Advertisement

ಮಾಯಾಂಕ್‌ ಎಂಬ ಭರವಸೆಯ ಬ್ಯಾಟ್ಸ್‌ಮನ್‌

11:55 PM Feb 15, 2019 | |

ಆಸ್ಟ್ರೇಲಿಯ ವಿರುದ್ಧ ಕಾಂಗರೂ ನೆಲದಲ್ಲಿ ನಡೆದಿದ್ದ ಟೆಸ್ಟ್‌ ಸರಣಿಯಲ್ಲಿ ಅಬ್ಬರಿಸಿದ ಮಾಯಾಂಕ್‌ ಭಾರೀ ಸದ್ದು ಮಾಡಿದ್ದರು. ಈಗ ವಿದರ್ಭ ವಿರುದ್ಧ ಇರಾನಿ ಟ್ರೋಫಿಯಲ್ಲಿ ಶೇಷ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಮಾಯಾಂಕ್‌ ಅದ್ಭುತ ಫಾರ್ಮ್ ಪ್ರದರ್ಶಿಸುತ್ತಿದ್ದಾರೆ. 

Advertisement

ಮೊದಲ ಇನಿಂಗ್ಸ್‌ನಲ್ಲಿ 95 ರನ್‌ ಸಿಡಿಸಿರುವ ಮಾಯಾಂಕ್‌ ಮತ್ತೂಮ್ಮೆ ತನ್ನ ಸಾಮರ್ಥ್ಯವನ್ನು ಸಾರಿದ್ದಾರೆ.  ಟೆಸ್ಟ್‌ನಲ್ಲಿ ಅನನ್ಯ ಪ್ರತಿಭೆ ಪ್ರದರ್ಶಿಸಿರುವ ಮಾಯಾಂಕ್‌ಗೆ ಇನ್ನೂ ಏಕದಿನ, ಟಿ20 ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಶೀಘ್ರದಲ್ಲೇ ಅಂತಹ ಅವಕಾಶ ಸಿಗಲಿ, ವಿಶ್ವಕಪ್‌ ಸಂಭಾವ್ಯರ ತಂಡದಲ್ಲಿ ಮಾಯಾಂಕ್‌ ಹೆಸರು ಕೂಡ ಇರಲಿ ಎನ್ನುವುದು ಅಭಿಮಾನಿಗಳ ಹಾರೈಕೆ. 
ರಾಹುಲ್‌ ಬದಲಿಗೆ ಸಿಕ್ಕಿದ್ದ ಅವಕಾಶ: ಟೆಸ್ಟ್‌ ಕ್ರಿಕೆಟ್‌ಗೆ ಆಸ್ಟ್ರೇಲಿಯದಲ್ಲಿ ಪದಾರ್ಪಣೆ ಮಾಡಿದ್ದ ಮಾಯಾಂಕ್‌ ಅಗರ್ವಾಲ್‌  ಮೊದಲ ಪ್ರಯತ್ನದÇÉೇ ಯಶ ಕಂಡಿ¨ªಾರೆ. ಎರಡೂ ಇನಿಂಗ್ಸ್‌ಗಳಲ್ಲೂ ದಿಟ್ಟವಾಗಿ ಬ್ಯಾಟ್‌ ಬೀಸಿ ಮಾಯಾಂಕ್‌ ಟೀಂ ಇಂಡಿಯಾದ ಭವಿಷ್ಯದ ಆರಂಭಿಕನಾಗಿ ಭದ್ರವಾಗಿ ನೆಲೆ ನಿಲ್ಲುವ ಸೂಚನೆ ನೀಡಿದ್ದಾರೆ. ಇದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ಸಂಗತಿಯೇ ಸರಿ. ಕಿರಿಯರ ಕ್ರಿಕೆಟ್‌ ನಿಂದ ರಣಜಿ ಕ್ರಿಕೆಟ್‌ ತನಕ ಸಾಗಿ ಬಂದು, ಇದೀಗ ಭಾರತೀಯ ತಂಡ ಸೇರಿಕೊಂಡಿರುವ ಮಾಯಾಂಕ್‌ ಸಾಧನೆಗೆ ಉಘೇ ಎನ್ನಲೇಬೇಕು.

