Advertisement
***ವೀಣಾ ಹೇಳುತ್ತಾರೆ: ಶಿರಸಿ- ಸಿದ್ದಾಪುರ ಸೀ ಮೆಯ ಒಂದು ಹಳ್ಳಿ ನಮ್ಮೂರು. ದುರಾ ದೃಷ್ಟವೆಂಬುದು ಬಾಲ್ಯದಲ್ಲೇ ನನಗೆ ಜತೆಯಾಯಿತು. ಹೆರಿಗೆಯ ಸಮಯದಲ್ಲಿ ಏನೋ ಸಮಸ್ಯೆಯಾಗಿ ಅಮ್ಮ ತೀರಿಕೊಂಡರಂತೆ. ಹಾಗಾಗಿ ನಾನು ಹುಟ್ಟುತ್ತಲೇ ತಬ್ಬಲಿ ಆಗಿಬಿಟ್ಟೆ. ಅಪ್ಪ ಇನ್ನೊಂದು ಮದುವೆಯಾಗಿ, ಕೆಲವು ವರ್ಷಗಳ ಅನಂತರ ತೀರಿಕೊಂಡರಂತೆ. ಅಮ್ಮನ ತಂದೆ- ತಾಯಿ(ಅಂದರೆ ನಮ್ಮ ಅಜ್ಜ-ಅಜ್ಜಿ) ತಮ್ಮ ಊರಾದ ಇಟಗಿಯಲ್ಲಿ ನನ್ನನ್ನು ಉಳಿಸಿ ಕೊಂಡರು. ಶಾಲೆಗೂ ಸೇರಿಸಿದರು. ಅಲ್ಲಿದ್ದುಕೊಂಡೇ ಬಂಧುಗಳು ಮತ್ತು ಇತರ ಮಕ್ಕಳ ಜತೆಯಲ್ಲಿ ಬೆಳೆದೆ. ಏಳನೇ ತರಗತಿ ಮುಗಿಯುತ್ತಿದ್ದಂತೆಯೇ, “ಇವಳು ಓದಿದ್ದು ಸಾಕು. ಮನೆಯಲ್ಲಿ ಇಟ್ಟುಕೊಂಡರೆ ಸಾಕುವುದು ಕಷ್ಟವಾಗುತ್ತದೆ. ಇವಳನ್ನು ಶ್ರೀಮಂತರ ಮನೆಯಲ್ಲಿ ಕೆಲಸಕ್ಕೆ ಸೇರಿಸೋಣ, ಅವಳ ಬದುಕಿಗೆ ಸಹಾಯ ವಾಗುತ್ತದೆ’ ಎಂದು ಮಾತಾಡಿಕೊಂಡ ಬಂಧುಗಳು, ಬೆಂಗಳೂರಿನಲ್ಲಿದ್ದ ಡಾಕ್ಟರ್ ಒಬ್ಬರ ಮನೆಗೆ ಕಳಿಸಿಯೇ ಬಿಟ್ಟರು. ಅಲ್ಲಿ, ಮಕ್ಕಳನ್ನು ನೋಡಿಕೊಳ್ಳುವ ಕೆಲಸ ನನ್ನದಾಗಿತ್ತು.ಈ ಮಧ್ಯೆ ನನಗೆ ಓದಿ ನಲ್ಲಿ ಆಸಕ್ತಿ ಇದೆ ಅನ್ನುವು ದನ್ನು ಆ ವೈದ್ಯ ದಂಪತಿ ಗಮನಿಸಿದರು. ಮುತುವರ್ಜಿ ವಹಿಸಿ ಶಾಲೆಗೆ ಸೇರಿಸಿದರು. ಮುಂದೆ ಕಾಲೇಜಿಗೂ ಸೇರಿಸುವ ಭರವಸೆ ನೀಡಿದ್ದರು.
