Advertisement

ಮೇದಾರ ಸಮಾಜ ಅಭಿವೃದ್ಧಿಗೆ ಕಂಕಣ ಬದ್ಧ: ಸಂಸದ ಜೋಶಿ

01:20 PM May 30, 2017 | Team Udayavani |

ಹುಬ್ಬಳ್ಳಿ: ಶೈಕ್ಷಣಿಕ, ಆರ್ಥಿಕ ಹಾಗೂ ಸಮಾಜಿಕವಾಗಿ ಹಿಂದುಳಿದಿರುವ ಮೇದಾರ ಸಮಾಜದ ಅಭಿವೃದ್ಧಿಗೆ ನಾವು ಸದಾ ಕಂಕಣಬದ್ದವಾಗಿದ್ದೇವೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

Advertisement

 ಹೊಸಹುಬ್ಬಳ್ಳಿ ಮೇದಾರ ಓಣಿಯಲ್ಲಿ ರವಿವಾರ ಶ್ರೀ ಕೇತೇಶ್ವರ ಹಿತಾಭಿವೃದ್ಧಿ ಸಂಘದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ನೂತನವಾಗಿ ಸ್ಥಾಪಿತವಾಗಿರುವ ಸಂಘ ಅಭಿವೃದ್ಧಿಯತ್ತ ಮುನ್ನಡೆಯಲಿ. 

ಸರಕಾರದಿಂದ ಸಿಗಬೇಕಾದ ಸೌಲಭ್ಯ ದೊರಕಿಸಿಕೊಡುವಲ್ಲಿ ಪ್ರಾಮಾಣಿಕ  ಪ್ರಯತ್ನ ಮಾಡಲಾಗುವುದು ಎಂದರು. ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಮೇದಾರ ಓಣಿಯಲ್ಲಿರುವ ಕರೆಯಮ್ಮ ದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು. 

ಮಹಾಪೌರ ಡಿ.ಕೆ. ಚವ್ಹಾಣ, ಸಂಘದ ಅಧ್ಯಕ್ಷ ಕುಮಾರ ಕುಂದಗೋಳ,  ಉಪಾಧ್ಯಕ್ಷ ಯಲ್ಲೇಶ ನವಲಗುಂದ, ಕಾರ್ಯದರ್ಶಿ ಕಲ್ಮೇಶ್ವರ ಮಂಗಳಗಟ್ಟಿ, ಖಜಾಂಚಿ ಯಲ್ಲೇಶ ಶಿರಗುಪ್ಪಿ, ಸದಸ್ಯರಾದ ರವಿ ಹೆಬ್ಬಳ್ಳಿ, ಸುರೇಶ ಸವಣೂರ, ಗಂಗಾಧರ ಕುಂದಗೋಳ, ನವೀನ ಅಮ್ಮಿàನಬಾವಿ, ಶ್ರೀನಿವಾಸ ಶಿರಗುಪ್ಪಿ, ರವೀಂದ್ರ ಕುಂದಗೋಳ, ಮಂಜುನಾಥ ಬಾವಿಕಟ್ಟಿ, ಯಲ್ಲೇಶ ಬಂಕಾಪುರ, ರಾಜು ಶಿರಗುಪ್ಪಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next