Advertisement

2022ರಲ್ಲಿ ಎಂಬಿಇಡಿ ಜಾರಿ: ವಿದ್ಯುತ್‌ ಬಿಲ್‌ ಇಳಿಕೆ ನಿರೀಕ್ಷೆ

11:38 PM Oct 08, 2021 | Team Udayavani |

ಹೊಸದಿಲ್ಲಿ: ವಿದ್ಯುತ್‌ ವಿತರಕ ಸಂಸ್ಥೆಗಳು ಮತ್ತು ಗ್ರಾಹಕರಿಗೆ ವಿದ್ಯುತ್‌ ವೆಚ್ಚದಲ್ಲಿ ಉಳಿತಾಯ ಮಾಡಿಕೊಡಲಿರುವ ವಿದ್ಯುತ್‌ ಖರೀದಿ- ವಿತರಣೆಯ ಮಾರುಕಟ್ಟೆ ಆಧಾರಿತ ಎಕನಾಮಿಕ್‌ ಡಿಸ್ಪ್ಯಾಚ್‌ (ಎಂಬಿಇಡಿ)- 1ನೇ ಹಂತವನ್ನು 2022ರ ಎ. 1ರಿಂದ ದೇಶದಲ್ಲಿ ಜಾರಿಗೊಳಿಸಲಾಗುತ್ತದೆ ಎಂದು ಇಂಧನ ಸಚಿವಾಲಯವು ಶುಕ್ರವಾರ ಪ್ರಕಟಿಸಿದೆ.

Advertisement

ಎಂಬಿಇಡಿಯ ಮೂಲಕ ದೇಶಾದ್ಯಂತ ವಿದ್ಯುತ್ತಿಗೆ ಇರುವ ಬೇಡಿಕೆಗೆ ಅನುಸಾರವಾಗಿ ಲಭ್ಯವಿರುವ ಅತ್ಯಂತ ಕಡಿಮೆ ದರದ ವಿದ್ಯುತ್‌ ಉತ್ಪಾದನ ಸಂಪನ್ಮೂಲಗಳಿಂದ ಮೊದಲಿಗೆ ವಿದ್ಯುತ್‌ ಸರಬರಾಜಾಗುತ್ತದೆ.

ಎಂಬಿಇಡಿಯಿಂದ ಗ್ರಾಹಕರ ವಿದ್ಯುತ್‌ ಬಿಲ್ಲಿನಲ್ಲಿ ಶೇ. 5ರಷ್ಟು ಇಳಿಕೆ ಸಾಧ್ಯ ಎಂದು ಸಚಿವಾಲಯ ತಿಳಿಸಿದೆ. ಇದರಿಂದ ನವೀಕರಿಸ ಬಹುದಾದ ಮೂಲಗಳಿಂದ ಉತ್ಪಾದನೆಯಾಗುವ ವಿದ್ಯುತ್‌ಗೆ ಆದ್ಯತೆ ಸಿಗುವ ನಿರೀಕ್ಷೆಯೂ ಇದೆ.

ಇದನ್ನೂ ಓದಿ:ಉಪ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗೆ ಜನ ಮತ: ಸಿದ್ದರಾಮಯ್ಯ

Advertisement

Udayavani is now on Telegram. Click here to join our channel and stay updated with the latest news.

Next