Advertisement

ಮೆಕ್ಡೊನಾಲ್ಡ್ಸ್ ಹೊಸ ಹೆಜ್ಜೆ : ನಟಿ ರಶ್ಮಿಕಾ ಹೆಸರಲ್ಲಿ ‘ದಿ ರಶ್ಮಿಕಾ ಮೀಲ್’

10:55 AM Nov 21, 2021 | Team Udayavani |

ದಕ್ಷಿಣ ಭಾರತದ ಕ್ಯೂಟ್ ಬ್ಯೂಟಿಗಳಲ್ಲಿ ರಶ್ಮಿಕಾ ಮಂದಣ್ಣ ಕೂಡ ಮೊದಲ ಸಾಲಿನಲ್ಲೇ ನಿಲ್ಲುತ್ತಾರೆ. ಸಾಲು ಸಾಲು ಚಿತ್ರಗಳಲ್ಲಿ ನಟಿಸಿರುವ ಕೊಡಗಿನ ಕುವರಿ ಬಾಲಿವುಡ್ ಸಿನಿ ಇಂಡಸ್ಟ್ರಿಗೂ ಎಂಟ್ರಿ ಕೊಟ್ಟಿದ್ದಾರೆ. ಇಷ್ಟೇ ಅಲ್ಲದೆ ಮೆಕ್ಡೊನಾಲ್ಡ್ಸ್ ಕಂಪನಿಯ ರಾಯಬಾರಿಯಾಗಿಯೂ ಕೆಲಸ ಮಾಡುತ್ತಿದ್ದಾರೆ.

Advertisement

ವಿಶೇಷ ಅಂದ್ರೆ ಇದೀಗ ಮೆಕ್ಡೊನಾಲ್ಡ್ಸ್ ‘ದಿ ರಶ್ಮಿಕಾ ಮೀಲ್’ (The Rashmika Meal) ಅನ್ನು ತಮ್ಮ ಗ್ರಾಹಕರಿಗೆ ಪರಿಚಯ ಮಾಡಿದೆ. ನಟಿ ರಶ್ಮಿಕಾಗೆ ಇಷ್ಟವಾದ ಫಾಸ್ಟ್ ಫುಡ್ ಗಳು ರಶ್ಮಿಕಾ ಮೀಲ್ ನಲ್ಲಿ ಇರಲಿವೆ.

ಇದರಲ್ಲಿ ಚಿಕನ್ ಫ್ರೈ, ಪೆರಿ ಪೆರಿ ಫ್ರೈ, ಚಿಕನ್ ಬರ್ಗರ್, ನಿಂಬು ಫಿಜ್ಜಾ, ಪ್ಲರ್ರಿ ಇದೆ. ಇವುಗಳನ್ನು ತಿನ್ನುತ್ತಾ ತಮ್ಮ ಅಭಿಮಾನಿಗಳಿಗೆ, ಹಾಗೂ ಗ್ರಾಹಕರಿಗೆ ದಿ ರಶ್ಮಿಕಾ ಮೀಲ್ ಬಗ್ಗೆ ರಶ್ಮಿಕಾ ಮಂದಣ್ಣ ಪರಿಚಯಿಸಿದ್ದಾರೆ.

ಮೆಕ್ಡೊನಾಲ್ಡ್ಸ್ ಮೆನುಗಳಲ್ಲಿ ಇನ್ನುಮುಂದೆ  ದಿ ರಶ್ಮಿಕಾ ಮೀಲ್ ಕೂಡ ಸಿಗಲಿದ್ದು, ಗ್ರಾಹಕರು ಆರ್ಡರ್ ಮಾಡಿ ರುಚಿಯನ್ನು ಸವಿಯಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next