Advertisement

ದ. ಆಫ್ರಿಕಾ ವಿರುದ್ಧ ದ್ವಿಶತಕದ ಸಿಡಿಸಿದ ಕನ್ನಡಿಗ ಮಯಾಂಕ್ ಅಗರ್ವಾಲ್

09:41 AM Oct 04, 2019 | Team Udayavani |

ವಿಶಾಖಪಟ್ಟಣ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ದ್ವಿಶತಕ ಬಾರಿಸಿ ಸಂಭ್ರಮಿಸಿದ್ದಾರೆ. ಹರಿಣಗಳ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಮಯಾಂಕ್ ಚೊಚ್ಚಲ ಶತಕವನ್ನು ದ್ವಿಶತಕವಾಗಿ ಪರಿವರ್ತಿಸಿ ಮಿಂಚಿದ್ದಾರೆ.

Advertisement

ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಿದ ಮಯಾಂಕ್ 22 ಬೌಂಡರಿ ಮತ್ತು ಐದು ಸಿಕ್ಸರ್ ಬಾರಿಸಿದರು. 358 ಎಸೆತ ಎದುರಿಸಿ ಮಯಾಂಕ್ ಈ ಐತಿಹಾಸಿಕ ಗುರಿ ಮುಟ್ಟಿದರು.

118 ಓವರ್ ಅಂತ್ಯಕ್ಕೆ ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 431 ರನ್ ಗಳಿಸಿದೆ. ರೋಹಿತ್ ಶರ್ಮಾ 176, ಪೂಜಾರ 6, ವಿರಾಟ್ ಕೊ್ಲಿ 20, ಅಜಿಂಕ್ಯಾ ರಹಾನೆ 15 ರನ್ ಗಳಿಸಿ ಔಟಾದರು.

Advertisement

Udayavani is now on Telegram. Click here to join our channel and stay updated with the latest news.

Next