ಕೆ.ಎಲ್‌ .ರಾಹುಲ್‌ -ಮುರಳಿ ವಿಜಯ… ಆರಂಭಿಕರಾಗಿ ಮೊದಲ ಎರಡು ಟೆಸ್ಟ್‌ಗಳಲ್ಲಿ ಕಾಂಗರೂಗಳ ಎದುರು ಅಷ್ಟೊಂದು ಉತ್ತಮ ನಿರ್ವಹಣೆ ನೀಡಿರಲಿಲ್ಲ. ಇದು ತಂಡದ ಮೇಲೆ ಸಹಜವಾಗಿಯೇ ಒತ್ತಡ ಹೆಚ್ಚು ಮಾಡಿತ್ತು. 2ನೇ ಟೆಸ್ಟ್‌ನಲ್ಲಿ ತಂಡ ಸೋಲಲು ಇದೂ ಒಂದು ಕಾರಣವಾಯಿತು. ಇದರಿಂದ ಸೂಕ್ತ ಆರಂಭಿಕರು ತಂಡಕ್ಕೆ ಬೇಕು ಎನ್ನುವ ಒತ್ತಡ ಕೂಡ ಹೆಚ್ಚಾಯಿತು. ಈ ವೇಳೆ ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಯಾವ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎನ್ನುವ ಚರ್ಚೆ ನಡೆಸಿತು. ತಕ್ಷಣ ಕರೆ ಬಂದದ್ದು ರಾಜ್ಯದ ಪ್ರತಿಭಾವಂತ ಬ್ಯಾಟ್ಸ್‌ಮನ್‌ ಮಾಯಾಂಕ್‌ಗೆ. ಟೆಸ್ಟ್‌ ತಂಡಕ್ಕೆ ಈಗಾಗಲೇ ಆಯ್ಕೆಯಾಗಿ ಕೆಲವು ಪಂದ್ಯ ಆಡಬೇಕಿದ್ದ ಮಾಯಾಂಕ್‌ಗೆ ಕೆಲವೊಂದು ಅಡಚಣೆಗಳಿಂದ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಈ ಸಲ ಅವಕಾಶ ತಪ್ಪಿಸಲು ಯಾರಿಗೂ ಸಾಧ್ಯವಾಗಲಿಲ್ಲ. ಮಾಯಾಂಕ್‌ ಆಡಿಯೇ ಬಿಟ್ಟರು. ಮೊದಲ ಇನಿಂಗ್ಸ್‌ನಲ್ಲಿ 76 ರನ್‌ ಸಿಡಿಸಿ ಗಮನ ಸೆಳೆದರು. ಎರಡನೇ ಇನಿಂಗ್ಸ್‌ನಲ್ಲಿ 42 ರನ್‌ ಬಾರಿಸಿ ತಂಡದ ಗುರಿ ಹೆಚ್ಚಿಸಲು ನೆರವಾಗಿದ್ದರು. ಇವರ ಸಾಹಸದ ನೆರವಿನಿಂದ ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ಪಾರಮ್ಯ ಸಾಧಿಸಲು ಸಾಧ್ಯವಾಯಿತು. 

ಎಲ್ಲ ಟೀಕೆಗೂ ಉತ್ತರಿಸಿದ ಮಾಯಾಂಕ್‌: ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟಗಳಲ್ಲಿ ಟೀಕೆ ವ್ಯಕ್ತವಾಗುವುದು ಸಾಮಾನ್ಯ. ಅಂತಹುದೇ ಸನ್ನಿವೇಶವನ್ನು ಮಾಯಾಂಕ್‌ ಕೂಡ ಅನುಭವಿಸಿದರು. ಹೌದು, ಮಾಯಾಂಕ್‌ ಇನ್ನೇನು ಮೊದಲ ಟೆಸ್ಟ್‌ ಪಂದ್ಯದಲ್ಲಿ ಬ್ಯಾಟಿಂಗ್‌ ಆರಂಭಿಸಬೇಕಿತ್ತು. ಈ ಹೊತ್ತಿಗೆ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಹಾಲಿ ಕಮೆಂಟೇಟರ್‌ ಕೆರ್ರಿ ಓ ಕೀಫ್ ಬಾಂಬ… ಒಂದನ್ನು ಸಿಡಿಸಿಯೇ ಬಿಟ್ಟರು. ಮಾಯಾಂಕ್‌ ರಣಜಿ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ್ದು ಯಾವುದೋ ಹೋಟೆಲ್‌ ವೇಟರ್‌ಗಳ ಮುಂದೆ ಇರಬೇಕು ಎಂದಿದ್ದರು. ಕೀಫ್ ಟೀಕೆಗೆ ಅದೇ ದಿನ 76 ರನ್‌ ಬಾರಿಸುವ ಮೂಲಕ ಮಾಯಾಂಕ್‌ ಉತ್ತರ ನೀಡಿದ್ದರು. ಎರಡನೇ ಇನಿಂಗ್ಸ್‌ನಲ್ಲೂ ಮತ್ತೂಂದು ಸುಂದರ ಇನಿಂಗ್ಸ್‌ ಕಟ್ಟಿದರು. ಕೀಫ್ ಟೀಕೆಗೆ ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾಜಿ ಹಾಲಿ ಕ್ರಿಕೆಟಿಗರಿಂದ ವ್ಯಾಪಕ ಟೀಕೆ ವ್ಯಕ್ತವಾಯಿತು. ಕೀಫ್ ಕೊನೆಗೆ ಒತ್ತಡಕ್ಕೆ ಮಣಿದು ಕ್ಷಮೆಯನ್ನೂ ಕೇಳಿದ್ದರು. 

