Advertisement
ಕಳೆದ ಪಂದ್ಯದಲ್ಲಿ ರಾಹುಲ್ ಭರ್ಜರಿ ಶತಕ ಬಾರಿಸಿ ಮಿಂಚಿದರೆ ಈ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ (106) ಶತಕದ ಸಾಧನೆ ಮಾಡಿದರು. ಈ ಮೂಲಕ ಅರಬ್ ನಾಡಿಗೆ ಶಿಫ್ಟ್ ಆಗಿರುವ ಈ ಬಾರಿಯ ಐಪಿಎಲ್ ಕೂಟದಲ್ಲಿ ಇಂದಿನವರೆಗೆ ದಾಖಲಾದ ಎರಡೂ ಶತಕಗಳನ್ನು ಕರ್ನಾಟಕದ ‘ಹುಡುಗರೇ’ ಬಾರಿಸಿರುವುದು ವಿಶೇಷ!
ರಾಜಸ್ಥಾನ್ ರಾಯಲ್ಸ್ ಕಪ್ತಾನ ಸ್ಟೀವನ್ ಸ್ಮಿತ್ ಅವರು ಟಾಸ್ ಗೆದ್ದು ಕಿಂಗ್ಸ್ ಇಲವನ್ ಪಂಜಾಬ್ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿದರು. ಆದರೆ ಓಪನಿಂಗ್ ಜೋಡಿಯಾದ ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಅವರು ರಾಯಲ್ಸ್ ತಂಡದ ಲೆಕ್ಕಾಚಾರವನ್ನು ಸಂಪೂರ್ಣ ಉಲ್ಟಾ ಮಾಡಿದರು.
Related Articles
Advertisement
ಇನ್ನೊಂದೆಡೆ ಮಯಾಂಕ್ ಗೆ ಸೂಕ್ತ ಸಾಥ್ ನೀಡಿದ ರಾಹುಲ್ 54 ಎಸೆತಗಳಲ್ಲಿ 69 ರನ್ ಬಾರಿಸಿದರು. ಕರುನಾಡ ಈ ಜೋಡಿ 17ನೇ ಓವರ್ ವರೆಗೆ ಕ್ರೀಸ್ ಆಕ್ರಮಿಸಿಕೊಂಡಿತ್ತು. ಬಳಿಕ 9 ಎಸೆತಗಳ ಅಂತರದಲ್ಲಿ ಇವರಿಬ್ಬರೂ ಔಟಾದರು.ಪಂಜಾಬ್ ಬ್ಯಾಟಿಂಗ್ ಇನ್ನಿಂಗ್ಸ್ ನ ಕೊನೆಯಲ್ಲಿ ಕಿಚ್ಚು ಹಚ್ಚಿದ ನಿಕೊಲಸ್ ಪೂರಣ್ (25) ಭರ್ಜರಿ ಆಟವಾಡಿದ ಕಾರಣ ಕಿಂಗ್ಸ್ ಪಂಜಾಬ್ 223 ರನ್ ಗಳ ಭರ್ಜರಿ ಮೊತ್ತ ಕಲೆಹಾಕಲು ಸಾಧ್ಯವಾಯಿತು. ಇನ್ನಿಂಗ್ಸ್ ನ ಅಂತಿಮ ಓವರ್ ಗಳಲ್ಲಿ ರಾಜಸ್ಥಾನ ಬೌಲರ್ ಗಳನ್ನು ಕಾಡಿದ ಪೂರಣ್ ಅವರು ಕೇವಲ 8 ಎಸೆತಗಳಲ್ಲಿ ಔಟಾಗದೇ 25 ರನ್ ಬಾರಿಸಿದರು, ಸಿಡಿಸಿದ್ದು 03 ಸಿಕ್ಸರ್. ಗ್ಲೆನ್ ಮ್ಯಾಕ್ಸ್ ವೆಲ್ 13 ರನ್ ಗಳಿಸಿ ಔಟಾಗದೇ ಉಳಿದರು.
ಇಂದು ರಾಜಸ್ಥಾನ ಬೌಲರ್ ಗಳ ಎಕಾನಮಿ ರೇಟ್ ಡಬ್ಬಲ್ ಫಿಗರ್ ನಲ್ಲಿತ್ತು. ಅಂಕಿತ್ ರಜಪೂತ್ ಮತ್ತು ಟಾಮ್ ಕರನ್ ಅವರು ತಲಾ 1 ವಿಕೆಟ್ ಪಡೆದರು. ರಾಹುಲ್ ತೆವಾಟಿಯಾ 1 ಓವರ್ ನಲ್ಲಿ 19 ರನ್ ನೀಡಿ ದುಬಾರಿಯೆಣಿಸಿದರು.