Advertisement
ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಾದಾಮಿ, ಕೊಲ್ಹಾರ, ವರುಣಾ ಎಲ್ಲಿಯತೇ ಸ್ಪರ್ಧಿಸಿದರೂ ಅವರು ಗೆಲ್ಲುತ್ತಾರೆ. ನನ್ನ ಕ್ಷೇತ್ರದಲ್ಲಿ ಅವರು ಪ್ರಚಾರ ಮಾಡಿದರೆ 10 ಸಾವಿರ ಮತಗಳು ಹೆಚ್ಚು ಬರುತ್ತವೆ. ಅವರನ್ನು ಪ್ರಚಾರಕ್ಕೆ ಹೆಚ್ಚು ಬಳಸಿಕೊಳ್ಳು ರಾಹುಲ್ ಗಾಂಧಿ ಅವರು ಹೇಳಿರಬಹುದು ಎಂದು ಹೇಳಿದರು.ಸಿದ್ದರಾಮಯ್ಯ ಸ್ಪರ್ಧೆಯಿಂದ ಸುತ್ತಲಿನ ನೂರಾರು ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿಗೆ ಪ್ರಭಾವ ಬೀರಲಿದೆ. ಸಿದ್ಧರಾಮಯ್ಯ ಅವರಿಗೆ ಅಂತಹ ಶಕ್ತಿ ಇದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.
Related Articles
Advertisement
ನನ್ನ ಹಾಗೂ ನನ್ನ ಕುಟುಂಬ ಸದಸ್ಯರ ಹಾಗೂ ಆಪ್ತ ಸಹಾಯಕರ ಫೋನ್ ಕಾಲ್ ಡಿಟೇಲ್ಸ್ ಸಂಗ್ರಹ ಮಾಡಲಾಗುತ್ತಿದೆ. ಅನುಮಾನವಲ್ಲ, ಅಧಿಕೃತ ಮಾಹಿತಿ ಆಧಾರದಲ್ಲಿ ಪೆÇಲೀಸ್ ಇಲಾಖೆಗೆ ದೂರು ಸಲ್ಲಿಸಿದ್ದಾಗಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.
ನನ್ನ ಮೊಬೈಲ್ ಕರೆಗಳ ಟ್ಯಾಪ್ ಆಗಿಲ್ಲ, ಆದರೆ ಸಿಡಿಆರ್ ಆಗಿದೆ. ಈ ಕುರಿತು ನಿಖರ ಮಾಹಿತಿ ಪಡೆದೇ ನಾನು ಪೊಲೀಸ್ ಡಿಜಿಪಿ ಹಾಗೂ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಯಾವುದೇ ವ್ಯಕ್ತಿಯ ಮೊಬೈಲ್ ಖಾಸಗಿ ಸಿಡಿಆರ್ ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಇಂಥ ಕೃತ್ಯ ನಡೆದಲ್ಲಿ ಸರ್ಕಾರವೇ ಜವಾಬ್ದಾರಿ ಎಂದು ಪತ್ರ ಬರೆದಿದ್ದೇನೆ ಎಂದರು.
ಚುನಾವಣೆ ಹಿನ್ನೆಲೆಯಲ್ಲಿ ಕೆಲವರು ಸಿಡಿಆರ್ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಕೆಲವರಿಗೆ ಅನ್ಯರ ಸಿಡಿಆರ್ ತೆಗೆಯುವ ಚಾಳಿ ಇದೆ. ಆದರೆ, ಯಾರ ಹೆಸರು ಹೇಳೋದಿಲ್ಲ. ಕೆಲವು ಪೊಲೀಸರು ಕೂಡ ಹಣದ ಆಸೆಗಾಗಿ ಅಕ್ಮರವಾಗಿ ಇಂಥ ಕೆಲಸ ಮಾಡುತ್ತಾರೆ ಎಂದರು.
ಇದನ್ನೂ ಓದಿ: ಶಿವಮೊಗ್ಗ ಡಿಸಿ ಕಚೇರಿ ಆವರಣದಲ್ಲಿ ಆಜಾನ್; ಯುವಕನ ಮೇಲೆ ಕೇಸ್, ಎಚ್ಚರಿಕೆ