ವಿಜಯಪುರ: ರಾಜ್ಯದಲ್ಲಿ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 50 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲುತ್ತಾರೆ ಎಂದಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಯುಗಾದಿ ಬಳಿಕ ಕಾಂಗ್ರೆಸ್ ಸ್ಪರ್ಧಿಗಳ ಮೊದಲ ಪಟ್ಟಿ ಬಿಡುಗಡೆ ಆಗಲಿದೆ ಎಂದು ತಿಳಿಸಿದ್ದಾರೆ.
ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಾದಾಮಿ, ಕೊಲ್ಹಾರ, ವರುಣಾ ಎಲ್ಲಿಯತೇ ಸ್ಪರ್ಧಿಸಿದರೂ ಅವರು ಗೆಲ್ಲುತ್ತಾರೆ. ನನ್ನ ಕ್ಷೇತ್ರದಲ್ಲಿ ಅವರು ಪ್ರಚಾರ ಮಾಡಿದರೆ 10 ಸಾವಿರ ಮತಗಳು ಹೆಚ್ಚು ಬರುತ್ತವೆ. ಅವರನ್ನು ಪ್ರಚಾರಕ್ಕೆ ಹೆಚ್ಚು ಬಳಸಿಕೊಳ್ಳು ರಾಹುಲ್ ಗಾಂಧಿ ಅವರು ಹೇಳಿರಬಹುದು ಎಂದು ಹೇಳಿದರು.
ಸಿದ್ದರಾಮಯ್ಯ ಸ್ಪರ್ಧೆಯಿಂದ ಸುತ್ತಲಿನ ನೂರಾರು ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿಗೆ ಪ್ರಭಾವ ಬೀರಲಿದೆ. ಸಿದ್ಧರಾಮಯ್ಯ ಅವರಿಗೆ ಅಂತಹ ಶಕ್ತಿ ಇದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.
ಸಿದ್ಧರಾಮಯ್ಯ ಅವರ ಸ್ಪರ್ಧೆಯಿಂದ ಸುತ್ತಲಿನ ಇತರೆ ಕ್ಷೇತ್ರಗಳ ಅಭ್ಯರ್ಥಿಗಳನ್ನೂ ತಮ್ಮ ವರ್ಚಸ್ಸಿನಿಂದ ಗೆಲ್ಲಸಿಕೊಂಡು ಬರುವ ಶಕ್ತಿ ಇದೆ. ಹೀಗಾಗಿ ಕ್ಷೇತ್ರ ಆಯ್ಕೆಯ ವಿಷಯದಲ್ಲಿ ಏನು ಚರ್ಚೆ ಆಗಿದೆ ನನಗೆ ಗೊತ್ತಿಲ್ಲ ಎಂದರು.
ವರುಣಾದಿಂದ ಸ್ಪರ್ಧೆ ಮಾಡಿದರೆ ವ್ಯಾಪಕವಾಗಿ ಪ್ರಚಾರ ಮಾಡಲು ಆಗಬಹುದೆಂದು ರಾಹುಲ್ ಗಾಂಧಿ ಹೇಳಿರಬಹುದು. ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಿದರೆ ಹೊಸ ಕ್ಷೇತ್ರವಾಗಲಿರುವ ಕಾರಣ ಸ್ಥಳೀಯವಾಗಿ ಹೊಂದಿಕೊಳ್ಲು ಸಮಯ ಬೇಕಾದೀತು ಎಂಬ ಕಾರಣಕ್ಕೆ ಇಂಥ ಚಿಂತನೆ ನಡೆದಿರಬೇಕು ಎಂದರು.
Related Articles
ಮಾಜಿ ಸಚಿವ ಎಸ್.ಆರ್.ಪಾಟೀಲ ಅವರು ದೇವರಹಿಪ್ಪರಗಿ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ ಎಂಬ ವಿಷಯ ನನಗಂತೂ ಗೊತ್ತಿಲ್ಲ. ಯಾರೂ ಈ ವಿಷಯವಾಗಿ ನನ್ನೊಂದಿಗೆ ಚರ್ಚಿಸಿಲ್ಲ. ಹೀಗಾಗಿ ಈಗಾಗಲೇ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳು ವಿರೋಧ ಮಾಡಿರುವ ವಿಷಯವೂ ನನಗೆ ತಿಳಿದಿಲ್ಲ. ಈ ಕುರಿತು ಪಕ್ಷದ ವರಿಷ್ಠರು ನೋಡಿಕೊಳ್ಳುತ್ತಾರೆ ಎಂದರು.
ನನ್ನ ಹಾಗೂ ನನ್ನ ಕುಟುಂಬ ಸದಸ್ಯರ ಹಾಗೂ ಆಪ್ತ ಸಹಾಯಕರ ಫೋನ್ ಕಾಲ್ ಡಿಟೇಲ್ಸ್ ಸಂಗ್ರಹ ಮಾಡಲಾಗುತ್ತಿದೆ. ಅನುಮಾನವಲ್ಲ, ಅಧಿಕೃತ ಮಾಹಿತಿ ಆಧಾರದಲ್ಲಿ ಪೆÇಲೀಸ್ ಇಲಾಖೆಗೆ ದೂರು ಸಲ್ಲಿಸಿದ್ದಾಗಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.
ನನ್ನ ಮೊಬೈಲ್ ಕರೆಗಳ ಟ್ಯಾಪ್ ಆಗಿಲ್ಲ, ಆದರೆ ಸಿಡಿಆರ್ ಆಗಿದೆ. ಈ ಕುರಿತು ನಿಖರ ಮಾಹಿತಿ ಪಡೆದೇ ನಾನು ಪೊಲೀಸ್ ಡಿಜಿಪಿ ಹಾಗೂ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಯಾವುದೇ ವ್ಯಕ್ತಿಯ ಮೊಬೈಲ್ ಖಾಸಗಿ ಸಿಡಿಆರ್ ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಇಂಥ ಕೃತ್ಯ ನಡೆದಲ್ಲಿ ಸರ್ಕಾರವೇ ಜವಾಬ್ದಾರಿ ಎಂದು ಪತ್ರ ಬರೆದಿದ್ದೇನೆ ಎಂದರು.
ಚುನಾವಣೆ ಹಿನ್ನೆಲೆಯಲ್ಲಿ ಕೆಲವರು ಸಿಡಿಆರ್ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಕೆಲವರಿಗೆ ಅನ್ಯರ ಸಿಡಿಆರ್ ತೆಗೆಯುವ ಚಾಳಿ ಇದೆ. ಆದರೆ, ಯಾರ ಹೆಸರು ಹೇಳೋದಿಲ್ಲ. ಕೆಲವು ಪೊಲೀಸರು ಕೂಡ ಹಣದ ಆಸೆಗಾಗಿ ಅಕ್ಮರವಾಗಿ ಇಂಥ ಕೆಲಸ ಮಾಡುತ್ತಾರೆ ಎಂದರು.
ಇದನ್ನೂ ಓದಿ: ಶಿವಮೊಗ್ಗ ಡಿಸಿ ಕಚೇರಿ ಆವರಣದಲ್ಲಿ ಆಜಾನ್; ಯುವಕನ ಮೇಲೆ ಕೇಸ್, ಎಚ್ಚರಿಕೆ