನುಷ್ಯನಿಗೆ ದೈಹಿಕ ಗಾಯಕ್ಕಿಂತಲೂ ಮನಸ್ಸಿಗೆ ಹೆಚ್ಚು ನೋವು ಕೊಡೋದು ಮಾನಸಿಕ ಗಾಯಗಳು. ಗದ್ದುಗೆ ಹಿಡಿಯುವ ಭರದಲ್ಲಿ ಕೆಲವು ಅಧಿಕಾರದಲ್ಲಿರುವ ಕೆಟ್ಟ ಮನಸುಗಳು ಏನು ಬೇಕಾದರೂ ಹೇಳುತ್ತಾರೆ. ಬಳಿಕ ನಮ್ಮ ಮಾತನ್ನು ಮಾಧ್ಯಮಗಳು ತಿರುಚಿವೆ ಎಂದು ಸಭ್ಯಸ್ಥರಾಗಿ ಇದ್ದು ಬಿಡುತ್ತಾರೆ. ಹೆಣ್ಣನ್ನು ನೋಡುವ ದೃಷ್ಠಿಕೋನದ ಜತೆಗೆ ನಾವು ಹೇಳುವ ಮಾತುಗಳಲ್ಲಿ ಹಿಡಿತವಿರಬೇಕು. ರಾಜಕಾರಣಿಗಳೇ ನಿಮ್ಮ ನಾಲಗೆ ಮೇಲೆ ಹಿಡಿತವಿರಲಿ.
– ಕೆ.ಎಸ್‌. ಜಯಲಕ್ಷ್ಮೀ, ಮುನಿಯಾಲು

ಕೀಳು ಮಾತು ಸಲ್ಲದು
ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ನೀಡಿರುವ ವಿಶೇಷ ಸ್ಥಾನವನ್ನು ಕಿತ್ತುಕೊಂಡು ಅತ್ಯಾಚಾರ, ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಮಹಿಳೆಯರ ಬಗ್ಗೆ ಕೇವಲವಾಗಿ ಮಾತನಾಡುವ ಆಡಳಿತರೂಢರು ಮೊದಲು ತಾವೂ ಕೂಡ ಉತ್ತಮ ಸಂಸ್ಕಾರವನ್ನು ಕಲಿಯಬೇಕಿದೆ. ಸಮಾಜದಲ್ಲಿ ಗಂಡಸರು ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿಕೋನ ಬದಲಾದರೆ ಮಾತ್ರ ಎಲ್ಲವೂ ಸರಿಯಾಗುತ್ತದೆ.
– ಚಿನ್ಮಯಿ ಶೆಣೈ, ಬೆಳ್ಮಣ್ಣು

ದೃಷ್ಟಿಕೋನವೇ ಬದಲಾಗಲಿ
ಅಧಿಕಾರ ಘನತೆಯನ್ನು ಪದವಿ ಯನ್ನು ತಂದು ಕೊಡಬಹುದು. ಆದರೆ ಮಾನವನನ್ನು ಸುಶಿಕ್ಷಿತರನ್ನಾಗಿ ಮಾಡಲಾರದು ಎಂಬುದೇ ವಿಪರ್ಯಾಸ. ಇದಕ್ಕೆ ಉತ್ತಮ ಸಂಸ್ಕಾರ ಸಂಸ್ಕೃತಿಯ ಅಗತ್ಯ ಇದೆ. ಮಾತುಗಳು ಇವೆಲ್ಲವೂಗಳ ಪ್ರತಿಬಿಂಬ. ಸಮಾಜದ ದೃಷ್ಟಿಕೋನವೇ ಹೆಣ್ಣು ಮಕ್ಕಳ ಬಗ್ಗೆ ಬದಲಾಗಬೇಕಾಗಿರುವುದು ಇಂದಿನ ಅಗತ್ಯ.
– ಚಂದ್ರಿಕಾ ಎಂ. ಶೆಣೈ, ಮುಳ್ಳೇರಿಯಾ

ಕೆಟ್ಟ ಯೋಚನೆ ತೊಳಗಲಿ
ಮಹಿಳೆಯರ ಬಗ್ಗೆ ಮೊದಲು ನಮ್ಮ ಮನೆ ಯಲ್ಲಿ ಗೌರವ ಕೊಡಬೇಕು. ಬೆಳೆದ ಸಂಸ್ಕೃತಿ ಮತ್ತು ನಮ್ಮ ನಡತೆ ಇದು ಉತ್ತಮ ಸಮಾಜ ವನ್ನು ನಿರ್ಮಿಸಲು ಅನುವಾಗುತ್ತದೆ. ಇಂತಹ ವಾತಾವರಣದಲ್ಲಿ ಬೆಳೆದಂತಹ ನಮ್ಮ ಮಕ್ಕಳು ಯುವಕರು ಯಾರೇ ಆಗಲಿ ಅವರು ಒಳ್ಳೆಯ ಪ್ರಜೆಗಳು ಆಗುತ್ತಾರೆ. ಅದು ಬಿಟ್ಟು ಮನೆಯÇÉೇ ಅಂತಹ ಸಂಸ್ಕೃತಿ, ನಡತೆಗಳು ಸಿಗದಿದ್ದರೆ, ಕೀಳು ಅಭಿರುಚಿಯ ಹೇಳಿಕೆ ನೀಡುತ್ತಾರೆ. ಇದು ಅಳಿಯಬೇಕಿದೆ.
– ಮಮತಾ ಪಿ. ಶೆಟ್ಟಿ, ತೆಂಕನಿಡಿಯೂರು

