Advertisement

ಮೆಕ್ ಡೊನಾಲ್ಡ್; ಕೇಳಿದ್ದು ಫ್ರೆಂಚ್ ಫ್ರೈ,ಕೊಟ್ಟಿದ್ದು ಹಲ್ಲಿ ಫ್ರೈ!

05:08 PM Mar 03, 2017 | |

ಕೋಲ್ಕತಾ: ಫ್ರೆಂಚ್ ಪ್ರೈ ಬೇಕೆಂದು ಆರ್ಡರ್ ಮಾಡಿದ್ದ ಗರ್ಭಿಣಿ ಮಹಿಳೆ ಹೌಹಾರುವಂತಹ ಪ್ರಸಂಗವೊಂದು ಫಾಸ್ಟ್ ಫುಡ್ ಗೆ ಹೆಸರಾದ ಮೆಕ್ ಡೊನಾಲ್ಡ್ ರೆಸ್ಟೋರೆಂಟ್ ನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ! ಮಹಿಳೆಯೊಬ್ಬರಿಗೆ ನೀಡಿದ್ದ ತಿನಿಸಿನಲ್ಲಿ ಹಲ್ಲಿಯೊಂದು ಪತ್ತೆಯಾಗಿದ್ದು, ಆಕೆ ಮೆಕ್ ಡೊನಾಲ್ಡ್ ವಿರುದ್ಧ ದೂರನ್ನು ದಾಖಲಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

ಕೋಲ್ಕತಾ ನಿವಾಸಿಯಾದ ಪ್ರಿಯಾಂಕಾ ಮೈತ್ರಾ ಎಂಬಾಕೆ ತನ್ನ ಮಗಳೊಂದಿಗೆ ಮೆಕ್ ಡೊನಾಲ್ಡ್ ಗೆ ತೆರಳಿ, ಫ್ರೆಂಚ್ ಫ್ರೈಗೆ ಆರ್ಡರ್ ಮಾಡಿದ್ದರು. ಫ್ರೆಂಚ್ ಫ್ರೈ ಬಂದಿದೆ ಪ್ಯಾಕೇಟ್  ನಲ್ಲಿ ನೋಡಿದರೆ ಹಲ್ಲಿ ಫ್ರೈ ಗಮನಿಸಿ ಬೆಚ್ಚಿಬಿದ್ದಿರುವುದಾಗಿ ವರದಿ ವಿವರಿಸಿದೆ.

ಮೆಕ್ ಡೊನಾಲ್ಡ್ ರೆಸ್ಟೋರೆಂಟ್ ನಲ್ಲಿ ಫ್ರೆಂಚ್ ಫ್ರೈಗೆ ಆರ್ಡರ್ ಮಾಡಿದ್ದು, ಅವರು ನೀಡಿದ್ದ ಪಾರ್ಸೆಲ್ ನಲ್ಲಿ ಹಲ್ಲಿ ಫ್ರೈ ಪತ್ತೆಯಾಗಿದೆ ಎಂದು ಪ್ರಿಯಾಂಕಾ ಫೆ.28ರಂದು ನೀಡಿದ್ದಾರೆ. ಜೊತೆಗೆ ಫ್ರೆಂಚ್ ಐಟಂನಲ್ಲಿ ಹಲ್ಲಿ ಫ್ರೈ ಇರುವ ಫೋಟೋವನ್ನೂ ಕೂಡಾ ದೂರಿನ ಪ್ರತಿ ಜೊತೆ ನೀಡಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮೆರಿಕ ಮೂಲದ ಫಾಸ್ಟ್ ಫುಡ್ ಸಂಸ್ಥೆಯಾದ ಮೆಕ್ ಡೊನಾಲ್ಡ್ ಈ ದೂರಿನ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದೆ.  ಇದನ್ನು ನಾವು ಗಂಭೀರವಾಗಿ ಪರಿಗಣಿಸಿರುವುದಾಗಿ ಮೆಕ್ ಡೊನಾಲ್ಡ್ ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.
 

Advertisement

Udayavani is now on Telegram. Click here to join our channel and stay updated with the latest news.

Next