ಕಾಪು: ಅಯೋಧ್ಯೆ ಶ್ರೀರಾಮ ದೇವರ ಪ್ರಾಣಪ್ರತಿಷ್ಠೆ ಮತ್ತು 48 ದಿನಗಳ ಮಂಡಲೋತ್ಸವ ಮುಗಿಸಿ ಉಡುಪಿಗೆ ಆಗಮಿಸುವ ಸಂದರ್ಭದಲ್ಲಿ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ವಿಶ್ವಸ್ತ, ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ರವಿವಾರ ಇಳಕಲ್ ಕೆಂಪು ಶಿಲೆಯಿಂದ ನಿರ್ಮಾಣಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ದೇವಿಯ ಸನ್ನಿಧಿಯಲ್ಲಿ ನವದೀಪ ಗಳನ್ನು ಬೆಳಗಿ ಆಶೀರ್ವಚನ ನೀಡಿದ ಅವರು, ಕಾಪು ಮಾರಿಯಮ್ಮ, ಅಯೋಧ್ಯೆ ರಾಮದೇವರು ಮತ್ತು ಉಡುಪಿಯ ಕೃಷ್ಣನ ದಯೆಯಿಂದ ಮಾರಿಗುಡಿಯ ಜೀರ್ಣೋದ್ಧಾರ ಕೆಲಸಗಳು ಕೂಡ ನಿರ್ವಿಘ್ನವಾಗಿ ಮತ್ತು ಸಾಂಗವಾಗಿ ನೆರವೇರುವಂತಾಗಲಿ ಎಂದು ಹಾರೈಸಿದರು.
ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಗೌರವಾಧ್ಯಕ್ಷ ಲಾಲಾಜಿ ಆರ್. ಮೆಂಡನ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯಾ, ಪ್ರಧಾನ ಅರ್ಚಕ ವೇ| ಮೂ| ಶ್ರೀನಿವಾಸ ತಂತ್ರಿ ಕಲ್ಯಾ, ಸಮಿತಿ ಉಪಾಧ್ಯಕ್ಷ ಮಾಧವ ಆರ್. ಪಾಲನ್, ಮುಂಬಯಿ ಸಮಿತಿ ಉಪಾಧ್ಯಕ್ಷ ಕೃಷ್ಣ ಶೆಟ್ಟಿ, ದಾನಿಗಳಾದ ಉದ್ಯಮಿ ಪುರುಷೋತ್ತಮ ಶೆಟ್ಟಿ, ಉಮಾ ಕೃಷ್ಣ ಶೆಟ್ಟಿ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಚಂದ್ರಶೇಖರ ಅಮೀನ್, ಜಗದೀಶ ಬಂಗೇರ, ರವೀಂದ್ರ ಎಂ., ಬಾಬು ಮಲ್ಲಾರು, ಕಟ್ಟಡ ಸಮಿತಿ ಪ್ರಧಾನ ಸಂಚಾಲಕ ಭಗವಾನ್‌ದಾಸ್ ಶೆಟ್ಟಿಗಾರ್, ಆರ್ಥಿಕ ಸಮಿತಿ ಮುಖ್ಯ ಸಂಚಾಲಕ ರಮೇಶ್ ಶೆಟ್ಟಿ ಕಾಪು ಕೊಲ್ಯ, ಮಹಿಳಾ ಸಂಚಾಲಕರಾದ ಶಿಲ್ಪಾ ಜಿ. ಸುವರ್ಣ, ಸಾವಿತ್ರಿ ಗಣೇಶ್, ಕಾಪು ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್. ಜಿ. ಶೆಣೈ, ಜಿಎಸ್‌ಬಿ ಸಮಾಜ ಬಾಂಧವರು, ಪ್ರಮುಖರಾದ ಮಧುಕರ ಎಸ್., ವಿದ್ಯಾಧರ ಪುರಾಣಿಕ್, ಮನೋಹರ ರಾವ್ ಕಲ್ಯಾ, ಲಕ್ಷಿ$¾àಶ ತಂತ್ರಿ, ರವಿ ಭಟ್ ಮಂದಾರ, ಲಕ್ಷ್ಮೀನಾರಾಯಣ ತಂತ್ರಿ, ಶ್ರೀಧರ ಕಾಂಚನ್, ಜಗದೀಶ್ ಮೆಂಡನ್, ಸುಲೋಚನ ಸುವರ್ಣ, ಮಮತಾ ಸಾಲ್ಯಾನ್, ಕಲಾವತಿ ಪುತ್ರನ್, ಗೀತಾರಾಜ್, ಉಷಾ ಕೆ. ಪುತ್ರನ್, ದಿವಾಕರ ಶೆಟ್ಟಿ ಮಲ್ಲಾರು, ಗೋವರ್ಧನ ಸೇರಿಗಾರ್ ಮೊದಲಾದವರಿದ್ದರು.