Advertisement

ಸಂಸ್ಕಾರ ಬೆಳೆಸಿಕೊಳ್ಳಿ
ಮಹಿಳೆಯರ ಗೌರವಕ್ಕೆ ಚ್ಯುತಿ ತರು ವಂತಹ ಹೇಳಿಕೆಗಳನ್ನು ನೀಡುವುದು ಖಂಡಿತ ತಪ್ಪು. ಅದು ಯಾರೇ ಆಗಿರಲಿ. ಸಾರ್ವಜನಿಕವಾಗಿ ಹೇಳಿಕೆ ನೀಡುವಾಗ ಬಹಳ ಎಚ್ಚರಿಕೆಯಿಂದ ಇರ ಬೇಕು. ಇಂತಹ ಕೀಳು ಅಭಿರುಚಿಯ ಹೇಳಿಕೆ ನೀಡುವವರ ವ್ಯಕ್ತಿತ್ವವನ್ನು ತೋರಿಸುತ್ತದೆ. ಅವರು ಬೆಳೆದು ಬಂದ ರೀತಿಯೇ ಹಾಗಿರಬಹುದು. ಅವರವರ ಮನೆಯಲ್ಲಿಯೇ ಹೆಣ್ಣು ಮಕ್ಕಳಿಗೆ ಗೌರವ ಕೊಡಲು ಕಲಿಸಿದರೆ ಆಗ ಮುಂದಿನ ಪೀಳಿಗೆ ಸರಿಯಾಗಬಹುದು.
– ಅಲಗೇಶ್ವರಿ ಉಡುಪ, ಕಟಪಾಡಿ

ಶಿಕ್ಷೆಯ ಭಯ ಇಲ್ಲ
ದೇಶದಲ್ಲಿ ಅತ್ಯಾಚಾರ ಹೆಚ್ಚಾಗೋದಕ್ಕೆ ಜನಸಂಖ್ಯೆ ಕಾರಣ ಅಲ್ಲ. ನಮ್ಮ ನಾಯಕರ ಹೀನ ವರ್ತನೆಗಳೇ ಕಾರಣ. ನಿಮ್ಮ ಕೊಳಕು ಮಾತಿಗೆ ಮರಳಾಗಿ ಒಂದಷ್ಟು ಜನ ಹೆಣ್ಣನ್ನು ನೋಡುವ ದೃಷ್ಠಿಯನ್ನೇ ಬದಲಾಯಿಸಿಕೊಳ್ಳುತ್ತಾರೆ.
ನಿಮ್ಮ ಈ ಬೇಜವಾಬ್ದಾರಿ ಹೇಳಿಕೆಗಳಿಂದಲೇ ಅತ್ಯಾಚಾರಿಗಳಿಗೆ ಶಿಕ್ಷೆಯ ಭಯ ಕಡಿಮೆಯಾಗಿರುವುದು. ಇದು ಕೆನೆಯಾಗಲಿ.
– ಪುಷ್ಪಾ ರಘುರಾಮ್‌ ಮೇಸ್ತ, ಶಿರೂರು

ಹೆಣ್ಣು ಎಂದರೆ ತಾಯಿ
ಹೆಣ್ಣನ್ನು ಹಿಯಾಳಿಸುವುದು ತಮಗೆ ಸುಲಭವಾಗಬಹುದು. ಆದರೆ ಹೆಣ್ಣನ್ನು ಅರಿತುಕೊಳ್ಳುವುದು ನಮ್ಮೆಲ್ಲರ ಹೊಣೆ. ಹೆಣ್ಣು ಎಂದರೆ ತಾಯಿಗೆ ಸಮಾನ. ಹೆಣ್ಣಿನ ಬಗ್ಗೆ ಹೇಳಿಕೆಯನ್ನು ನೀಡಿರುವ ರಾಜಕಾರಣಿಗಳು ಅವರ ಕುಟುಂಬದ ಹೆಣ್ಣಾಗಿ¨ªಾರೆ ಏನಾದಿತ್ತು ಎಂದು ಚಿಂತಿಸಬೇಕಾಗಿದೆ. ಇದನ್ನು ನಾವು ಖಂಡಿತವಾಗಿಯೂ ವಿರೋಧಿಸುತ್ತಿದ್ದೇವೆ. ಹೇಳಿಕೆ ನೀಡಿರುವವರು ವರ್ಷಗಳು ಕಳೆದರು ಪರವಾಗಿಲ್ಲ, ಕ್ಷಮಾಯಾಚಿಸಲಿ.
– ಯಾಸೀನ್‌, ಬಂಗೇರಡ್ಕ

Advertisement

Udayavani is now on Telegram. Click here to join our channel and stay updated with the latest news.

Next