Advertisement

ಮಳೆ ಆರಂಭವಾದರೂ ಸಜ್ಜಾಗದ ಪಾಲಿಕೆ

06:09 AM Jun 15, 2020 | Lakshmi GovindaRaj |

ಮೈಸೂರು: ಈಗಾಗಲೇ ಮುಂಗಾರು ಆರಂಭವಾಗಿದೆ. ಮಳೆ ಸುರಿದು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದರೂ ಪಾಲಿಕೆ ಮಳೆಗಾಲ ಎದುರಿಸಲು ಇನ್ನೂ ಸಮ ರ್ಪಕವಾಗಿ ಸಜ್ಜುಗೊಂಡಿಲ್ಲ. ಕಳೆದೆರೆಡು ವಾರಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಮೈಸೂರಿನ ಹಲವು ಬಡಾವಣೆಗಳ ರಸ್ತೆ ಬದಿಯಲ್ಲಿದ್ದ ಮರಗಳು ಧರೆ ಗುರುಳಿದ್ದವು. ಜೊತೆಗೆ 50ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ತುಂಡಾಗಿ ಎರಡು ದಿನ ವಿದ್ಯುತ್‌ ಪೂರೈಕೆ  ಸ್ಥಗಿತಗೊಳಿಸಲಾಗಿತ್ತು.

Advertisement

ಇನ್ನೂ ಕೆಲವೆಡೆ ತಗ್ಗು ಪ್ರದೇಶಗಳಲ್ಲಿ ಚರಂಡಿ ಮತ್ತು ರಾಜ ಕಾಲುವೆಗಳಲ್ಲಿ ಹೂಳು ತುಂಬಿದ್ದ ಪರಿಣಾಮ ರಸ್ತೆ ಮತ್ತು ಮನೆಗಳಿಗೆ ನೀರು ನುಗ್ಗಿತ್ತು. ಮೈಸೂರು ನಗರದಲ್ಲಿ ಪ್ರತಿ ವರ್ಷ ಮಳೆಯಿಂದ ದೊಡ್ಡ  ಸಮಸ್ಯೆ ಎದುರಾದರೂ ನಗರಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿ ರು ವುದು ಅವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.

ಎಲ್ಲಿದೆ ಚರಂಡಿ: ನಗರದ ಹಳೆಯ ಬಡಾವಣೆಗಳ ಬಹುಪಾಲು ರಸ್ತೆ ಬದಿ, ಮನೆ ಗಳ ಮುಂದೆ ನಿರ್ಮಿಸಿರುವ ಚರಂಡಿಗಳು ಮಣ್ಣು, ಕಸಕಡ್ಡಿಯಿಂದ ಮುಚ್ಚಿಹೋಗಿದ್ದರೆ, ಇನ್ನೂ ಕೆಲವೆಡೆ ಚರಂಡಿಯೇ ನಿರ್ಮಾಣ ವಾಗಿಲ್ಲ. ಪರಿಣಾಮ  ಚರಂಡಿ ಎಲ್ಲಿದೆ ಎಂದು ಹುಡುಕುವಂತಾಗಿದೆ.

ಹೂಳು ತುಂಬಿದ ರಾಜಕಾಲುವೆಗಳು: ಮಳೆ ನೀರು ಮತ್ತು ತ್ಯಾಜ್ಯ ನೀರು ಸರಾಗವಾಗಿ ಹರಿಯುವಂತೆ ನಿರ್ಮಿಸಿರುವ ರಾಜ ಕಾಲುವೆ ಹಾಗೂ ದೊಡ್ಡ ಮೋರಿಗಳಲ್ಲಿ ಹೂಳು  ತುಂಬಿ ಕೊಂಡಿದೆ. ಸದಾ ವಾಹನ ದಟ್ಟಣೆಯಿಂದ ಕೂಡಿರುವ ಜೆಎಸ್‌ಎಸ್‌ ಆಸ್ಪತ್ರೆ ರಸ್ತೆಯಲ್ಲಿರುವ ಮಾರು ಕಟ್ಟೆ ಬಳಿ ಹಾದು ಹೋಗಿರುವ ರಾಜಕಾಲುವೆ, ಬೋಗಾದಿ, ವಿಜಯನಗರ, ಮುನೇಶ್ವರನಗರ, ವಿದ್ಯಾರಣ್ಯಪುರಂ ಬಳಿ  ಕಾಲುವೆಗಳಲ್ಲೂ ಇದೆ ಸ್ಥಿತಿ ನಿರ್ಮಾಣವಾಗಿದೆ.

