Advertisement

ಸ್ಪಷ್ಟನೆ ನೀಡಿ ಇಲ್ಲವೇ ರಾಜೀನಾಮೆ ಕೊಡಿ

06:00 AM Oct 11, 2018 | Team Udayavani |

ನವದೆಹಲಿ: “ಮಿ ಟೂ’ ಅಭಿಯಾನದಡಿ ಮಹಿಳೆಯರಿಂದ ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ಎಂ.ಜೆ. ಅಕ್ಬರ್‌, ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಬೇಕು ಇಲ್ಲವೇ ಸಚಿವ ಸ್ಥಾನ ತೊರೆಯಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ. 
ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌, “”ಅಮೆರಿಕ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶ ಬ್ರೆಟ್‌ ಕವಾನೆಫ್ ವಿರುದ್ಧ ಆರೋಪ ಬಂದಾಗ ಅವರು ಸ್ಪಷ್ಟನೆ ನೀಡಿದ್ದಾರೆ. ಈಗ ನೀವೇಕೆ (ಅಕ್ಬರ್‌) ನೀಡಬಾರದು” ಎಂದು ಪ್ರಶ್ನಿಸಿದ್ದಾರೆ. 

Advertisement

ಅಕ್ಬಲ್‌ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ಮಿ ಟೂ ಅಭಿಯಾನದಡಿ ಮಹಿಳೆಯರು ತೋರುತ್ತಿರುವ ಧೈರ್ಯವನ್ನು ಶ್ಲಾ ಸಿದ್ದಾ ರಾದರೂ, ಅಕ್ಬರ್‌ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ. ಮಂಗಳವಾರ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿರಲಿಲ್ಲ. 

ಏತನ್ಮಧ್ಯೆ, “ಮಿ ಟೂ’ ಅಭಿಯಾನದಡಿ ತಮ್ಮ ವಿರುದ್ಧದ ಆರೋಪಗಳು ಬಂದಾಗ ಸತ್ಯಾಂಶ ಗೊತ್ತಿದ್ದರೂ ತಮ್ಮ ಬೆಂಬಲಕ್ಕೆ ನಿಲ್ಲುತ್ತಿಲ್ಲ ಎಂದು ಆರೋಪಿಸಿ, ಬಾಲಿವುಡ್‌ ನಿರ್ದೇಶಕ ವಿಕಾಸ್‌ ಬೆಹ್ಲ, ತಾವು ಹಿಂದೆ ಪಾಲುದಾರರಾಗಿದ್ದ ಫ್ಯಾಂಟಮ್‌ ಫಿಲ್ಮ್ಸ್ ಸಂಸ್ಥೆಯ ಸಹ ಪಾಲುದಾರರಾದ ಅನುರಾಗ್‌ ಕಶ್ಯಪ್‌, ವಿಕ್ರಮಾದಿತ್ಯ ಮೊಟ್ವಾನೆಗೆ ಕಾನೂನು ನೋಟಿಸ್‌ ಕಳುಹಿಸಿದ್ದಾರೆ. ನೋಟಿಸ್‌ ತಲುಪಿದ ಬೆನ್ನಲ್ಲೇ ಕಶ್ಯಪ್‌ ಅವರು  “ಮುಂಬೈ ಅಕಾಡೆಮಿ ಆಫ್ ದ ಮೂವಿಂಗ್‌ ಇಮೇಜಸ್‌’ (ಎಂಎಎಂಐ) ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. 

ಹಿರಿಯ ನಟ ಅಲೋಕ್‌ನಾಥ್‌ ವಿರುದ್ಧ ಟಿವಿ ಧಾರಾವಾಹಿ ನಿರ್ಮಾಪಕಿ ವಿಂತಾ ನಂದಾ ಆರೋಪದ ಬೆನ್ನಲ್ಲೇ ಮತ್ತೂಬ್ಬ ನಟಿ ಸಂಧ್ಯಾ ಮೃದುಲ್‌ ಎಂಬುವರೂ ನಾಥ್‌ ವಿರುದ್ಧ ಆರೋಪ ಮಾಡಿದ್ದಾರೆ.  ಏತನ್ಮಧ್ಯೆ, ತಮಿಳು ಚಿತ್ರ ಸಾಹಿತಿ ವೈರಮುತ್ತು ವಿರುದ್ಧವೂ ಮಹಿಳೆಯೊಬ್ಬರು ಆರೋಪ ಮಾಡಿದ್ದಾರೆ. 

ಅಪರಾಧಿ ನಾನಲ್ಲ: ರಘು ದೀಕ್ಷಿತ್‌
ಕರ್ನಾಟಕದ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್‌ ವಿರುದ್ಧವೂ ಆರೋಪ ಕೇಳಿ ಬಂದಿದೆ.  ಹೆಸರು ಬಹಿರಂಗಪಡಿಸದ ಗಾಯಕಿಯೊಬ್ಬರು,  ಹಿಂದೊಮ್ಮೆ ಹಾಡೊಂದರ ರೆಕಾರ್ಡಿಂಗ್‌ ವೇಳೆ ರಘು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದರೆಂದು ದೂರಿದ್ದಾರೆ. ಇದಕ್ಕೆ ಟ್ವಿಟರ್‌ನಲ್ಲೇ ಉತ್ತರಿಸಿರುವ ರಘು, “”ಘಟನೆ ನಡೆದಿದ್ದು ನಿಜ. ಅದೇ ದಿನ ನನ್ನ ತಪ್ಪಿನ ಅರಿವಾಗಿ ಆಕೆಯಲ್ಲಿ ಕ್ಷಮೆ ಕೋರಿದ್ದೆ. ಈಗ ಮತ್ತೆ ಕ್ಷಮೆ ಕೋರುತ್ತಿದ್ದೇನೆ” ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next