ಈಗಂತೂ ಕಿರುತೆರೆ ವೀಕ್ಷಕರಿಗಾಗಿ ಹೊಸ ಹೊಸ ಧಾರಾವಾಹಿ, ಕಾರ್ಯಕ್ರಮಗಳು ಆರಂಭವಾಗುತ್ತಲೇ ಇರುತ್ತವೆ. ಈ ಮೂಲಕ ಪ್ರೇಕ್ಷಕರ ಆಯ್ಕೆ ಸ್ವತಂತ್ರ ಹೆಚ್ಚಾಗಿದೆ. ಈಗ ಕಿರುತೆರೆಯಲ್ಲಿ ಮತ್ತೂಂದು ಹೊಸ ಧಾರಾವಾಹಿ ಆರಂಭವಾಗುತ್ತಿದೆ. ಅದು “ಮಾಯಾ’.
“ಮಾಯಾ’ ಎಂಬ ಹೊಸ ಧಾರಾವಾಹಿ ಉದಯ ವಾಹಿನಿಯಲ್ಲಿ ಇಂದಿನಿಂದ (ಜುಲೈ 09) ರಾತ್ರಿ 7.30ಕ್ಕೆ ಕ್ಕೆ ಪ್ರಸಾರವಾಗಲಿದೆ. ಅವ್ನಿಟೆಲಿ ಮೀಡಿಯ ಈ ಮಾಯಾ ಧಾರಾವಾಹಿಯನ್ನು ತಯಾರಿಸುತ್ತಿದ್ದಾರೆ.ನಂದಾಸ್ ಮತ್ತು ನಾರಾಯಣ ಮೂರ್ತಿ ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ದೇಹ ನಾಶವಾದರೂ ಆತ್ಮಕ್ಕೆ ನಾಶವಿಲ್ಲ ಎಂಬ ಆಧ್ಯಾತ್ಮದ ಸಾರವನ್ನು ಆಧರಿಸಿ ಈ ಧಾರಾವಾಹಿ ಮೂಡಿಬರುತ್ತಿದೆ.ಸಾವಿರಾರು ವರ್ಷಗಳ ಹಿಂದೆ ಕಣ್ಮೆರೆಯಾದ ಆತ್ಮವನ್ನು ಮತ್ತೆ ಈ ಕಾಲದಲ್ಲಿ ತನ್ನ ಹಿಡಿತಕ್ಕೆ ತೆಗೆದುಕೊಂಡು ಇಡೀ ಪ್ರಪಂಚದಲ್ಲಿ ತನ್ನ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಬೇಕೆನ್ನುವುದು ಕಾಲಾಂತಕನ ಆಸೆ.
ಅವನ ಆಸೆ ನೆರವೇರದೆದುಷ್ಟ ಶಕ್ತಿಗಳನ್ನು ತಡೆಯಬೇಕೆಂಬ ಇನ್ನೊಂದು ಗುಂಪು. ಕಾಲಾಂತಕನಿಗೆ ಬೆಂಬಲವಾಗಿ ನಿಲ್ಲುವ ರಣಮಾಯಾ … ಈ ಅಂಶದೊಂದಿಗೆ “ಮಾಯಾ’ ಕಥೆ ಸಾಗಲಿದೆ. ಇಂದಿನ ಜನ್ಮದಲ್ಲಿಅರವಿಂದ್, ಯಕ್ಷ ಮತ್ತು ದರ್ಶಿನಿ ಯಾಗಿ ಹುಟ್ಟಿರುವ ಮೂರು ಜನರೇ ಈ ಕಥೆಯ ಕೇಂದ್ರ ಬಿಂದುಗಳು.
ತಾರಾಗಣದಲ್ಲಿ ಶ್ವೇತ ನಾಯಕಿಯಾಗಿ, ಆಕಾಂಕ್ಷ ಮತ್ತೂರ್ವ ನಾಯಕಿಯಾಗಿ,ಅಜಯ್ ಈ ಧಾರಾವಾಹಿಯ ನಾಯಕನಾಗಿ ಅಭಿನಯಿಸತ್ತಿದ್ದಾರೆ. ಹಿರಿಯ ನಟಉಮೇಶ್, ಮೋಹನ್ ಶರ್ಮ, ಅಶೋಕ್ ಮುಂತಾದವರು ನಟಿಸುತ್ತಿದ್ದಾರೆ.