ಪ್ರಮುಖ ರಸ್ತೆಗಳಿಗಷ್ಟೇ ಆದ್ಯತೆ: ನಗರಪಾಲಿಕೆ ಕೈಗೊಳ್ಳುವ ಬಹುಪಾಲು ಮುಂಜಾಗ್ರತೆ ಕ್ರಮಗಳು  ಕೇವಲ ನಗರದ ಪ್ರಮುಖ ರಸ್ತೆ ಮತ್ತು ಬಡಾವಣೆಗಳಿಗೆ ಸೀಮಿತವಾಗಿದೆ. ಉಳಿದ ಬಡಾವಣೆ ಮತ್ತು ರಸ್ತೆಗಳು ಅಭಿವೃದಿಟಛಿ ಮತ್ತು ಮುಂಜಾಗ್ರತೆ ಕ್ರಮಗಳಿಂದ ದೂರ ಉಳಿದಿವೆ ಎಂದು ಪಾಲಿಕೆ ಮಾಜಿ ಸದಸ್ಯರೊಬ್ಬರ ದೂರು.

Advertisement

ನಗರದಲ್ಲಿ ಅಪಾಯ ಸ್ಥಿತಿಯಲ್ಲಿ 300 ಮರ: ನಗರದ ಹಲವು ರಸ್ತೆಗಳಲ್ಲಿ ಒಣಗಿದ ಹಾಗೂ ಬೀಳುವ ಹಂತದಲ್ಲಿ 300ಕ್ಕೂ ಹೆಚ್ಚು ಮರ ಮತ್ತು ಮರದ ಕೊಂಬೆಗಳಿವೆ. ಜೋರು ಗಾಳಿ, ಮಳೆ ಬಂದರೆ ನೆಲಕ್ಕುರುಳಲಿವೆ. ಸಹಸ್ರಾರು  ವಾಹನಗಳು ಓಡಾಡುವ ಮುಖ್ಯರಸ್ತೆಯಲ್ಲಿ ಮರಗಳು ಉರುಳಿದರೆ ಜೀವಹಾನಿಯಾಗುವ ಸಾಧ್ಯತೆಗಳಿವೆ. ಇತ್ತೀಚೆಗೆ ಸುರಿದ ಭಾರೀ ಮಳೆಗೆ ಮರಗಳು, ವಿದ್ಯುತ್‌ ಕಂಬ, ವಾಹನ ಹಾಗೂ ಮನೆಗಳ ಮೇಲೆ ಉರುಳಿ ಬಿದ್ದಿದ್ದವು. ಮತ್ತೆ ಆ  ಘಟನೆಗಳು ಮರುಕಳಿಸದಂತೆ ಪಾಲಿಕೆ ಕೂಡಲೇ ಕ್ರಮ ವಹಿಸಬೇಕಿದೆ.

ಅಪಾಯ ಸ್ಥಿತಿಯಲ್ಲಿರುವ 300 ಮರ, ಕೊಂಬೆಗಳನ್ನು ಗುರುತಿಸಲಾಗಿದೆ. ಅವುಗಳ ತೆರವಿಗೆ ಅರಣ್ಯ ಇಲಾಖೆ ಅನುಮತಿ ಕೋರಿದ್ದೇವೆ. ಅನುಮತಿ ಸಿಕ್ಕ ಕೂಡಲೇ ಮರಗಳನ್ನು ತೆರವುಗೊಳಿಸಲಾಗುವುದು. 
-ಮಣಿಕಂಠ, ಎಇಇ, ತೋಟಗಾರಿಕಾ ವಿಭಾಗ, ಮಹಾನಗರಪಾಲಿಕೆ

* ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next