Advertisement

ಮಾಯಾವತಿ ಸೂಚನೆ ಮೇರೆಗೆ ವಿಶ್ವಾಸಮತಕ್ಕೆ ಗೈರು: ಎನ್.ಮಹೇಶ್

08:46 AM Jul 25, 2019 | Team Udayavani |

ಬೆಂಗಳೂರು: ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ತಟಸ್ಥವಾಗಿರುವಂತೆ ಪಕ್ಷದ ವರಿಷ್ಠೆ ಮಾಯಾವತಿ ಅವರು ಸೂಚಿಸಿದ್ದರು. ಆ ನಿಟ್ಟಿನಲ್ಲಿ ನಾನು ವಿಶ್ವಾಸಮತಕ್ಕೆ ಹಾಜರಾಗಿಲ್ಲ. ನಾನು ಪಕ್ಷದ ನಿಯಮವನ್ನು ಉಲ್ಲಂಘಿಸಿಲ್ಲ, ಪಕ್ಷ ವಿರೋಧಿ ಚಟುವಟಿಕೆಯನ್ನು ನಡೆಸಿಲ್ಲ ಎಂದು ಬಿಎಸ್ಪಿ ಪಕ್ಷದಿಂದ ಉಚ್ಚಾಟಿಸಲ್ಪಟ್ಟ ಶಾಸಕ ಎನ್..ಮಹೇಶ್ ಸ್ಪಷ್ಟನೆ ನೀಡಿದ್ದಾರೆ.

Advertisement

ಬುಧವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂವಹನ ಕೊರತೆಯಲ್ಲಿ ಆಗಿರುವ ಸಮಸ್ಯೆ ಇದು. ನಾನು ಟ್ವಿಟರ್ ಬಳಸಲ್ಲ. ವಿಶ್ವಾಸಮತದಲ್ಲಿ ಭಾಗವಹಿಸಿ ಬೆಂಬಲ ಸೂಚಿಸಲು ಅವರು ತಿಳಿಸಿಲ್ಲವಾಗಿತ್ತು ಎಂದರು.

ಜೂನ್ 16ರಿಂದ ನಾನು ಧ್ಯಾನ ಶಿಬಿರದಲ್ಲಿದ್ದೆ. ನನಗೆ ಯಾವುದೇ ಮಾಧ್ಯಮ ಸಂಪರ್ಕ ಕೂಡಾ ಇರಲಿಲ್ಲ. ನನಗೆ ಮಾಧ್ಯಮದ ವರದಿ ನೋಡಿ ನನ್ನ ಪಕ್ಷದಿಂದ ಉಚ್ಚಾಟಿಸಿರುವ ವಿಷಯ ತಿಳಿಯಿತು ಎಂದು ಹೇಳಿದರು.

ಈ ಬಗ್ಗೆ ಪಕ್ಷದ ವರಿಷ್ಠೆ ಮಾಯಾವತಿ ಅವರೊಂದಿಗೆ ಚರ್ಚಿಸಿ ಬಿಎಸ್ಪಿ ಪಕ್ಷದಲ್ಲಿಯೇ ಮುಂದುವರಿಯುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next