Advertisement

ಎಡವಟ್ಟು ನಿರ್ಧಾರಗಳೇ ಮೊದಲೆರಡು ಸೋಲಿಗೆ ಕಾರಣ: ರೋಹಿತ್‌

08:56 PM Nov 04, 2021 | Team Udayavani |

ಅಬುಧಾಬಿ: ಆರಂಭದ ಎರಡು ಪಂದ್ಯಗಳಲ್ಲಿ ನಾವು ಕೆಲವೊಂದು ನಿರ್ಧಾರ ತೆಗೆದುಕೊಳ್ಳುವಲ್ಲಿ ಎಡವಿದ್ದು ಪಂದ್ಯಗಳಲ್ಲಿ ಸಮಸ್ಯೆ ತಂದೊಡ್ಡಿತ್ತು ಎಂದು ರೋಹಿತ್‌ ಶರ್ಮ ಹೇಳಿದ್ದಾರೆ.

Advertisement

ಅಫ್ಘಾನಿಸ್ಥಾನ ವಿರುದ್ಧದ ಪಂದ್ಯದಲ್ಲಿ ಪ್ರತಿಯೊಬ್ಬ ಆಟಗಾರರೂ ಕೂಡ ಭಿನ್ನವಾಗಿ ಆಟವಾಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಇದು ಮೊದಲ ಎರಡು ಪಂದ್ಯಗಳಲ್ಲಿಯೂ ಹೀಗೆಯೇ ಇರಬೇಕಿತ್ತು. ಆದರೆ ಅದು ಸಂಭವಿಸಲಿಲ್ಲ. ನೀವು ದೀರ್ಘ‌ಕಾಲದವರೆಗೆ ಟ್ರ್ಯಾಕ್‌ನಲ್ಲಿದ್ದಾ ಗ ಮಾತ್ರ ಇದು ಸಾಧ್ಯವಾಗುತ್ತದೆ. ನಿರ್ಧಾರ ತೆಗೆದುಕೊಳ್ಳುವಿಕೆಯೂ ಕೂಡ ಕೆಲವೊಮ್ಮೆ ಸಮಸ್ಯೆಯಾಗಬಹುದು. ಮೊದಲ ಎರಡು ಪಂದ್ಯಗಳಲ್ಲಿ ನಿರ್ಧಾರಗಳು ತಪ್ಪಾಗಿದೆ. ಅದರಿಂದ ಸರಿ ಮಾಡಿಕೊಂಡಿದ್ದೇವೆ ಎಂದು ಅಫ್ಘಾನ್‌ ವಿರುದ್ಧದ ಗೆಲುವಿನ ಬಳಿಕ ರೋಹಿತ್‌ ಹೇಳಿದ್ದಾರೆ.

ವಿಶ್ವಕಪ್‌ನಂತಹ ಮಹತ್ವದ ಟೂರ್ನಿಯ ಸಂದರ್ಭದಲ್ಲಿ ಎಲ್ಲ ಆಟಗಾರರ ಸಂಪೂರ್ಣ ಗಮನ ಈ ಟೂರ್ನಿಯ ಮೇಲಿರಬೇಕಾಗುತ್ತದೆ. ನಾವು ಮೊದಲ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅಂದ ಮಾತ್ರಕ್ಕೆ ನಮ್ಮದು ಕೆಟ್ಟ ತಂಡ ಅಥವಾ ನಾವು ಕೆಟ್ಟ ಆಟಗಾರರು ಎಂದು ಪರಿಗಣಿಸಲು ಸಾಧ್ಯವಿಲ್ಲ. ನಾವು ಈ ವರ್ಷದ ಆರಂಭದಿಂದಲೂ ತುಂಬಾ ಉತ್ತಮ ಕ್ರಿಕೆಟ್‌ ಆಡಿಕೊಂಡು ಬಂದಿದ್ದೇವೆ ಎಂದು ರೋಹಿತ್‌ ಶರ್ಮ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next