Advertisement

140 ಸ್ಥಾನ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ: ಎಂ.ಬಿ.ಪಾಟೀಲ್ ವಿಶ್ವಾಸ

08:07 PM May 11, 2023 | Team Udayavani |

ವಿಜಯಪುರ: ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಶಿವಕುಮಾರ ಅವರೂ ಮುಂಚೆಯೇ ಹೇಳಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 120-140 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ನಾವು ಅಧಿಕಾರಕ್ಕೆ ಬರುವುದು ಖಚಿತ. ಬಬಲೇಶ್ವರ ಕ್ಷೇತ್ರದಲ್ಲೂ ಮತದಾರರು ನನ್ನನ್ನು ಮತೊಮ್ಮೆ ಆಶೀರ್ವಾದ ಮಾಡಿದ್ದಾರೆ. ಜಿಲ್ಲೆಯಲ್ಲಿ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

Advertisement

ವಿಧಾನಸಭೆ ಚುನಾವಣೆ ಮತದಾನ ಬಳಿಕ ಗುರುವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತದಾನ ಮಾಡಿದ ಎಲ್ಲ ಮತದಾರ ಪ್ರಭುಗಳಿಗೆ, ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಿದ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಕೃತಜ್ಞನಾಗಿದ್ದೇನೆ ಎಂದರು.

ಮತದಾನದ ಬಳಿಕ ಮಾಹಿತಿ ಸಂಗ್ರಹಿಸಿದ್ದೇನೆ. ಚುನಾವಣೋತ್ತರ ಸಮೀಕ್ಷೆಗಳು ಪ್ರಸಾರವಾಗುವ ಮೊದಲೇ ನಮ್ಮ ಪಕ್ಷ ಅಧಿಕಾರಕ್ಕೆ ಬರುವ ಕುರಿತು ನಾವು ಸಾರ್ವಜನಿಕವಾಗಿ ತಿಳಿಸಿದ್ದೇವೆ. ಇದು ಫಲಿತಾಂಶದ ನಂತರ ನಿಜವಾಗಲಿದೆ. ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.

ಮತದಾನದ ದಿನವಾದ ಕಾರಣ ಬುಧವಾರ ತಡವಾಗಿ ಮಲಗಿದ್ದೆ, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿ, ಬೆಂಬಲಿಗರು ಹಗಲು-ರಾತ್ರಿ ಎನ್ನದೇ ಪಕ್ಷದ ಅಭ್ಯರ್ಥಿಗಳ ಪರವಾಗಿ ಉತ್ತಮ ಕೆಲಸ ಮಾಡಿದ್ದಾರೆ. ಪ್ರತಿ ಗ್ರಾಮದಿಂದಲೂ ಕಾರ್ಯಕರ್ತರು ಖುದ್ದು ಬಂದು, ಮೊಬೈಲ್ ಕರೆ ಮಾಡಿ ಮತದಾನದ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಈವರೆಗೆ ಸಿಕ್ಕಿರುವ ಮಾಹಿತಿಯಂತೆ ಬಬಲೇಶ್ವರ ಕ್ಷೇತದಲ್ಲಿ ಗೆಲ್ಲುವುದು ಖಚಿತ. ಜೊತೆಗೆ ಉತ್ತಮ ಮುನ್ನಡೆಯ ಅಂತರ ಸಿಗುವ ವಿಶ್ವಾಸವಿದೆ ಎಂದರು.

ಈ ಬಾರಿ ರಾಜ್ಯದಲ್ಲಿ ಪ್ರಧಾನಿ ಮೋದಿ ಅವರ ಮೋಡಿ ನಡೆದಿಲ್ಲ. ಜನತೆ 40 ಪಸೆರ್ಂಟ್ ಭ್ರಷ್ಟಾಚಾರದ ಬಿಜೆಪಿ ಸರಕಾರದಿಂದ ಬೇಸತ್ತಿದ್ದಾರೆ. ಜನವಿರೋಧಿ ನೀತಿಗಳಿಂದ ರೋಷಿ ಹೋಗಿದ್ದಾರೆ. ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಡಬಲ್ ಎಂಜಿನ್ ಸರಕಾರದ ದುರಾಡಳಿತದಿಂದ ನೊಂದಿರುವ ಜನರು ಕಾಂಗ್ರೆಸ್ ಮಾತ್ರ ಭರವಸೆ ಎಂಬ ವಿಶ್ವಾಸ ಇರಿಸಿದ್ದಾರೆ ಎಂದರು.

Advertisement

ಕಾಂಗ್ರೆಸ್ ಪಕ್ಷದ ಮಾಡಿರುವ ಜನಪರ ಹಳೆಯ ಯೋಜನೆಗಳು ಹಾಗೂ ಗ್ಯಾರಂಟಿ ಸ್ಕೀಂಗಳ ಪರ ಮನಸೋತು ಕಾಂಗ್ರೆಸ್ ಬಗ್ಗೆ ವಿಶೇಷ ಬೆಂಬಲ ನೀಡಿದ್ದು, ಮೇ 13 ರಂದು ನಿರೀಕ್ಷೆ ಮೀರಿದ ಉತ್ತಮ ಫಲಿತಾಂಶದ ರೂಪದಲ್ಲಿ ಬಹಿರಂಗವಾಗಲಿದೆ ಎಂದರು.

ಚುನಾವಣೆ ಬಳಿಕ ಕಾಂಗ್ರೆಸ್ ವೀಕ್ಷಕರು ಶಾಸಕರ ಅಭಿಪ್ರಾಯ ಪಡೆದು, ಹೈಕಮಾಂಡಿಗೆ ವರದಿ ನೀಡಲಿದ್ದಾರೆ. ಆ ನಂತರ ಕಾಂಗ್ರೆಸ್ ಸರಕಾರ ಅಧಿಕಾರ ಸ್ವೀಕರಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಭೀಕರ ಬಸ್ ಅವಘಡ; ಕನಿಷ್ಠ 5 ಮಂದಿ ಬಲಿ

Advertisement

Udayavani is now on Telegram. Click here to join our channel and stay updated with the latest news.

Next