Advertisement

#MeToo ವಿವಾದ: ಮಲ್ಹರ್‌, ಜಯಸೂರ್ಯ ಜಟಾಪಟಿ

01:22 AM Sep 02, 2024 | Team Udayavani |

ತಿರುವನಂತಪುರ: ಮಲಯಾಳ ಚಿತ್ರ­ರಂಗದಲ್ಲಿ ಮೀ ಟೂ ವಿವಾದ ಮುಂದುವರಿದಿದ್ದು, ಲೈಂಗಿಕ ಕಿರು ಕುಳದ ಆರೋಪ ಎದುರಿಸುತ್ತಿರುವ ನಟ ಜಯಸೂರ್ಯ ಹಾಗೂ ಆರೋಪ ಮಾಡಿದ್ದ ನಟಿ ಸೋನಿಯಾ ಮಲ್ಹರ್‌ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ. ತಮ್ಮ ವಿರುದ್ಧ ಸುಳ್ಳು ಆರೋಪ ಮಾಡು­ತ್ತಿರುವವರಿಗೆ ಕಾನೂನು ಪಾಠ ಕಲಿಸುವುದಾಗಿ ಜಯಸೂರ್ಯ ಎಚ್ಚರಿಸಿದ್ದರೆ, ಬೆದರಿಕೆಗೆಲ್ಲ ಹೆದರಲ್ಲ ಎಂದು ಮಲ್ಹರ್‌ ತಿರುಗೇಟು ನೀಡಿದ್ದಾರೆ.

Advertisement

ತಮ್ಮ ವಿರುದ್ಧ ಎಫ್ಐಆರ್‌ ದಾಖ ಲಾಗಿರುವ ಬಗ್ಗೆ ಇದೇ ಮೊದಲ ಬಾರಿ  ಜಯಸೂರ್ಯ ಪ್ರತಿಕ್ರಿಯಿಸಿದ್ದಾರೆ. ಸಂದ­ರ್ಶನವೊಂದರಲ್ಲಿ ಮಾತನಾಡಿ, “ಸತ್ಯ ಕ್ಕಿಂತ ಸುಳ್ಳು ವೇಗವಾಗಿ ಹಬ್ಬು­ತ್ತದೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇನೆ’ ಎಂದಿದ್ದಾರೆ.

ಇದಕ್ಕೆ ಮಲ್ಹರ್‌ ತಿರುಗೇಟು ನೀಡಿದ್ದು, “ನಾನು ಹೇಳಿದ ಎಲ್ಲವೂ ಸತ್ಯ. ಕಿರುಕುಳ ನೀಡಿದ ನಟನ ಹೆಸರು ಮೊದಲಿಗೆ ನಾನು ಹೇಳಿರಲಿಲ್ಲ. ಆದರೆ ಆತನ ಹೆಸರು ಹೇಳದೇ ಇರುವುದಕ್ಕಾಗಿ ಲಂಚ ಪಡೆದಿದ್ದೇನೆ ಎಂಬ ಆರೋಪ ಗಳು ನನ್ನ ವಿರುದ್ಧವೇ ಬಂದವು. ನನ್ನ ಘನತೆಗೆ ಧಕ್ಕೆಯಾದ ಕಾರಣ ಹೆಸರು ಬಹಿರಂಗಪಡಿಸಿದೆ. ನಾನು ಯಾವ ಬೆದರಿಕೆಗೂ ಹೆದರುವುದಿಲ್ಲ, ಹೋರಾಟ ಮುಂದುವರಿಸುತ್ತೇನೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next