Advertisement

ಅಲ್ಪ ಮೊತ್ತಕ್ಕೆ ಔಟಾದರೂ ಐತಿಹಾಸಿಕ ದಾಖಲೆ ಬರೆದ ಮಯಾಂಕ್ –ಪೃಥ್ವಿ ಶಾ ಆರಂಭಿಕ ಜೋಡಿ

09:24 AM Feb 06, 2020 | Mithun PG |

ಹ್ಯಾಮಿಲ್ಟನ್: ನ್ಯೂಜಿಲ್ಯಾಂಡ್ ವಿರುದ್ದ ಸೇಡನ್ ಪಾರ್ಕ್ ನಲ್ಲಿ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ಭಾರತದ ಆರಂಭಿಕರಿಬ್ಬರು ವಿನೂತನ ದಾಖಲೆ ಬರೆದಿದ್ದಾರೆ. ಭಾರತದ ಏಕದಿನದ ಇತಿಹಾಸದಲ್ಲಿ ಮಯಾಂಕ್ ಅಗರ್ವಾಲ್ ಮತ್ತು ಪೃಥ್ವಿ ಶಾ ಏಕದಿನಕ್ಕೆ ಒಟ್ಟಿಗೆ ಪದಾರ್ಪಣೆ ಮಾಡಿ ಇನ್ನಿಂಗ್ಸ್ ಆರಂಭಿಸಿದ 4ನೇ ಜೋಡಿ ಎನಿಸಿಕೊಂಡಿದೆ.

Advertisement

ಕ್ಯಾಪ್ಟನ್ ಕೊಹ್ಲಿ ಈ ನೂತನ ಪ್ರಯೋಗದ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರು. ಕೆ.,ಎಲ್ ರಾಹುಲ್ ಅವರನ್ನು ಓಪನಿಂಗ್ ಬದಲು 4ನೇ ಸ್ಥಾನದಲ್ಲಿ ಆಡಿಸುವ ಮಹತ್ವದ ತೀರ್ಮಾನವನ್ನು ಕೂಡ ಕೈಗೊಂಡಿದ್ದರು.

2016ರಲ್ಲಿ ಕೆ.ಎಲ್ ರಾಹುಲ್ ಮತ್ತು ಕರುಣ್ ನಾಯರ್ ಜಿಂಬಾಬ್ವೆ ಎದುರು ಪದಾರ್ಪಣೆ ಮಾಡಿ ಇನ್ನಿಂಗ್ಸ್ ಆರಂಭಿಸಿದ್ದರು. ಅದಕ್ಕೂ ಮೊದಲು 1974ರಲ್ಲಿ ಇಂಗ್ಲೆಂಡ್ ವಿರುದ್ಧ ಸುನೀಲ್ ಗಾವಸ್ಕರ್-ಸುಧೀರ್ ನಾಯಕ್, 1976ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಪಾರ್ಥಸಾರಥಿ ಶರ್ಮ-ದಿಲೀಪ್ ವೆಂಗ್ ಸರ್ಕಾರ್ ಒಟ್ಟಿಗೆ ಪದಾರ್ಪಣೆ ಮಾಡಿರುವುದು ಇಲ್ಲಿವರೆಗಿನ ದಾಖಲೆಯಾಗಿತ್ತು.

ಇಂದಿನ ಪಂದ್ಯದಲ್ಲಿ ಆರಂಭಿಕರಾದ ಮಯಾಂಕ್ ಮತ್ತು ಪೃಥ್ವಿ ಶಾ ಅಲ್ಪ ಮೊತ್ತಕ್ಕೆ ಔಟಾದಾರೂ ಅರ್ಧಶತಕದ ಜೊತೆಯಾಟ ನೀಡಿದರು. 21 ಎಸೆತಗಳಲ್ಲಿ 3 ಬೌಂಡರಿ ಸೇರಿ 20 ರನ್ ದಾಖಲಿಸಿದ್ದ ಪೃಥ್ವಿ ಶಾ  8ನೇ ಓವರ್ ನಲ್ಲಿ ಗ್ರ್ಯಾಂಡ್ ಹೋಮ್  ಎಸೆತಕ್ಕೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಮಯಾಂಕ್ ಕೂಡ 32 ರನ್ ಗಳಿಸಿ ಸೌಥೀಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next