Related Articles
Advertisement
ದಿನಗಳು ಕಳೆದಂತೆಲ್ಲ- ಕಷ್ಟ, ಕಣ್ಣೀರು ಮತ್ತು ಖರ್ಚು ಹೆಚ್ಚ ತೊಡಗಿತು. ಒಬ್ಬರ ಸಂಪಾದನೆಯಲ್ಲಿ ಸಂಸಾರ ನಿರ್ವಹಣೆ ಕಷ್ಟ ಅನ್ನಿಸಿದಾಗ ನಾನು ಫ್ಯಾನ್ಸಿ ಸ್ಟೋರ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡೆ. ಮಗಳಿಗೆ ಆಗಿಂದಾಗ್ಗೆ ಅಗತ್ಯವಿರುವ ಚಿಕಿತ್ಸೆ ಕೊಡಿಸುತ್ತಿದ್ದೆ. ತಂಗಿಯನ್ನು ಸಂಭಾ ಳಿಸುವುದು ಹೇಗೆ ಎಂದು ದೊಡ್ಡ ಮಗಳಿಗೆ ಹೇಳಿಕೊಟ್ಟೆ. ಪಾಪ, ತಿಂದುಂಡು ನಲಿಯಬೇಕಿದ್ದ ವಯಸ್ಸಿನಲ್ಲಿ ನನ್ನ ಮಗಳು ಹೊಸ ಜವಾಬ್ದಾರಿಗೆ ಹೆಗಲು ಕೊಟ್ಟಿದ್ದಳು.
ಇದೆಲ್ಲ ಎಷ್ಟು ದಿನ? ನಮ್ಮ ಛಲಕ್ಕೆ ಹೆದರಿ ಕಷ್ಟಗಳು ಓಡಿಹೋಗುತ್ತವೆ ಎಂಬ ನಿರೀಕ್ಷೆಯಲ್ಲಿದ್ದಾಗಲೇ ಲಾಕ್‌ಡೌನ್ ಬಂತು. ಎಲ್ಲ ಕೆಲಸಗಳೂ ಬಂದ್ ಆಗಿ ಮನೆ ಯಲ್ಲೇ ಕೂರುವಂತಾಯಿತು. ಆಗಲೇ ನನ್ನ ಗಂಡನಿಗೆ ಹಾರ್ಟ್ ಅಟ್ಯಾಕ್ ಆಗಿ ಆಪರೇಶನ್ ಮಾಡಿಸಬೇ ಕಾಯ್ತು. ಕಂಡಕಂಡವರಿಗೆ ಕೈ ಮುಗಿದು ಹಣ ಹೊಂದಿಸಿ ಚಿಕಿತ್ಸೆ ಕೊಡಿಸಿದೆ.
ಸ್ವಲ್ಪ ದಿನ ಕಳೆಯುತ್ತಿದ್ದಂತೆ ಅವರ ಮುಖಪೂರ್ತಿ ಊದಿಕೊಂಡಿತು. ಪರಿಚಿತರೊಬ್ಬರ ಸಲಹೆಯಂತೆ ಹುಬ್ಬಳ್ಳಿಯ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಹೋದೆವು. ಟೆಸ್ಟ್ ಮಾಡಿದ ವೈದ್ಯರು ಕ್ಯಾನ್ಸರ್ ಆಗಿಬಿಟ್ಟಿದೆ ಕಣಮ್ಮ. ತತ್‌ಕ್ಷಣ ಆಪರೇಶನ್ ಮಾಡಬೇಕು ಎಂದರು!
ಅವರ ಮಾತು ಕೇಳುತ್ತಿದ್ದಂತೆಯೇ ಕಾಲ ಕೆಳಗಿನ ಭೂಮಿ ಕುಸಿದಂಥ ಅನುಭವ. ಆಸ್ಪತ್ರೆಯ ವೈದ್ಯರ ಬಳಿಗೆ ಹೋಗಿ ನನ್ನ ಗಂಡನನ್ನು ಉಳಿಸಿಕೊಡಿ ಎಂದು ಬೇಡಿಕೊಂಡೆ. ನೋಡ ನೋಡುತ್ತಲೇ ಆಪರೇಶನ್ ಆಗಿಹೋಯಿತು. ನನ್ನ ಬಳಿ ಆಯುಷ್ಮಾನ್ ಕಾರ್ಡ್ ಇತ್ತು. ಆ ಯೋಜನೆಯಲ್ಲಿ ಆಪರೇಶನ್ ಆಗಿದೆ. ಆದರೆ ಕಿಮೋಥೆರಪಿ ಸೇರಿದಂತೆ ಇನ್ನೂ ಹಲವು ಚಿಕಿತ್ಸೆಗಳ ಅಗತ್ಯವಿದೆ. ಚಿಕಿತ್ಸೆಗೆ ಹಣ ಹೊಂದಿಸುವುದು ಹೇಗೆ? ಎಂಬ ಚಿಂತೆಯಲ್ಲಿ ಇರುವಾಗಲೇ ನಮ್ಮ ಕಷ್ಟದ ಕಥೆ ಕೇಳಿದ ಗುರುತು ಪರಿಚಯ ಇಲ್ಲದ ಜನ ಕೈಲಾದಷ್ಟು ಹಣ ಕೊಟ್ಟರು. ಈ ಮಧ್ಯೆ, ತಮ್ಮನನ್ನು ನೋಡಲು ಬಂದ ಭಾವ, ನನ್ನ ಕೋರಿಕೆಯ ಮೇರೆಗೆ, ಸ್ವಲ್ಪ ದಿನಗಳ ಮಟ್ಟಿಗೆ ಮಕ್ಕಳನ್ನು ಊರಲ್ಲಿ ಇರಿಸಿಕೊಳ್ಳಲು ಒಪ್ಪಿದರು.
