Advertisement

ನಿತ್ಯ 30 ಸಾವಿರ ಮಂದಿಗೆ ಊಟದ ವ್ಯವಸ್ಥೆ

06:24 PM Apr 13, 2020 | mahesh |

ತುಮಕೂರು: ಕಿಲ್ಲರ್‌ ಕೋವಿಡ್-19 ಜನರ ಬದುಕಿನ ಮೇಲೆ ಸಂಕಷ್ಟ ತಂದಿರುವಂತೆಯೇ ನಿರಾಶ್ರಿತರು, ವಲಸೆ ಕಾರ್ಮಿಕರು ಮತ್ತು ಬಡವರು ತುತ್ತು ಅನ್ನಕ್ಕೂ ಸಂಕಷ್ಟ ಎದುರಿಸ ಬೇಕಾಗಿದೆ ಇದನ್ನು ಗಮನಿಸಿದ ಜಿಲ್ಲಾಡಳಿತ ಮತ್ತು ವಿವಿಧ ಸಂಘ ಸಂಸ್ಥೆಯವರು ಸಮಾಜ ಸೇವಕರು ಊಟ, ವಸತಿ ಸೌಲಭ್ಯ ಕಲ್ಪಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

Advertisement

ಬಡವರು ಹಸಿವಿನಿಂದ ಬಳಲಬಾರದು ಎಂದು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಇದರ ಜೊತೆಗೆ ಹಲವು ಸಂಘ ಸಂಸ್ಥೆಗಳಾದ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ನೇತೃತ್ವದಲ್ಲಿ ವೀರಶೈವ ಸಮಾಜ, ಮಾಜಿ ಶಾಸಕ ಕೆ.ಎನ್‌.ರಾಜಣ್ಣ, ಆರ್‌.ರಾಜೆಂದ್ರ ನೇತೃತ್ವದ ಆರ್‌.ಆರ್‌.ಅಭಿಮಾನಿ ಬಳಗ, ಸಿದ್ಧಗಂಗಾ ಮಠ, ಜಿಲ್ಲಾ ಕಾಂಗ್ರೆಸ್‌ ಸಮಿತಿ, ಜಿಲ್ಲಾ ಜೆಡಿಎಸ್‌, ಶಾಸಕ ಡಿ.ಸಿ.ಗೌರಿಶಂಕರ್‌ ಅಭಿಮಾನಿ ಬಳಗ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಕೂಲಿಕಾರ್ಮಿಕರು, ವಲಸಿಗರು ಇರುವ ಕಡೆಗೆ‌ ಹೋಗಿ ಊಟ, ಉಪಾಹಾರ ನೀಡುತ್ತಿದ್ದಾರೆ.

ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಪ್ರತಿ ತಾಲೂಕಿಗೆ ಕನಿಷ್ಠ 2 ರಿಂದ ಗರಿಷ್ಠ 5 ರವರೆಗೆ ನೋಡಲ್‌ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದ್ದು, ಈ ಅಧಿಕಾರಿಗಳು ಕಚೇರಿಯಲ್ಲಿ ಕೂತು ಕೆಲಸ ಮಾಡುವ ಬದಲು ಪ್ರತಿ ತಾಲೂಕುಗಳಿಗೆ ಪ್ರತಿ ದಿನ ಭೇಟಿ ನೀಡಿ ಜಿಲ್ಲೆಯಲ್ಲಿ ಸರ್ಕಾರದಿಂದ ಕೂಲಿ
ಕಾರ್ಮಿಕರಿಗೆ ಮಾಡಲಾಗಿರುವ ವಸತಿ ಕೇಂದ್ರಗಳಿಗೆ, ಗುತ್ತಿಗೆದಾರರು ಹಾಗೂ ಮಾಲೀಕರು ಮಾಡಿರುವ ವಸತಿ ಕೇಂದ್ರಗಳಿಗೆ ಮತ್ತು ಅಲೆಮಾರಿ ಕ್ಯಾಂಪ್‌ಗ್ಳಲ್ಲಿ ವಸತಿ, ಊಟ, ವೈದ್ಯಕೀಯ ನೆರವು ಮತ್ತು ಮೂಲಭೂತ ಸೌಲಭ್ಯಗಳನ್ನು ನೀಡಬೇಕು ಮತ್ತು ನೀಡಿರುವ ಬಗ್ಗೆ ಫೋಟೋದೊಂದಿಗೆ ವರದಿಯನ್ನು ಜಿಲ್ಲಾಡಳಿತಕ್ಕೆ ಪ್ರತಿ ದಿನ ನೀಡುವಂತೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್‌ ತಾಕೀತು ಮಾಡಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 953 ವಲಸೆ ಕಾರ್ಮಿಕರನ್ನು ಗುರುತಿಸಲಾಗಿದ್ದು, ಗುತ್ತಿಗೆದಾರರು ಮತ್ತು ಮಾಲೀಕರ ಬಳಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸಂಖ್ಯೆ 4,377 ರಷ್ಟಿದ್ದು, ಅವರಿಗೆ ಡೀಸಿ ನೆರವು ನೀಡುತ್ತಿದ್ದಾರೆ. ನಗರದಲ್ಲಿಯೇ ಪ್ರತಿದಿನ ವೀರಶೈವ ಸಮಾಜ 25 ಸಾವಿರಕ್ಕೂ ಹೆಚ್ಚು ಜನರಿಗೆ ಊಟದ ಸೌಲಭ್ಯ ನೀಡಲಾಗುತ್ತಿದೆ. ಇತರ ಸಂಘ ಸಂಸ್ಥೆಗಳಿಂದ 30 ಸಾವಿರಕ್ಕೂ ಹೆಚ್ಚು ಜನರಿಗೆ ಪ್ರತಿದಿನ ಊಟ ನೀಡಲಾಗುತ್ತಿದೆ.

ಕೋವಿಡ್-19 ವೈರಸ್‌ನಿಂದ ಜನ ತೊಂದರೆ ಅನುಭವಿಸುತ್ತಿರುವ ಕೂಲಿ ಕಾರ್ಮಿಕರು, ನಿರಾಶ್ರಿತರು ಹಸಿವಿನಿಂದ ಬಳಲಬಾರದು ಎಂದು ವೀರಶೈವ ಸಮಾಜ ಮತ್ತು ಇತರೆ ಸಂಘ ಸಂಸ್ಥೆಗಳು ಜಿಲ್ಲಾಡಳಿತ ಜೊತೆ ಗೂಡಿ ಪ್ರತಿನಿತ್ಯ 25 ಸಾವಿರಕ್ಕೂ ಹೆಚ್ಚು ಜನರಿಗೆ ಪ್ರತಿದಿನ ಮೂರು ಹೊತ್ತಿನ ಊಟದ ಸೌಲಭ್ಯ
ನೀಡಲಾಗುತ್ತಿದೆ.
●ಜಿ.ಬಿ.ಜ್ಯೋತಿಗಣೇಶ್‌, ಶಾಸಕ

Advertisement

●ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next