ಮಂಗಳೂರು ದಕ್ಷಿಣ ಹಾಗೂ ಮಂಗಳೂರು ಉತ್ತರ ಭಾಗದಲ್ಲಿ ಬಹುತೇಕ ರಸ್ತೆಗಳು ಕಾಂಕ್ರೀಟ್ ಸೌಭಾಗ್ಯ ಕಂಡಿದ್ದರೂ, ಇನ್ನೂ ಕೆಲವೆಡೆ ಡಾಮರು ರಸ್ತೆಗಳೇ ಇವೆ. ಪಂಪ್‌ವೆಲ್-ಪಡೀಲ್ ಸಹಿತ ವಿವಿಧ ಪ್ರಮುಖ ರಸ್ತೆಗಳು ಡಾಮರು ಹಂತದಲ್ಲೇ ಇದೆ. ಈ ಪೈಕಿ ಕೆಲವು ಡಾಮರು ರಸ್ತೆ ಸರಿಯಾಗಿದ್ದರೂ, ಇನ್ನೂ ಕೆಲವು ಡಾಮರು ರಸ್ತೆ ಹೊಂಡ ಗುಂಡಿಯಲ್ಲಿದೆ. ಇಲ್ಲಿ ಮಳೆ ಜೋರಾಗಿ ಸುರಿದರೆ ಹೊಂಡ ಗುಂಡಿಗಳು ಮತ್ತಷ್ಟು ಅಪಾಯ ತರುವ ಸಾಧ್ಯತೆ ಅಧಿಕ ಇದೆ.
Advertisement
ನಗರದ ಬಹುತೇಕ ಒಳರಸ್ತೆಗಳು ಡಾಮರು ರಸ್ತೆಗಳಾ ಗಿವೆ. ಇಲ್ಲಿ ಗೈಲ್ ಅಥವಾ ಜಲಸಿರಿ ಕಾರಣದಿಂದ ರಸ್ತೆ ಅಗೆದು ಹೊಂಡ ಮಾಡಿದ್ದರಿಂದ ಕೆಲವೆಡೆ ಸಮಸ್ಯೆ ಆಗಿದ್ದರೆ, ಇನ್ನೂ ಕೆಲವೆಡೆ ಹೊಂಡದ ರಸ್ತೆ ಮಳೆಗಾಲದಲ್ಲಿ ಕಿರಿಕಿರಿ ಉಂಟು ಮಾಡಲಿದೆ.
Related Articles
ಬಿಜೈ: ಮಳೆಗಾಲ ಆರಂಭವಾಗಲು ಕೆಲವೇ ದಿನಗಳು ಬಾಕಿ ಇದೆ. ಇಂತಹ ಪರಿಸ್ಥಿತಿಯಲ್ಲಿ ತೋಡುಗಳ ಹೂಳೆತ್ತುವ ಕಾರ್ಯಕ್ರಮ ಸಮರೋಪಾದಿಯಲ್ಲಿ ನಡೆಯಬೇಕಿದೆ. ಜತೆಗೆ ಸಣ್ಣ ಪುಟ್ಟ ಚರಂಡಿ ಕೆಲಸ ಹಾಗೂ ಅದರ ಅಕ್ಕ ಪಕ್ಕ ಸುಸ್ಥಿತಿಯಲ್ಲಿಡುವ ಕೆಲಸ ನಡೆಸಬೇಕಿದೆ. ಆದರೆ, ಗೈಲ್ ಗ್ಯಾಸ್ ಸಂಸ್ಥೆಯವರು ರಸ್ತೆ ಬದಿ ಹೊಂಡ ನಿರ್ಮಿ ಸಿದ್ದು, ಈಗ ಅಪಾಯಕಾರಿಯಾಗಿ ಬದಲಾಗುತ್ತಿದೆ!
Advertisement
ಗೈಲ್ ಕಂಪೆನಿಯವರು ತಮ್ಮ ಗ್ಯಾಸ್ ಕನೆಕ್ಷನ್ ಕೊಡಲು ರಸ್ತೆಗಳಲ್ಲಿ ಅಗೆದ ಗುಂಡಿಗಳು ಮಾರಣಾಂತಿಕ ಸ್ವರೂಪದಲ್ಲಿ ಬದಲಾಗಿದೆ. ಇಲ್ಲಿ ಕೊಂಚ ಎಚ್ಚರ ತಪ್ಪಿದರೂ ಅಪಾಯ ಎದುರಾಗುವ ಸಾಧ್ಯತೆ ಇದೆ.ನಗರದ ಕೆ.ವಿ.ಸೀತಾರಾಮ್ ಎಂಬವರು “ಸುದಿನ’ ಜತೆಗೆ ಮಾತನಾಡಿ, “ಬಿಜೈ ಹೊಸ ರಸ್ತೆಯ ಏಳನೇ ತಿರುವಿನಲ್ಲಿ ಎರಡು ಕಡೆ ಸಮಸ್ಯೆ ಉಂಟಾಗಿದೆ. ಪಾದಚಾರಿಗಳು ಮತ್ತು ವಾಹನ ಚಾಲಕರಿಗೆ ಇದು ಅಪಾಯಕಾರಿಯಾಗಿವೆ. ಕಳಪೆ ಕಾಮಗಾರಿಗೆ ಹಿಡಿದ ಕನ್ನಡಿ ಎಂಬಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯ ಸುಸ್ಥಿತಿಗೆ ಕೂಡಲೇ ಗಮನ ಹರಿಸಿ ರಸ್ತೆ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.