Advertisement

ಸೋನಿಯಾ ಗಾಂಧಿ ವಿದೇಶಿ ಎಂದ ಬಿಎಸ್‌ಪಿ ನಾಯಕನ ಹುದ್ದೆ ಕಿತ್ತ ಮಾಯಾವತಿ!

03:12 PM Jul 17, 2018 | Team Udayavani |

ಲಕ್ನೋ: ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ವಿದೇಶಿ ಎಂದು ಜರಿದಿದ್ದ  ಬಿಎಸ್‌ಪಿ  ರಾಷ್ಟ್ರೀಯ ಸಂಯೋಜಕ ಜೈ ಪ್ರಕಾಶ್‌ ಸಿಂಗ್‌ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ಬಿಎಸ್‌ಪಿ ಅಧಿನಾಯಕಿ  ಮಾಯಾವತಿ ವಜಾ ಮಾಡಿದ್ದಾರೆ. 

Advertisement

ಜೈ ಪ್ರಕಾಶ್‌ ಸಿಂಗ್‌ ಅವರು ‘ರಾಹುಲ್‌ ಗಾಂಧಿ ಪ್ರಧಾನಿಯಾಗಲು ಸಾಧ್ಯವಿಲ್ಲ.ಅವರ ತಾಯಿ ಸೋನಿಯಾ ಗಾಂಧಿ ವಿದೇಶಿ. ಈ ಬಾರಿ ಮಾಯಾವತಿ ಅವರು ಪ್ರಧಾನಿ’ ಎಂದಿದ್ದರು. 

ಜೈ ಪ್ರಕಾಶ್‌ ನಮ್ಮ ಪಕ್ಷದ ಸಿದ್ಧಾಂತಗಳಿಗೆ ವಿರೋಧವಾಗಿ ಮಾತನಾಡಿದ್ದಾರೆ.ಪ್ರತಿಸ್ಪರ್ಧಿ ಪಕ್ಷಗಳ ವಿರುದ್ಧ  ವೈಯಕ್ತಿಕ ಹೇಳಿಕೆಗಳನ್ನು ನೀಡಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ. ಅವರನ್ನು ಪಕ್ಷದ ಹುದ್ದೆಯಿಂದ ಕಿತ್ತು ಹಾಕಿರುವುದಾಗಿ ಮಾಯಾವತಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. 

2019 ರ ಚುನಾವಣೆಯಲ್ಲಿ ಮಹಾಮೈತ್ರಿ ಮೂಲಕ ಬಿಜೆಪಿಯನ್ನು ಸೋಲಿಸಲು ಸಜ್ಜಾಗಿರುವ ಮಾಯಾವತಿ ಪಕ್ಷದ ನಾಯಕರಿಗೆ ಮೈತ್ರಿ ಘೋಷಣೆ ಪಕ್ಷದಿಂದ ಅಧಿಕೃತವಾಗುವ ವರೆಗೆ ಯಾವುದೇ ಬಹಿರಂಗ ಹೇಳಿಕೆ ನೀಡದಂತೆ ತಾಕೀತು ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next