Advertisement
ಅವರು ಮಂಗಳವಾರ ವಡಭಾಂಡೇಶ್ವರ ಶ್ರೀ ವಡಭಾಂಡ ಬಲರಾಮ ದೇವಸ್ಥಾನದ ಪುನಃ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ನಡೆದ ಹೊರಕಾಣಿಕೆ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಧಾರ್ಮಿಕ ಚಿಂತಕ ಕೆ.ಎಲ್. ಕುಂಡಂತಾಯ ಮಾತನಾಡಿ, ಬಲರಾಮ ದೇವಸ್ಥಾನದ ಜೀರ್ಣೋದ್ಧಾರ ಕೆಲಸದಲ್ಲಿ ಪ್ರಾಚೀನತೆಗೆ ಆಧಾರವಾಗಬಲ್ಲ ಪೂರ್ವದ ವಿನ್ಯಾಸ, ಇತಿಹಾಸ, ಒಟ್ಟಿನಲ್ಲಿ ಮೂಲ ಸ್ವರೂಪವನ್ನು ಇಟ್ಟುಕೊಂಡು ಯಥಾವತ್ತಾಗಿ ನಿರ್ಮಿಸಲಾಗಿದೆ. ಕೆಲವೊಂದು ಭಿನ್ನಗೊಂಡ ಶಿಲೆಯ ಭಾಗಗಳನ್ನು ಹೊಸತಾಗಿ ನಿರ್ಮಿಸಿ ಮರುಜೋಡಣೆ ಮಾಡಲಾಗಿದೆ ಇದು ಬಹಳ ಅಪರೂಪದ ಕೆಲಸವಾಗಿದೆ ಎಂದರು. ದೇವಸ್ಥಾನದ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಶ್ರೀಶ ಭಟ್ ಕಡೆಕಾರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ಇಸ್ಕಾನ್ ಮಂಗಳೂರು ವಿಭಾಗದ ಉಪಾಧ್ಯಕ್ಷ ಸನಂದನದಾಸ್ ಪ್ರಭು, ಮಲ್ಪೆ ಮತೊÕéàದ್ಯಮಿ ರಮೇಶ್ ಕೋಟ್ಯಾನ್, ಉದ್ಯಮಿಗಳಾದ ದಯಾನಂದ ಶೆಟ್ಟಿ ಕೊಜಕುಳಿ, ಅಶೋಕ್ ಶೆಟ್ಟಿ ಕೊಜಕುಳಿ, ಉಡುಪಿ ಹಸಿಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್. ಸಾಲ್ಯಾನ್, ವಡಭಾಂಡೇಶ್ವರ ಭಕ್ತವೃಂದದ ಅಧ್ಯಕ್ಷ ಹರೀಶ್ ಕಾಂಚನ್, ದೇವಸ್ಥಾನದ ಪ್ರಧಾನ ತಂತ್ರಿ ಸುಬ್ರಹ್ಮಣ್ಯ ತಂತ್ರಿ, ಮೊಕ್ತೇಸರ ಟಿ. ಶ್ರೀನಿವಾಸ ಭಟ್, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಾಗರಾಜ ಮೂಲಿಗಾರ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಜಿ. ಕೊಡವೂರು, ಕಾರ್ಯದರ್ಶಿ ಜನಾರ್ದನ ಕೊಡವೂರು, ವೇದಿಕೆ ಸಂಚಾಲಕರಾದ ವಿಕ್ರಮ ಟಿ. ಶ್ರಿಯಾನ್, ಬಾಲಕೃಷ್ಣ ಮೆಂಡನ್ ಉಪಸ್ಥಿತರಿದ್ದರು.
Related Articles
Advertisement
ಬಲರಾಮ ಕೃಷಿಯ ಪ್ರತೀಕಕೃಷಿ ಪ್ರಧಾನ ದೇಶ ನಮ್ಮದು. ಉಳುಮೆ ಮಾಡುವ ನೇಗಿಲು, ಭತ್ತ ಕುಟ್ಟುವ ಒನಕೆ ಈ ಎರಡೂ ಆಯುಧ ಗಳು ಕೃಷಿಗೆ ಸಂಬಂಧಿಸಿದವು. ಬಲರಾಮನ ಕೈಯಲ್ಲಿರುವ ಆಯುಧ ನೇಗಿಲು ಮತ್ತು ಒನಕೆ, ಇಂದು ಬಲರಾಮನ ಆಯುಧದ ಪ್ರತೀಕವಾಗಿ ತಂದ ಭತ್ತ ಮತ್ತು ತರಕಾರಿಗಳು ಹೊರೆಕಾಣಿಕೆ ಮೂಲಕ ದೇವರಿಗೆ ಸಮರ್ಪಿತ ವಾಗಿವೆ. ಕೃಷಿ ಸಂಸ್ಕೃತಿಯನ್ನು ಪ್ರೀತಿಸುವ ಬಲರಾಮ ನಮ್ಮ ಈ ನಾಡಿನಲ್ಲಿಯೂ ಕೃಷಿಯನ್ನು ಸಂಪದ್ಭರಿತ ವಾಗಿಸಲಿ ಎಂದು ಪಲಿಮಾರು ಶ್ರೀಗಳು ಹೇಳಿದರು.