Advertisement

ಮೇಯರ್‌ ಕೇಶಕ್ಕೆ ಕತ್ತರಿ

01:20 AM Nov 09, 2019 | Team Udayavani |

ಲಾ ಪಾಜ್‌: ಬೊಲಿವಿಯಾ ಪಟ್ಟಣದಲ್ಲಿ ಪ್ರತಿಭಟನಕಾರರು ಪಟ್ಟಣದ ಮಹಿಳಾ ಮೇಯರ್‌ ಅವರನ್ನೇ ರಸ್ತೆಯಲ್ಲಿ ಎಳೆದಾಡಿ ಅವರ ಕೂದಲು ಕತ್ತರಿಸಿ, ಅವರ ಮೇಲೆ ಬಣ್ಣ ಎರಚಿ ಹಿಂಸಿಸಿದ್ದಾರೆ. ಇದಾದ ಹಲವು ಗಂಟೆಗಳ ಬಳಿಕ ಮೇಯರ್‌ ಪೇಟ್ರೀಶಿಯಾ ಆರ್ಕ್ ರನ್ನು ಪೊಲೀಸರ ವಶಕ್ಕೆ ನೀಡಲಾಗಿದೆ.

Advertisement

ಅ.20ರಂದು ವಿವಾದಿತ ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾರೂಢ ಮಾಸ್‌ ಪಾರ್ಟಿ ಮತ್ತು ವಿಪಕ್ಷದ ನಡುವೆ ನಡೆಯುತ್ತಿರುವ ಘರ್ಷಣೆ ಸಾಲಿಗೆ ಈ ಘಟನೆ ಹೊಸದಾಗಿ ಸೇರ್ಪಡೆಯಾಗಿದೆ. ಈವರೆಗೂ ನಡೆದ ಘರ್ಷಣೆಗಳಲ್ಲಿ ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next