ಟಿ20ಯಲ್ಲೂ ಅನುಭವಿ
  ಮಾಯಾಂಕ್‌ ಭಾರತ ತಂಡವನ್ನು ಹೊರತುಪಡಿಸಿದಂತೆ ಐಪಿಎಲ್‌   (ಇಂಡಿಯನ್‌ ಪ್ರೀಮಿಯರ್‌ ಲೀಗ್‌) ಟಿ20 ಪ್ರಮುಖ ತಂಡಗಳಾದ ಡೆಲ್ಲಿ ಡೇರ್‌ ಡೆವಿಲ್ಸ, ರಾಯಲ್‌   ಚಾಲೆಂಜರ್ ಬೆಂಗಳೂರು, ರೈಸಿಂಗ್‌ ಪುಣೆ ಸೂಪರ್‌ ಜೈಂಟ್ಸ್‌ ಹಾಗೂ ಕಿಂಗ್ಸ್‌ ಇಲೆವೆನ್‌ ಪಂಜಾಬ ತಂಡದ ಪರ ಆಡಿದ್ದಾರೆ. ಐಪಿಎಲ… ನಲ್ಲಿ ಶ್ರೇಷ್ಠ ನಿರ್ವಹಣೆ ನೀಡಿ ಗಮನ ಸೆಳೆದಿದ್ದಾರೆ. ಉಳಿದಂತೆ ರಣಜಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ತ್ರಿಶತಕವನ್ನೂ ಭಾರಿಸಿ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ ಹಲವು ಸಲ ತಂಡವನ್ನು ಗೆಲ್ಲಿಸಲು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಭಾರತ ಎ ತಂಡ ಪ್ರತಿನಿಧಿಸಿದ್ದಾರೆ. 19 ವರ್ಷ ವಯೋಮಿತಿಯೊಳಗಿನ ಭಾರತ ತಂಡ ಹಾಗೂ 19 ವರ್ಷ ವಯೋಮಿತಿಯೊಳಗಿನ ರಾಜ್ಯ ತಂಡವನ್ನು ಪ್ರತಿನಿಧಿಸಿ ಗಮನ ಸೆಳೆಯುವ ಆಟವನ್ನು ಆಡಿದ್ದಾರೆ.  

Advertisement

ಯಾರಿವರು ಮಾಯಾಂಕ್‌?
ಪೂರ್ಣ ಹೆಸರು ಮಾಯಾಂಕ್‌ ಅನುರಾಗ್‌ ಅಗರ್ವಾಲ್‌  . 1991ರಲ್ಲಿ ಬೆಂಗಳೂರಿನಲ್ಲಿ ಜನನ. ಅವರಿಗೆ 27 ವರುಷ. ಟೆಸ್ಟ್‌ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ರಣಜಿ ಕ್ರಿಕೆಟ…ನಲ್ಲಿ 47 ಪಂದ್ಯ ಆಡಿದ್ದಾರೆ. ಒಟ್ಟು 8 ಶತಕ ಹಾಗೂ 21 ಅರ್ಧಶತಕ ಬಾರಿಸಿ¨ªಾರೆ. ಒಟ್ಟಾರೆ 3842 ರನ್‌ ಬಾರಿಸಿದ್ದಾರೆ. ಅಜೇಯ 304 ರನ್‌ ವೈಯಕ್ತಿಕ ಶ್ರೇಷ್ಠ ರನ್‌.  ಒಟ್ಟು 57ಲಿಸ್ಟ್‌ “ಎ’ ಪಂದ್ಯಗಳನ್ನು ಆಡಿದ್ದಾರೆ. ಒಟ್ಟಾರೆ 3605 ರನ್‌ ಗಳಿಸಿ¨ªಾರೆ. 12 ಶತಕ ಮತ್ತು 14 ಅರ್ಧಶತಕ ಸಿಡಿಸಿದ್ದಾರೆ. ಇದುವರೆಗೆ ಐಪಿಎಲ್‌   ಸೇರಿದಂತೆ ದೇಶಿ ಕ್ರಿಕೆಟ್‌ ಕೂಟದಲ್ಲಿ 111 ಪಂದ್ಯ ಆಡಿದ್ದಾರೆ. 111 ರನ್‌ ವೈಯಕ್ತಿಕ ಶ್ರೇಷ್ಠ ಬ್ಯಾಟಿಂಗ್‌. 1ಶತಕ, 15 ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next