Advertisement
ಆಸ್ಟ್ರೇಲಿಯ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಮಾಯಾಂಕ್, ಬೌಲರ್‌ಗಳ ತಾಳ್ಮೆಯನ್ನು ಕೆಡಿಸುತ್ತ ಸಾಗಿ 76 ರನ್ ಗಳಿಸಿದರು. ಈ ರನ್‌ಗಳೊಂದಿಗೆ ಹಲವು ನೋವು, ಆಕ್ರೋಶ, ಆತಂಕದ ದಿನಗಳಿಗೆ ಮುಕ್ತಾಯ ಹಾಡಿದರು. ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಅದ್ಭುತವಾಗಿ ಆರಂಭಿಸಿರುವ ಅವರಿಗೆ, ಇದನ್ನು ಅಷ್ಟೇ ಸಶಕ್ತವಾಗಿ ಮುಂದುವರಿಸಬೇಕಾದ ಜವಾಬ್ದಾರಿ ಬಾಕಿಯುಳಿದಿದೆ.
Related Articles
Advertisement
ಕೊಹ್ಲಿ-ಪೂಜಾರ ಹೊಣೆಗಾರಿಕೆ: ಅಗರ್ವಾಲ್-ಹನುಮ ವಿಹಾರಿ ಔಟಾದ ನಂತರ ಜೊತೆಚೇತೇಶ್ವರ ಪೂಜಾರ-ವಿರಾಟ್ ಕೊಹ್ಲಿ. ತಮ್ಮ ಪಾಲಿನ ಹೊಣೆಗಾರಿಕೆಯನ್ನು ಅತ್ಯುತ್ತನಿಭಾಯಿಸಿ 92 ರನ್ ಜೊತೆಯಾಟವಾಡಿಇಬ್ಬರೂ ಒಂದೊಂದು ಜೀವದಾನ ಪಡೆದಿದ್ದಾರೆ.
ಮೊದಲ ಟೆಸ್ಟ್‌ನಂತೆಯೇ ಈ ಟೆಸ್ಟ್‌ನಲ್ಲೂ ಪೂಜಾರ ತಾಳ್ಮೆ ಸಾಕಾರಮೂರ್ತಿಯಂತೆ ಆಡಿದರು. 200 ಎಸೆತ ಎದುರಿಸಿದ ಅವರು 6 ಬೌಂಡರಿಗಳ ಸಹಿತ 68 ರನ್‌ಗಳಿಸಿ ಶತಕದತ್ತ ಸಾಗಿದ್ದಾರೆ. ಅಷ್ಟು ಮಾತ್ರವಲ್ಲ ತಮ್ಮ ಅಸಾಮಾನ್ಯ ತಾಳ್ಮೆಯ ಮೂಲಕ ಎದುರಾಳಿ ಬೌಲರ್‌ಗಳನ್ನು ಗೋಳು ಹೊಯ್ದುಕೊಂಡಿದ್ದಾರೆ. 52ನೇ ಓವರ್‌ನಲ್ಲಿ ಒಮ್ಮೆ ಚೇತೇಶ್ವರ ಪೂಜಾರ ಕ್ಯಾಚ್ ನೀಡಿದರು.
ಹಿಡಿಯಲು ಬಹಳ ಕಷ್ಟವಾಗಿದ್ದ ಅದನ್ನು ಉಸ್ಮಾನ್ ಆಸ್ಟ್ರೇಲಿಯಕ್ಕೆ ಆಘಾತಕಾರಿಯಾಗಿ ಪರಿಣಮಿಸಿದ್ದು ನಾಯಕ ಕೊಹ್ಲಿ ಕ್ಯಾಚ್ ಕೈಚೆಲ್ಲಿದ್ದು. 87ನೇ ಓವರ್ ನಲ್ಲಿ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಕೊಹ್ಲಿ ನೀಡಿದ ಕ್ಯಾಚನ್ನು ಟಿಮ್ ಪೇನ್ ಬಿಟ್ಟುಬಿಟ್ಟರು.
