Advertisement
2011ರಲ್ಲಿ ಅಂತ್ಯವಾಗಿತ್ತು 5 ದಶಕಗಳ ಸೇನಾಡಳಿತಸುಮಾರು ಐದು ದಶಕಗಳ ಕಾಲ ಮ್ಯಾನ್ಮಾರ್ ಅನ್ನು ಅಲ್ಲಿನ ಸೇನೆಯೇ ಆಳುತ್ತಿತ್ತು. ಅದರ ದಮನಕಾರಿ ನೀತಿ ಹೇಗಿತ್ತೆಂದರೆ, ತನ್ನ ವಿರುದ್ಧ ಮಾತನಾಡುವವರನ್ನು ಒಂದೋ ಕಣ್ಮರೆ ಮಾಡುತ್ತಿತ್ತು, ಇಲ್ಲವೇ ಗೃಹಬಂಧನದಲ್ಲಿಟ್ಟು ಹಿಂಸಿಸುತ್ತಿತ್ತು. ಪ್ರಜಾಸತ್ತೆಯ ಪರವಾದ ಚಳವಳಿಯ ಮುಂದಾಳತ್ವ ವಹಿಸಿದ್ದ ಆಂಗ್‌ಸಾನ್ ಸೂಕಿ ಸೇನಾ ಮುನಿಸಿಗೆ ಒಳಗಾಗಿ 1989-2010ರ ನಡುವಿನ 21 ವರ್ಷಗಳಲ್ಲಿ ಸುಮಾರು 15 ವರ್ಷ ಗೃಹಬಂಧನದಲ್ಲೇ ಇರಬೇಕಾಯಿತು. ಗೃಹಬಂಧನದಲ್ಲಿರು ವಾಗಲೇ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರವೂ ಒಲಿದು ಬಂದಿತ್ತು.
ಯಾವಾಗ ಆಂಗ್ ಸಾನ್ ಸೂಕಿ ಗೃಹ ಬಂಧನದಿಂದ ಹೊರ ಬಂದರೋ ಅವರು ರಾಜಕೀಯವಾಗಿಯೂ ಬಲಿಷ್ಠವಾಗು ತ್ತಲೇ ಹೋದರು. 2015ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರ ಪಕ್ಷ ಅಮೋಘ ಜಯಸಾಧಿಸಿ ಅಧಿಕಾರಕ್ಕೇರಿಬಿಟ್ಟಿತು. ಆದರೆ ಸೂಕಿ ಅಧ್ಯಕ್ಷರಾಗುವುದನ್ನು ಅಲ್ಲಿನ ಸಂವಿಧಾನ ನಿರ್ಬಂಧಿಸುತ್ತದೆ(ಅವರ ದಿವಂಗತ ಪತಿ ಮತ್ತು ಮಕ್ಕಳಿಬ್ಬರೂ ವಿದೇಶಿ ಪ್ರಜೆಗಳೆಂಬ ಕಾರಣಕ್ಕೆ). ಹೀಗಾಗಿ ಅವರು ಸರಕಾರದ ಮುಖ್ಯಸ್ಥರೆಂದು (ಸ್ಟೇಟ್ ಕೌನ್ಸಲರ್) ನೇಮಕವಾದರು.
Related Articles
ಗಮನಾರ್ಹ ಸಂಗತಿಯೆಂದರೆ ಆಂಗ್ ಸಾನ್ ಸೂಕಿ ಆಡಳಿತ ಬಂದಿದ್ದರೂ ಮ್ಯಾನ್ಮಾರ್‌ನಲ್ಲಿ ಮಿಲಿಟರಿಯ ಧ್ವನಿಯೇನೂ ತಗ್ಗಿರಲಿಲ್ಲ. ಅದು ತಾನು ನಡೆದದ್ದೇ ಹಾದಿ ಎನ್ನುವ ರೀತಿಯಲ್ಲಿ ಇರುತ್ತಿತ್ತು. ರೊಹಿಂಗ್ಯಾ ಮುಸ್ಲಿಮರ ಮೇಲೆ ಮ್ಯಾನ್ಮಾರ್ ಸೇನೆ ನಡೆಸಿದ್ದ ಮಾನವಹಕ್ಕು ಉಲ್ಲಂಘನೆಗಳೆಲ್ಲವನ್ನೂ ಸೂಕಿ ನೋಡಿಯೂ ನೋಡದಂತಿದ್ದರು ಎನ್ನುವ ಆರೋಪ ಜಾಗತಿಕ ವಲಯದಿಂದ ವ್ಯಕ್ತವಾಗುತ್ತಲೇ ಬಂದಿದೆ. ಒಂದು