Advertisement

ಮೇಯರ್‌ ರಾಜೀನಾಮೆ ನೀಡಲಿ: ಮಹಿಳಾ ಮೋರ್ಚಾ

01:52 PM Oct 29, 2017 | |

ಮಂಗಳೂರು, ಅ. 28: ಮಹಾನಗರ ಪಾಲಿಕೆ ಮೇಯರ್‌ ಕವಿತಾ ಸನಿಲ್‌ ಅವರು ವಾಸವಿದ್ದ ಅಪಾರ್ಟ್‌ ಮೆಂಟ್‌ ಕಾವಲುಗಾರ ಪುಂಡಲೀಕ ಅವರ ಪತ್ನಿ ಕಮಲಾ ಹಾಗೂ ಮಕ್ಕಳಿಗೆ ಹಲ್ಲೆ ನಡೆಸಿರುವುದು ಖಂಡನೀಯ. ಈ ಹಿನ್ನೆಲೆಯಲ್ಲಿ ಮೇಯರ್‌ ಅವರು ಕೂಡಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ಆಗ್ರಹಿಸಿದೆ.

Advertisement

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೋರ್ಚಾದ ಅಧ್ಯಕ್ಷೆ ಪೂಜಾ ಪೈ, ನಾನು ಹಾಗೂ ಕಾರ್ಪೊರೇಟರ್‌ ರೂಪಾ ಡಿ. ಬಂಗೇರ ಅವರು ಅನ್ಯಾಯಕ್ಕೊಳಗಾದ ಮಹಿಳೆಗೆ ನ್ಯಾಯ ಒದಗಿಸಬೇಕೆಂಬ ನಿಟ್ಟಿನಲ್ಲಿ ಕಾವಲುಗಾರನ ಮನೆಗೆ ಭೇಟಿ ನೀಡಿ ಹಲ್ಲೆಗೊಳಗಾದ ಆತನ ಪತ್ನಿಯಿಂದ ಮಾಹಿತಿ ಸಂಗ್ರಹಿಸಿದ್ದೇವೆಯೇ ಹೊರತು ಬೇರೆ ಯಾವುದೇ ಉದ್ದೇಶವಿಲ್ಲ ಎಂದರು. 

ಮನಪಾ ಸದಸ್ಯೆ ರೂಪಾ ಡಿ. ಬಂಗೇರಾ ಮಾತನಾಡಿ, ಮೇಯರ್‌ ರವರಿಗೆ ಧೈರ್ಯ ಇದ್ದಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಘಟನೆಯ ಸಂಪೂರ್ಣ ಸಿಸಿಟಿವಿ ವೀಡಿಯೋ ಬಿಡುಗಡೆ ಮಾಡಲಿ. ಮೇಯರ್‌ ರಾಜೀನಾಮೆ ನೀಡುವಂತೆ ಕಾಂಗ್ರೆಸ್‌ ಮುಖಂಡರು ಮುಂದಾಗಬೇಕು. ಇಲ್ಲದಿದ್ದರೆ, ಮನಪಾದ ಎಲ್ಲ ಕಾಂಗ್ರೆಸ್‌ ಸದಸ್ಯರ ರಾಜೀನಾಮೆಗೆ ಮಹಿಳಾ ಮೋರ್ಚಾದವರು ಪ್ರತಿಭಟಿಸುವುದಾಗಿ ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮೋರ್ಚಾದ ನಾಯಕಿ ಮಂಜುಳಾ ರಾವ್‌, ನಮಿತಾ ಶ್ಯಾಂ, ಸಂಧ್ಯಾ ವೆಂಕಟೇಶ್‌, ಪೂರ್ಣಿಮಾ ರಾವ್‌, ಬಬಿತಾ ರವೀಂದ್ರ, ಪೂರ್ಣಿಮಾ, ಸುಮಿತ್ರ ಕರಿಯಾ, ಮೀರಾ ಕರ್ಕೇರಾ ಮೊದಲಾದವರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next