Advertisement
ಹೌದು, ಬೆಂಗಳೂರಿನಲ್ಲಿ ‘ಎ’ ತಂಡಗಳ ನಡುವಿನ ಕದನದಲ್ಲಿ ಭಾರತ ‘ಎ’ ತಂಡವನ್ನು ಪ್ರತಿನಿ ಸಿದ್ದ ಮಾಯಾಂಕ್ ಅಗರ್ವಾಲ್ ಮೊದಲ ಇನಿಂಗ್ಸ್‌ನಲ್ಲಿ ಪ್ರಚಂಡ ದ್ವಿಶತಕ ಸಿಡಿಸಿದ್ದರು. ಒಟ್ಟಾರೆ 251 ಎಸೆತ ಎದುರಿಸಿದ್ದ ಮಾಯಾಂಕ್ 371 ನಿಮಿಷಗಳ ಕಾಲ ಕ್ರೀಸ್‌ನಲ್ಲಿ ನಿಂತು ಬರೋಬ್ಬರಿ 31 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನೊಂದಿಗೆ 220 ರನ್ ಚಚ್ಚಿದ್ದರು. ಇದೀಗ ಅವರ ಸಿಡಿಲಬ್ಬರದ ಬ್ಯಾಟಿಂಗ್ ರಾಷ್ಟ್ರೀಯ ಆಯ್ಕೆಗಾರರ ಗಮನ ಸೆಳೆದಿದೆ.
ಒಂದು ಕಾಲದಲ್ಲಿ ಭಾರತ ಟೆಸ್ಟ್ ತಂಡದಲ್ಲಿ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ವೆಂಕಟೇಶ್ ಪ್ರಸಾದ್, ಸುನೀಲ್ ಜೋಶಿಯಂತಹ ದಿಗ್ಗಜರಿದ್ದರು. ಅವರು ನಿವೃತ್ತಿ ಹೇಳಿದ ಬಳಿಕ ತಂಡದಲ್ಲಿ ಕರ್ನಾಟಕ ಬ್ಯಾಟ್ಸ್‌ಮನ್‌ಗಳಿಗೆ ಅವಕಾಶ ಸಿಕ್ಕಿರುವುದಿಲ್ಲ. ಇತ್ತೀಚೆಗೆ ಕೆ.ಎಲ್. ರಾಹುಲ್ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಮಿಂಚುವ ಮೂಲಕ ಕೊರತೆಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸುವ ಪ್ರಯತ್ನ ನಡೆಸಿದ್ದಾರೆ. ಇದೀಗ ಆಪ್ರಿಕಾ ‘ಎ’ ತಂಡದ ವಿರುದ್ಧ ದ್ವಿಶತಕ ಸಿಡಿಸಿರುವುದರಿಂದ ಮುಂಬರುವ ಟೆಸ್ಟ್ ಸರಣಿಯಲ್ಲಿ ಮಾಯಾಂಕ್‌ಗೆ ಸ್ಥಾನ ಸಿಗಬಹುದಾದ ಸಾಧ್ಯತೆಯನ್ನು ಹೆಚ್ಚಿಸಿದೆ. ಸದ್ಯ ಟೀಂ ಇಂಡಿಯಾದಲ್ಲಿ ಟೆಸ್ಟ್‌ಗೆ ಬೇಕಾದಂತಹ ಬ್ಯಾಟ್ಸ್‌ಮನ್‌ಗಳಿದ್ದರೂ ಚೇತೇಶ್ವರ ಪೂಜಾರ, ಶಿಖರ್ ಧವನ್ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ಮಾಯಾಂಕ್ ಹೆಸರು ಆಯ್ಕೆ ಸಮಿತಿ ಮುಂದೆ ಸದ್ದು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಾಯಾಂಕ್ ಸಾಧನೆ ಹೇಗಿದೆ?