ಸಂದರ್ಶನದಲ್ಲಂತೂ ಸೂಕಿ, ರೊಹಿಂಗ್ಯಾಗಳನ್ನು ಮ್ಯಾನ್ಮಾರ್ ನಾಗರಿಕರು ಎಂದು ಒಪ್ಪಿಕೊಳ್ಳಬೇಕೋ ಇಲ್ಲವೋ ನನಗೆ ತಿಳಿಯದು ಎಂದು ಹೇಳಿದ್ದರು. ಆಗ ಮಾನವಹಕ್ಕು ಸಂಘಟನೆಗಳೆಲ್ಲ ಅವರಿಗೆ ನೀಡಲಾಗಿದ್ದ ನೊಬೆಲ್ ಶಾಂತಿ ಪುರಸ್ಕಾರವನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿಯೂ ಇದ್ದವು. ಈ ವಿಚಾರದಲ್ಲಿ
ತಮ್ಮ ಅಂತಾರಾಷ್ಟ್ರೀಯ ವರ್ಚಸ್ಸು ಕಡಿಮೆಯಾಗುತ್ತಿದೆ ಎನ್ನುವುದು ಅರಿವಾಗುತ್ತಿದ್ದಂತೆಯೇ ಅವರು ಮಿಲಿಟರಿ
ಪಾರಮ್ಯವನ್ನು ವಿರೋಧಿಸಲಾರಂಭಿಸಿದರು ಎನ್ನಲಾಗುತ್ತದೆ. ಈ ಸಂಗತಿಯೇ ಸೂಕಿಯ ಮೇಲೆ ಮಿಲಿಟರಿಗೆ ಮತ್ತೆ ಆಕ್ರೋಶ
ಮಡುಗಟ್ಟಲು ಕಾರಣ ಎನ್ನುತ್ತಾರೆ ಪರಿಣತರು.
Advertisement
2020ರ ಚುನಾವಣೆ ಸೇನೆಗೆ ತಂದಿದ್ದ ಅಚ್ಚರಿ2020ರ ನವೆಂಬರ್ ತಿಂಗಳಲ್ಲಿ ಮ್ಯಾನ್ಮಾರ್‌ನಲ್ಲಿ ಮತ್ತೆ ಅಧ್ಯಕ್ಷೀಯ ಚುನಾವಣೆಗಳು ಬರಲಿದ್ದವು. ಅಷ್ಟರಲ್ಲಾಗಲೇ ಕೋವಿಡ್‌ನಿಂದಾಗಿ ಆ ದೇಶದ ಆರ್ಥಿಕ ಆರೋಗ್ಯವೂ ಹಳ್ಳ ಹಿಡಿದಿತ್ತು. ಹೀಗಾಗಿ ಚುನಾವಣೆ ನಡೆದರೆ ಸೂಕಿ ಸೋಲುವುದು ಖಚಿತ ಎಂಬ ವಿಶ್ವಾಸದಲ್ಲಿತ್ತು ಸೇನೆ. ಆದರೆ ಅಚ್ಚರಿಯೆಂಬಂತೆ ಕಳೆದ ವರ್ಷದ ಚುನಾವಣೆಯಲ್ಲೂ ಸೂಕಿ ನೇತೃತ್ವದ ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ), ಮಿಲಿಟರಿ ಸ್ಥಾಪಿತ ಯುಎಸ್‌ಡಿಪಿ ವಿರುದ್ಧ ಮತ್ತೂಮ್ಮೆ ಅಮೋಘ ಜಯ ಪಡೆದುಬಿಟ್ಟಿತು. ಈ ಗೆಲುವು ಸೂಕಿ ಅವರ ಧ್ವನಿಯನ್ನು ಹೆಚ್ಚಿಸಿರುವುದು ಸುಳ್ಳಲ್ಲ. ಹೀಗಾಗಿ ಏನಕೇನ ಅವರನ್ನು ಅಧಿಕಾರದಿಂದ ದೂರವಿಟ್ಟರೇ ತಮಗೆ ಉಳಿಗಾಲ ಎಂದು ಭಾವಿಸಿರುವ ಸೇನೆ, 2020ರ ಚುನಾವಣೆಯಲ್ಲಿ ಎನ್‌ಎಲ್‌ಡಿ ಪಕ್ಷ ವ್ಯಾಪಕ ಅಕ್ರಮ ಎಸಗಿದೆ ಎಂದು ಆರೋಪಿಸಿ, ಈಗ ಸೂಕಿ ಮತ್ತವರ ಪಕ್ಷದ ಪ್ರಮುಖ ನಾಯಕರನ್ನು ಬಂಧಿಸಿ, ಸೇನಾಡಳಿತ ಜಾರಿ ಮಾಡಿದೆ.