Advertisement
ಮಾಯಾಂಕ್ ಯಾದವ್ ಅವರ ವೇಗದ ಬೌಲಿಂಗ್ ವಿಶ್ವದ ಸಮಕಾ ಲೀನ ವೇಗಿಗಳಾದ ಕಾಗಿಸೊ ರಬಾಡ, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಮೊದಲಾದವರ ಪ್ರಶಂಸೆಗೆ ಪಾತ್ರವಾಗಿದೆ. ಮಾಯಾಂಕ್ ಭಾರತದ ವಿಶ್ವಕಪ್ ತಂಡದಲ್ಲಿರಬೇಕು ಎಂಬುದು ಎಲ್ಲರ ಹಾರೈಕೆಯೂ ಆಗಿದೆ.
ಮಾಯಾಂಕ್ ಯಾದವ್ ದೇಶೀಯ ಕ್ರಿಕೆಟ್‌ನಲ್ಲಿ ದಿಲ್ಲಿ ತಂಡವನ್ನು ಪ್ರತಿನಿಧಿಸು ತ್ತಿದ್ದಾರೆ. ಸೀನಿಯರ್ ಬೌಲರ್‌ಗಳಾದ ಇಶಾಂತ್ ಶರ್ಮ, ನವದೀಪ್ ಸೈನಿ ಅವರು ನೀಡಿದ ಸಲಹೆ ತನ್ನ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನುತ್ತಾರೆ.
Related Articles
Advertisement
“ವೇಗದ ಎಸೆತಗಳೊಂದಿಗೆ ವಿಕೆಟ್ ಕೆಡವಿ ತಂಡದ ಯಶಸ್ಸಿಗೆ ಕೊಡುಗೆ ಸಲ್ಲಿಸುವುದು ನನ್ನ ಪ್ರಮುಖ ಗುರಿ. ಆದರೆ ಇಂಥ ವೇಗದ ಎಸೆತಗಳ ವೇಳೆ ಪೇಸ್, ಲೈನ್-ಲೆಂತ್ ಕಾಪಾಡಿ ಕೊಳ್ಳುವುದು ಅತೀ ಮುಖ್ಯ. ಬೌಲಿಂಗ್ ವೇಳೆ ವೇಗದ ಬಗ್ಗೆ ನಾನು ಗಮನ ಹರಿಸುವುದಿಲ್ಲ. ಪಂದ್ಯದ ಬಳಿಕ ಜನರಲ್ಲಿ ನನ್ನ ವೇಗದ ಬಗ್ಗೆ ಕೇಳಿ ತಿಳಿದುಕೊಳ್ಳುತ್ತೇನೆ’ ಎಂಬುದಾಗಿ ಮಾಯಾಂಕ್ ಯಾದವ್ ಹೇಳಿದರು.
“ಅತೀ ವೇಗದ ಬೌಲರ್ ಆಗುವು ದಕ್ಕಿಂತ ಅತ್ಯುತ್ತಮ ಬೌಲರ್ ಆಗ ಬೇಕೆಂಬುದು ನನ್ನ ಕನಸು. ಇದೇ ಯಶಸ್ಸು ಕಾಯ್ದುಕೊಂಡು ಭಾರತ ತಂಡದ ಪರ ಆಡುವುದು ನನ್ನ ಗುರಿ. ಮುಂದಿರುವುದು ಟಿ20 ವಿಶ್ವಕಪ್. ನಿರೀಕ್ಷೆಯಂತೂ ಇದೆ. ಏನಾಗುತ್ತದೋ ನೋಡೋಣ. ಸದ್ಯದ ಯೋಚನೆ ಐಪಿ ಎಲ್ ಮಾತ್ರ’ ಎಂದಿದ್ದಾರೆ ಮಾಯಾಂಕ್ ಯಾದವ್.
ಮಾಯಾಂಕ್ ಹಾದಿ…ಮಾಯಾಂಕ್ ಪ್ರಭು ಯಾದವ್, ಕೆಲವು ವರ್ಷಗಳ ಹಿಂದೆ ಇಂಥದ್ದೊಂದು ಕಲ್ಪನೆ ಮಾಡುವ ಸ್ಥಿತಿಯಲ್ಲೂ ಇರಲಿಲ್ಲ. 7 ವರ್ಷಗಳ ಹಿಂದೆ ಹೊಸದಿಲ್ಲಿ ಸಾನೆಟ್ ಕ್ರಿಕೆಟ್ ಕ್ಲಬ್‌ಗ ಕಾಲಿಟ್ಟಾಗ ಅವರಿಗೆ ಕೇವಲ 14 ವರ್ಷ. ಕೃಶ ಶರೀರ ಹೊಂದಿದ್ದ ಮಾಯಾಂಕ್ ಬಳಿ ಯೋಗ್ಯವಾದ ಶೂ ಕೂಡ ಇರಲಿಲ್ಲ. ಸಾನೆಟ್ ಕ್ಲಬ್‌ಗೆ ಒಬ್ಬ ಒಳ್ಳೆಯ ಬೌಲರ್ ಬೇಕಿತ್ತು. ಅದೇ ವೇಳೆ ಮಾಯಾಂಕ್ ಕ್ಲಬ್ ಪ್ರವೇಶಿಸಿದ್ದರು. ಅವರ ತಂದೆ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು, ಕುಟುಂಬದ ದಿನದ ಊಟಕ್ಕೆ ವ್ಯವಸ್ಥೆ ಮಾಡುತ್ತಿದ್ದರು. ಸಾನೆಟ್ ಕ್ಲಬ್‌ನ ತಾರಕ್ ಸಿನ್ಹಾ ಇವರ ಮೊದಲ ಕೋಚ್.