ಕೊಹ್ಲಿಗೆ ಚೀತ್ಕಾರ, ಪುರಸ್ಕಾರ: ಕೊಹ್ಲಿ ಬ್ಯಾಟ್ ಹಿಡಿದು ಬಂದಾಗ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ತೋರಿದರು. ಒಂದು ಗುಂಪು ಸಂತೋಷದಿಂದ ಚಪ್ಪಾಳೆ ತಟ್ಟಿದರೆ, ಇನ್ನೊಂದು ಗುಂಪು ಜೋರಾಗಿ ಕೂಗಿ ಅಣಕಿಸಿತು. ಇದಕ್ಕೆಲ್ಲ ತಮ್ಮ ಬ್ಯಾಟಿಂಗ್ ಮೂಲಕವೇ ಉತ್ತರ ಕೊಟ್ಟ ಅವರು ಅಜೇಯ 47 ರನ್‌ಗಳಿಸಿದರು. 107 ಎಸೆತ ಎದುರಿಸಿ ಅವರು 6 ಬೌಂಡರಿ ಬಾರಿಸಿದರು.
ರನ್‌ಗತಿ ತೀವ್ರ ಕುಸಿತಮೊದಲ ದಿನ ಭಾರತ ಕೇವಲ ಎರಡು ವಿಕೆಟ್ ಕಳೆದುಕೊಂಡರೂ,ಗಳಿಸಿದ್ದು 215 ರನ್ ಮಾತ್ರ. ವಿಕೆಟ್ ಉಳಿಸಿಕೊಂಡ ಸಂತಸವಿದ್ದರೂ ನಿಧಾನಗತಿಯಲ್ಲಿ ರನ್ ಬಂದಿರುವುದು ಸ್ವಲ್ಪ ಹಿನ್ನಡೆಯೇ ಸರಿ. ಇಡೀ ದಿನ ಭಾರತದ ಒಟ್ಟಾರೆ ರನ್ ಸರಾಸರಿ ಓವರ್‌ಗೆ 2.5 ರನ್ ಮಾತ್ರ! ಬ್ಯಾಟಿಂಗ್‌ಗೆ ಅನುಕೂಲವಾಗಿರುವಂತೆ ಮೆಲ್ಬರ್ನ್ ಅಂಕಣ ಕಂಡುಬಂದರೂ,ಭಾರತೀಯರು ರನ್‌ಗಳಿಸಲು ತಿಣುಕಾಡಿದ್ದು ಪ್ರಶ್ನಾರ್ಹವಾಗಿತ್ತು. ಸ್ಕೋರ್
ಭಾರತ ಮೊದಲ ಇನಿಂಗ್ಸ್ 215/2
ಹನುಮ ವಿಹಾರಿ ಸಿ ಫಿಂಚ್ ಬಿ ಕಮಿನ್ಸ್ 8
ಮಾಯಾಂಕ್ ಅಗರ್ವಾಲ್ ಸಿ ಪೇನ್ ಬಿ ಕಮಿನ್ಸ್ 76
ಚೇತೇಶ್ವರ ಪೂಜಾರ ಅಜೇಯ 68
ವಿರಾಟ್ ಕೊಹ್ಲಿ ಅಜೇಯ 47
ಇತರೆ 16
ವಿಕೆಟ್ ಪತನ: 1-40, 2-123
ಬೌಲಿಂಗ್
ಮಿಚೆಲ್ ಸ್ಟಾರ್ಕ್ 16 6 32 0
ಜೋಶ್ ಹೇಜಲ್‌ವುಡ್ 18 6 45 0
ನಥನ್ ಲಿಯೋನ್ 21 4 59 0
ಪ್ಯಾಟ್ ಕಮಿನ್ಸ್ 19 6 40 2
ಮಿಚೆಲ್ ಮಾರ್ಷ್ 15 3 23 0