Advertisement

MDMA ಸಾಗಾಟ: ಯುವಕನ ಬಂಧನ

01:04 AM Jan 12, 2024 | Team Udayavani |

ಉಳ್ಳಾಲ: ಮಾದಕ ವಸ್ತು ಎಂಡಿಎಂಎಯನ್ನು ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದ ಆರೋಪಿ ಕೋಟೆಕಾರು ಕೆ.ಸಿ. ರೋಡ್‌ ನಿವಾಸಿ ಆಸೀಫ್‌ (27)ನನ್ನು ಮಂಗಳೂರು ಉಪವಿಭಾಗದ ಎಸಿಪಿ ಧನ್ಯಾ ನಾಯಕ್‌ ನೇತೃತ್ವದ ಆ್ಯಂಟಿ ಡ್ರಗ್‌ ಟೀಮ್‌ನ ತಂಡ ಬಂಧಿಸಿದ್ದು, ಆರೋಪಿಯಿಂದ 4.41 ಗ್ರಾಂ ಎಂಡಿಎಂಎ ಸಹಿತ ಸಾಗಾಟಕ್ಕೆ ಬಳಸಿದ್ದ ಬೈಕ್‌ ಹಾಗೂ ಸುಮಾರು 68 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ

Advertisement

ಉಳ್ಳಾಲ ಪೊಲೀಸ್‌ ಠಾಣೆಯ ಉಪನಿರೀಕ್ಷಕ ಸಂತೋಷ್‌ ಕುಮಾರ್‌ ಡಿ. ಅವರು ಆ್ಯಂಟಿ ಡ್ರಗ್‌ ಟೀಮ್‌ನ ಸಿಬಂದಿ ಶಾಜು ನಾಯರ್‌, ಮಹೇಶ್‌, ಅಕ್ಬರ್‌ ಯಡ್ರಾವಿ ಮತ್ತು ನವೀನ್‌ ಕೆ.ಪಿ. ಅವರೊಂದಿಗೆ ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ಕೋಟೆಕಾರ್‌ ಗ್ರಾಮದ ಕೆ.ಸಿ. ನಗರ ಯು.ಜಿ. ಗೇಟ್‌ರೋಡ್‌ನ‌ ಸಾರ್ವಜನಿಕ ರಸ್ತೆ ಬದಿಯ ಖಾಲಿ ಜಾಗದ ಬಳಿಗೆ ದಾಳಿ ನಡೆಸಿ ಮಾದಕ ವಸ್ತು, ಬೈಕ್‌, ನಗದು ಸೇರಿದಂತೆ ಒಟ್ಟು 68 ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿಯ ವಿರುದ್ಧ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪೊಲೀಸ್‌ ಆಯುಕ್ತ ಅನುಪಮ್‌ ಅಗರವಾಲ್‌ ಮಾರ್ಗದರ್ಶನದಲ್ಲಿ, ಉಪ ಪೊಲೀಸ್‌ ಆಯಕ್ತರಾದ ಸಿದ್ಧಾರ್ಥ್ ಗೋಯಲ್‌, ದಿನೇಶ್‌ ಕುಮಾರ್‌ ಅವರ ನಿರ್ದೇಶನದಲ್ಲಿ ಎಸಿಪಿ ಧನ್ಯಾ ನಾಯಕ್‌, ಉಳ್ಳಾಲ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಬಾಲಕೃಷ್ಣ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next