ಗಂಡನಿಗೆ ಇನ್ನೂ ಚಿಕಿತ್ಸೆ ನಡೆಯುತ್ತಿದೆ. ಎಷ್ಟು ಕಷ್ಟವಾದರೂ ಸರಿ, ಅವನನ್ನು ಉಳಿಸಿಕೊಳ್ಳಬೇಕು ಅನ್ನುವುದಷ್ಟೇ ನನ್ನ ಆಸೆ ಮತ್ತು ಗುರಿಯಾಗಿದೆ. ಸಹಾ ಯಕ್ಕಾಗಿ ಕೈಮುಗಿದು ಬೇಡುತ್ತಿದ್ದೇನೆ. ಈವರೆಗೂ ಸಹಾಯ ಮಾಡಿರು ವವರನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ. ಈ ಸಂದರ್ಭದ ನನ್ನ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಳ್ಳಲೂ ಕೆಲವರು ಪ್ರಯತ್ನಿಸಿದ್ದಾರೆ. ಆದರೆ ಅಂಥವರ ಸಂಖ್ಯೆಗಿಂತ ಹತ್ತು ಪಟ್ಟು ಹೆಚ್ಚಾಗಿ- ಕಾಯುವ, ಕಂಬನಿ ಒರೆಸುವ ಜನರಿದ್ದಾರೆ ಎಂಬ ನಂಬಿಕೆ ನನ್ನದು. ಎಲ್ಲರ ಹಾರೈಕೆ ನನಗಿರಲಿ ಎಂಬುದು ವೀಣಾ ಅವರ ಪ್ರಾರ್ಥನೆ.***
ಕ್ಯಾನ್ಸರ್‌ನ ಹೆಸರು ಕೇಳಿದರೇ ಗಾಬರಿಯಾಗಿ ಕುಸಿದು ಬೀಳುವ ಜನರಿದ್ದಾರೆ. ಚಿಕಿತ್ಸೆಗೆ ಹಣ ಹೊಂದಿಸುವ ದಾರಿ ತಿಳಿಯದೆ ಕಂಗಾಲಾದವರೂ ಇದ್ದಾರೆ. ಅಂಥವರ ಮಧ್ಯೆ, ಗಂಡನನ್ನು ಉಳಿಸಿಕೊಳ್ಳಲೇಬೇಕು ಎಂಬ ಛಲದ ವೀಣಾ, ಈ ಕಾಲದ ಸತಿ ಸಾವಿತ್ರಿಯಂತೆ ಕಾಣುತ್ತಾಳೆ. ನಮ್ಮ ಪ್ರಾರ್ಥನೆ, ಹಾರೈಕೆ ಮತ್ತು ಕಿಂಚತ್ ಸಹಾಯ ಆಕೆಗೆ ಆನೆಬಲ ಕೊಡಬಲ್ಲವು. ಬದುಕಿಡೀ ಕಷ್ಟಗಳ ಕುಲು ಮೆಯಲ್ಲೇ ಬೆಂದಿರುವ ಈ ಹೆಣ್ಣು ಮಗಳ ಬದುಕಲ್ಲಿ ಮುಂದೆ ಬೆಳದಿಂಗಳು ಹರಡಿಕೊಳ್ಳಲಿ ಎಂದು ಹಾರೈಸೋಣ. ಚಿಕಿತ್ಸೆಗೆ ನೆರವಾಗಲು ಇಚ್ಛಿಸುವವರು ಸಂಪರ್ಕಿಸಿ:
Narayan Rama Naik
Ac number 110099656680
Canara bank, A V. Baliga college, kumata
IFSC code: CNRB 0010354 – ಎ.ಆರ್.ಮಣಿಕಾಂತ್