Advertisement

ಜೈನ ದೀಕ್ಷೆ ಪಡೆದು ಸನ್ಯಾಸಿನಿ ಆದ ಯುವ ವೈದ್ಯೆ ಹೀನಾ

06:00 AM Jul 21, 2018 | Team Udayavani |

ಅಹಮದಾಬಾದ್‌: ಆಕೆಯೊಬ್ಬ ಯುವ ವೈದ್ಯೆ. ಪ್ರತಿಭಾವಂತೆ. ಎಂಬಿಬಿಎಸ್‌ನಲ್ಲಿ ಚಿನ್ನದ ಪದಕ ಗಳಿಸಿದವರು. ಜನಸೇವೆಯೇ ಜನಾರ್ದನ ಸೇವೆ ಎಂಬಂತೆ ದುಡಿದವರು. ಆದರೆ, 30ರ ಹರೆಯದ ಆ ಯುವತಿಯ ಮನದಾಳದಲ್ಲಿದ್ದಿದ್ದು ಪಾರಮಾರ್ಥಿಕ ಸಾಧನೆಯ ಗುರಿ. ಇದರ ಸಾಕಾರಕ್ಕೆ ಅವರು ಆರಿಸಿಕೊಂಡದ್ದು ಸನ್ಯಾಸ ಮಾರ್ಗ. ಇದು, ಇತ್ತೀಚೆಗೆ ಅಹ್ಮದಾಬಾದ್‌ನಲ್ಲಿ ಸನ್ಯಾಸ ಸ್ವೀಕರಿಸುವ ಮೂಲಕ, ಡಾ. ಹೀನಾ ಹೆಸರಿನಿಂದ ವಿಶಾರದ್‌ ಮಾತಾಜಿ ಎಂದು ಬದಲಾದ ಯುವತಿಯ ಕತೆ. ಇವರ ತಂದೆ ಅಶೋಕ್‌ ಹಿಂಗದ್‌ ದೊಡ್ಡ ಉದ್ಯಮಿ. ಅಶೋಕ್‌ ಹಾಗೂ ಧನವಂತಿ ಹಿಂಗದ್‌ ಎಂಬ ದಂಪತಿಯ ಆರು ಮಕ್ಕಳಲ್ಲಿ ಹಿರಿಯ ಪುತ್ರಿಯೇ ಡಾ.ಹೀನಾ.

Advertisement

ಬಾಲ್ಯದಿಂದಲೂ ಓದಿನಲ್ಲಿ ಮುಂದಿದ್ದ ಈಕೆಯನ್ನು ವೈದ್ಯಳಾಗಿ ನೋಡುವ ಕನಸು ಅಪ್ಪನದ್ದು. ಆದರೆ, ಆಕೆಗಾದರೋ ಸನ್ಯಾಸತ್ವದ ಕಡೆಗೇ ಆಕರ್ಷಣೆ. ಆದರೂ, ಅಪ್ಪನ ಮನಸ್ಸು ನೋಯಿಸಲೊಲ್ಲದ ಆಕೆ ಅಶೋಕ್‌ ಅವರಿಗಾಗಿ ವೈದ್ಯೆಯಾದರು. ಎಂಬಿಬಿಎಸ್‌ ಮುಗಿಸಿ, ಮಾಲೆಗಾಂವ್‌, ದಹನಾನು ಹಾಗೂ ಮುಂಬೈಗಳಲ್ಲಿ 3 ವರ್ಷ ಜನಸೇವೆ ಮಾಡಿದರು. ಅಪ್ಪನ ಆಶಯ ಈಡೇರಿಸಿದ ಸಾರ್ಥಕತೆ ಕಂಡ ನಂತರ, ತಮ್ಮ ಆಶಯದ ಈಡೇರಿಕೆಗಾಗಿ ಸನ್ಯಾಸ ಮಾರ್ಗಕ್ಕೆ ಅಡಿಯಿಟ್ಟಿದ್ದಾರೆ. ಮಗಳ ಆಶಯಕ್ಕೆ ಕುಟುಂಬ ಸ್ಪಂದಿಸಿದ್ದು, ಸಂತೋಷದಿಂದಲೇ ಅವರ ಸಾಧನೆಗೆ ಬೆನ್ನು ತಟ್ಟಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next