ಮಾಯಾಂಕ್ ಇದುವರೆಗೆ ಟೆಸ್ಟ್ ಕ್ರಿಕೆಟ್ ಆಡಿಲ್ಲ. ಆದರೆ 111 ಟಿ20 ಪಂದ್ಯವನ್ನಾಡಿ 1 ಶತಕ, 15 ಅರ್ಧಶತಕ ನೆರವಿನೊಂದಿಗೆ ಒಟ್ಟಾರೆ 2340 ರನ್‌ಗಳಿಸಿದ್ದಾರೆ. ಇನ್ನು 41 ಪ್ರಥಮ ದರ್ಜೆ ಕ್ರಿಕೆಟ್‌ನಿಂದ 8 ಶತಕ, 17 ಅರ್ಧಶತಕದಿಂದ ಒಟ್ಟು 3217 ರನ್‌ಗಳಿಸಿದ್ದಾರೆ. ಇದರಲ್ಲಿ ಗರಿಷ್ಠ ರನ್ ಅಂದರೆ ಅಜೇಯ 304 ರನ್, ಉಳಿದಂತೆ 63 ಲಿಸ್ಟ್ ‘ಎ’ ಕ್ರಿಕೆಟ್ ಪಂದ್ಯದಲ್ಲಿ ಆಡಿ 11 ಶತಕ, 12 ಅರ್ಧಶತಕ ನೆರವಿಂದ ಒಟ್ಟು 3124 ರನ್‌ಗಳಿಸಿದ್ದಾರೆ.
Related Articles
ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಕೂಟದ ಪ್ರಮುಖ ತಂಡಗಳಾದ ಡೆಲ್ಲಿ ಡೇರ್ ಡೆವಿಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್, ರಾಯಲ್ ಚಾಲೆಂಜರ್ ಬೆಂಗಳೂರು, ಭಾರತ ‘ಎ’, ಭಾರತ ಕಿರಿಯರ ತಂಡ ಮತ್ತು ಕರ್ನಾಟಕ 19 ವರ್ಷ ವಯೋಮಿತಿಯೊಳಗಿನ ತಂಡವನ್ನು ಪ್ರತಿನಿ ಧಿಸಿದ್ದಾರೆ.
Advertisement
ಮಾಯಾಂಕ್ ಸಾಧನೆ ಪ್ರಥಮ ದರ್ಜೆ: ಪಂದ್ಯ- 41, ರನ್- 3217
ಲಿಸ್ಟ್ “ಎ’: ಪಂದ್ಯ- 63, ರನ್-3124
ಟಿ20: ಪಂದ್ಯ-111, ರನ್- 234 ಯಾರಿವರು ಮಾಯಾಂಕ್?
ಪೂರ್ಣ ಹೆಸರು ಮಾಯಾಂಕ್ ಅನುರಾಗ್ ಅಗರ್ವಾಲ್.ಫೆ.16, 1991ರಲ್ಲಿ ಅವರು ಬೆಂಗಳೂರಿನಲ್ಲಿ ಜನಿಸಿದರು. ಪ್ರಸ್ತುತ ಅವರಿಗೆ 27 ವರ್ಷ. ಸಣ್ಣ ವಯಸ್ಸಿನಲ್ಲೇ ಮಾಯಾಂಕ್ ಕ್ರಿಕೆಟ್‌ನಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. 13 ವರ್ಷ ವಯೋಮಿತಿಯೊಳಗಿನವರ ಕ್ರಿಕೆಟ್ ಪಂದ್ಯದಲ್ಲಿ ಬಿಷಪ್ ಕಾಟನ್ ಸ್ಕೂಲ್ ತಂಡವನ್ನು ಪ್ರತಿನಿಧಿಸಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಕೂಚ್ ಬೆಹರ್ ಕಪ್ ಕೂಟದಲ್ಲಿ 5 ಪಂದ್ಯಗಳಿಂದ 432 ರನ್ ಸಿಡಿಸಿದ್ದರು. ಅದರಲ್ಲೂ 19 ವರ್ಷ ವಯೋಮಿತಿಯೊಳಗಿನ ಭಾರತ ತಂಡವನ್ನು ಪ್ರತಿನಿಧಿಸಿ ಆಸ್ಟ್ರೇಲಿಯಾ ವಿರುದ್ಧ 160 ರನ್ ಸಿಡಿಸಿರುವುದು ವೃತ್ತಿ ಜೀವನದ ಅವಿಸ್ಮರಣೀಯ ಕ್ಷಣ.