Advertisement
ಸಂಜನಾ ಆರೋಪದ ಬಗ್ಗೆ ನಿರ್ದೇಶಕರ ಸಂಘದ ಮೆಟ್ಟಿಲೇರಿದ್ದ ರವಿ ಶ್ರೀವತ್ಸ, “ಗಂಡಹೆಂಡತಿ’ ಚಿತ್ರೀಕರಣಕ್ಕೆ ಸಂಬಂಧಿಸಿದ ಹಲವು ದಾಖಲೆಗಳನ್ನು ಹಾಜರುಪಡಿಸಿ, ಸಂಜನಾ ಅವರ ಸುಳ್ಳು ಹೇಳಿಕೆಯಿಂದ ತನ್ನ ತೇಜೋವಧೆ ಯಾಗಿದ್ದು, ಅವರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದ ನಿರ್ದೇಶಕರ ಸಂಘ, ಈ ಸಂಬಂಧ ನ. 8ರ ಒಳಗೆ ನಿರ್ದೇಶಕರ ಸಂಘ ಮತ್ತು ನಿರ್ದೇಶಕ ರವಿ ಶ್ರೀವತ್ಸ ಬಳಿ ಬಹಿರಂಗ ಕ್ಷಮೆ ಕೇಳುವಂತೆ ಗಡುವು ನೀಡಿತ್ತು. ಆದರೆ ವಿದೇಶದಲ್ಲಿದ್ದ ನಟಿ ಸಂಜನಾ ಬೆಂಗಳೂರಿಗೆ ವಾಪಸಾಗುತ್ತಿದ್ದಂತೆ, ನಿರ್ದೇಶಕ ಸಂಘಕ್ಕೆ ಭೇಟಿ ನೀಡಿ, ಸಂಘದ ಅಧ್ಯಕ್ಷ ವಿ ನಾಗೇಂದ್ರ ಪ್ರಸಾದ್ ಅವರ ಸಮ್ಮುಖದಲ್ಲಿ ಕ್ಷಮೆ ಕೇಳಿದ್ದಾರೆ. “ಕಲಾವಿದರ ಸಂಘದ ಹಿರಿಯರಾದ ರಾಕ್‌ಲೈನ್ ವೆಂಕಟೇಶ್, ಅಂಬರೀಶ್ ಹಾಗೂ ನಿರ್ದೇಶಕ ಸಂಘದ ಮಾತಿಗೆ ಬೆಲೆ ಕೊಟ್ಟು ನಾನು ನಿರ್ದೇಶಕರ ಮುಂದೆ ಬಹಿರಂಗ ಕ್ಷಮೆ ಕೋರುತ್ತಿದ್ದೇನೆ. ನಾನು ಯಾರ ಮನಸ್ಸು ನೋಯಿಸುವ ಸಲುವಾಗಿ ಅರೋಪ ಮಾಡಿಲ್ಲ, ಸಿನಿಮಾದ ಚಿತ್ರೀಕರಣದ ವೇಳೆ ತಮಗಾದ ನೋವನ್ನು ಹೇಳಿಕೊಂಡಿದ್ದೆ’ ಎಂದು ವಿವಾದಕ್ಕೆ ಅಂತ್ಯ ಹಾಡಿದರು.
Advertisement
ಮಿಟೂ ಆರೋಪ: ಕ್ಷಮೆ ಕೇಳಿದ ನಟಿ ಸಂಜನಾ
07:03 AM Nov 14, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.