Advertisement

ಮೇಯರ್‌-ಉಪ ಮೇಯರ್‌ ಅಧಿಕಾರ ಸ್ವೀಕಾರ

12:24 PM Aug 04, 2018 | |

ವಿಜಯಪುರ: ಬಿಜೆಪಿ ಚಿಹ್ನೆ ಮೇಲೆ ಚುನಾವಣೆಗೆ ಸ್ಪರ್ಧಿಸಿ ಸದಸ್ಯನಾಗಿ ಆಯ್ಕೆಯಾಗಿದ್ದು ಉಪ-ಮೇಯರ್‌ ಚುನಾವಣೆಯಲ್ಲಿ ಗೆದ್ದಿದ್ದೇನೆ. ಪಕ್ಷದ ನಿಷ್ಠನಾದ ನನಗೆ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತ್ರ ನನ್ನ ಪರವಾಗಿ ಮತ ಚಲಾಯಿಸಿಲ್ಲ. ಏಕೆಂದು ಅವರೇ ಸ್ಪಷ್ಟಪಡಿಸಬೇಕು ಎಂದು ನೂತನ ಉಪ ಮೇಯರ್‌ ಗೋಲಾಪ ಘಟಕಾಂಬಳೆ ಹೇಳಿದ್ದಾರೆ.

Advertisement

ಶುಕ್ರವಾರ ಪಾಲಿಕೆಯ ಕಚೇರಿಯಲ್ಲಿ ಪೂಜೆ ಸಲ್ಲಿಸಿ, ಉಪ ಮೇಯರ್‌ ಅಕಾರ ಸ್ವೀಕರಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ
ಮಾತನಾಡಿದ ಅವರು, ಪಕ್ಷ ನಿಷ್ಠನಾದ ನಾನು ಸೇರಿದಂತೆ ಕೆಲವರ ವಿರುದ್ಧ ಯತ್ನಾಳ ಅವರು ಪಕ್ಷ ವಿರೋಧಿ ಚಟುವಟಿಕೆ ಆರೋಪಿಸಿ ಹೈಕಮಾಂಡ್‌ಗೆ ಪತ್ರ ಬರೆದ‌ಂಗತಿ ನನಗೆ ತಿಳಿದಿಲ್ಲ. ಈ ಬಗ್ಗೆ ಅವರನ್ನೇ ಕೇಳಬೇಕು. ಏಕೆಂದರೆ ನಗರಕ್ಕೆ ಅವರು ಏನು ಮಾಡಿದ್ದಾರೆ, ಪಕ್ಷಕ್ಕೆ ಅವರಿಂದ ಏನಾಗಿದೆ ಎಂದು ಎಲ್ಲರಿಗೂ ಗೊತ್ತು ಎಂದು ವ್ಯಂಗ್ಯವಾಡಿದರು.

ಹಿಂದಿನ ಅವಧಿಯಲ್ಲಿ ಸಾಮಾನ್ಯ ಸಭೆ ನಡೆದಿಲ್ಲ, ಮಹಾನಗರ ಜನತೆಯ ಸಮಸ್ಯೆಗಳಿಗೆ ಸ್ಪಂದನೆ ಸಿಕ್ಕಿಲ್ಲ, ನಡೆದ ಸಭೆಗಳು ಕೂಡ ಗಂಭೀರವಾಗಿ ನಡೆದಿಲ್ಲ ಎಂಬ ದೂರುಗಳಿವೆ. ಆದರೆ ನಮ್ಮ ಅವಧಿಯಲ್ಲಿ ನಿಗದಿತವಾಗಿ ಪ್ರತಿ ತಿಂಗಳೂ ಸಾಮಾನ್ಯ ಸಭೆ ನಡೆಸಲಾಗುತ್ತದೆ, ಅಲ್ಲದೇ ಸಭೆಗಳನ್ನು ಗಂಭೀರವಾಗಿ ಹಾಗೂ ಸೂಸೂತ್ರವಾಗಿ ನಡೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಸಾಮಾನ್ಯ ಸಭೆಗೆ ಸದಸ್ಯರು ಹಾಗೂ ಅಧಿಕಾರಿಗಳು, ಪತ್ರಕರ್ತರ ಹೊರತಾಗಿ ಅನಧಿಕೃತ ವ್ಯಕ್ತಿಗಳ ಪ್ರವೇಶವನ್ನು
ಕಡ್ಡಾಯವಾಗಿ ನಿರ್ಬಂಧಿಸಲಾಗುತ್ತದೆ. ಪಕ್ಷಾತೀತವಾಗಿ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರದ ಪ್ರಗತಿಗೆ ಬದ್ಧವಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.

ಜನರ ಆಶೀರ್ವಾದದಿಂದಾಗಿ ಎರಡನೇಯ ಬಾರಿಗೆ ಉಪ-ಮೇಯರ್‌ ಹುದ್ದೆ ಅಲಂಕರಿಸುವ ಅವಕಾಶ ದೊರಕಿದೆ. ಈ ಹಿನ್ನೆಲೆಯಲ್ಲಿ ಜನತೆ ಋಣ ತೀರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ನಗರದಲ್ಲಿ ರಸ್ತೆ, ಒಳ ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಕೆಲಸ ಮಾಡುತ್ತೇನೆ.

Advertisement

ಎಂ.ಬಿ. ಪಾಟೀಲ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಮಹಾನಗರ ಪಾಲಿಕೆಗೆ 50 ಲಕ್ಷ ಕೋಟಿ ರೂ. ಅನುದಾನ
ಕೊಡಿಸಿದ್ದು, 25 ಕೋಟಿ ರೂ. ಅನುದಾನ ಬಿಡಗಡೆ ಆಗಿದೆ. ಇದಲ್ಲದೇ ವಿಶೇಷ ಪ್ಯಾಕೇಜ್‌ ತರಲು ಪ್ರಯತ್ನಿಸಲಾಗುತ್ತದೆ
ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next