Advertisement
ಕಾರವಾರದ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅಂಬೇಡ್ಕರ್ ಹಾಕಿ ಕೊಟ್ಟ ಹಾದಿಯಲ್ಲಿ ನಾವು ನಡೆಯಲಿದ್ದೇವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಭೀಮ್ ಆರ್ಮಿ ಘಟಕ ಪ್ರಾರಂಭವಾಗಿದೆ. ಉತ್ತರ ಕನ್ನಡದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡುವ ಘಟನೆಗಳು ನಡೆಯುತ್ತಿವೆ, ದಲಿತರ ಜಾತಿ ಪ್ರಮಾಣ ಪತ್ರವನ್ನು ದಲಿತೇತರ ಜಾತಿಗಳು ಪಡೆಯುತ್ತಿವೆ ಎಂಬ ದೂರು ಇದೆ. ಇದರ ವಿರುದ್ಧ ನಮ್ಮ ಹೋರಾಟ ನಡೆಯಲಿದೆ ಎಂದರು.
Related Articles
ಮಾಯಾವತಿ ಬಿಜೆಪಿಮಯ ಆಗಿದ್ದಾರೆ. 82 ಜಿಲ್ಲೆಗಳಲ್ಲಿ ಬಿಎಸ್ ಪಿ ಒಬ್ಬನೇ ಶಾಸಕ ಗೆದ್ದಿಲ್ಲ. ಮಾಯಾವತಿ ಸಹ ತಮ್ಮನ ಮಗನನ್ನು ಬಿಎಸ್ಪಿಗೆ ತಂದು ಕೂರಿಸಲು ಯತ್ನಿಸಿದರು. ಮಾಯಾವತಿ ಬಿ ಎಸ್ಪಿಯ ಸಮಾಧಿ ಮಾಡಿದ್ದಾರೆ.
ಹಾಗಾಗಿ ದಲಿತರಿಗೆ ಭೀಮ್ ಆರ್ಮಿಯೇ ಆಶಾವಾದ ಎಂದರು.
Advertisement
ಕರ್ನಾಟಕದಲ್ಲಿ ಬಿಎಸ್ಪಿ ಯನ್ನು ಬೆಳಸಲಿಲ್ಲ. 35 ವರ್ಷದಿಂದ ಬಿಎಸ್ಪಿ ಇದ್ದರೂ ಬೀದರ್ ನಿಂದ ಒಬ್ಬ ಎಂಪಿ,ಕೊಳ್ಳೇಗಾಲದಿಂದ ಒಬ್ಬ ಶಾಸಕ ಇದ್ದರು. ಈಗ ಅದು ಸಹ ಇಲ್ಲ ಎಂದರು. ರಾಜಕೀಯ ಪಕ್ಷ ಸ್ಥಾಪನೆಯ ಉದ್ದೇಶ ಇದೆ. ಆದರೆ ಇದಕ್ಕೂ ಮುಂಚೆ ಸಂಘಟನೆ ಗಟ್ಟಿ ಮಾಡಲು ಪ್ರಯತ್ನ ನಡೆದಿದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷರ ನೇಮಕ:ಉತ್ತರ ಕನ್ನಡ ಭೀಮ್ ಆರ್ಮಿ ಜಿಲ್ಲಾಧ್ಯಕ್ಷರಾಗಿ ಮೇಘರಾಜ ಮೇತ್ರಿ, ಬಸವರಾಜ ಸಂಗಮೇಶ್ವರ ಉಪಾಧ್ಯಕ್ಷರಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಗಿ ರವಿ ಮಡಿವಾಳ ಹಂಚಿನಮನೆ, ಜಿಲ್ಲಾ ಕಾರ್ಯದರ್ಶಿಯಾಗಿ ವಿಲಾಸ್ ಮೇತ್ರಿ, ಮಲ್ಲಿಕಾರ್ಜುನ ಸುಣಗಾರ ಸಹ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ವಕೀಲ ಸಂದೀಪ್ ಕಾಬ್ರೇಕರ್ , ಮುಂಡಗೋಡ, ದಾಂಡೇಲಿ, ತಾಲೂಕುಗಳ ಭೀಮ್ ಆರ್ಮಿ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.