Advertisement

ಮೇ. 30ರಂದು ಮೋದಿ ಸರ್ಕಾರಕ್ಕೆ 7 ವರ್ಷ, ಸಂಭ್ರಮಾಚರಣೆ ಬೇಡವೆಂದು ನಡ್ಡಾ ಮನವಿ

09:54 PM May 22, 2021 | Team Udayavani |

ನವದೆಹಲಿ: ಇದೇ ತಿಂಗಳ 30ರಂದು ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದು 7 ವರ್ಷಗಳು ಪೂರ್ತಿಯಾಗಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಆಡಳಿತವಿರುವ ಯಾವುದೇ ರಾಜ್ಯಗಳಲ್ಲಿ ಅಲ್ಲಿನ ರಾಜ್ಯ ಸರ್ಕಾರಗಳ ವತಿಯಿಂದ ಯಾವುದೇ ರೀತಿಯ ಸಂಭ್ರಮಾಚರಣೆಗಳನ್ನು ಹಮ್ಮಿಕೊಳ್ಳಬಾರದೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಮನವಿ ಮಾಡಿದ್ದಾರೆ.

Advertisement

ಎಲ್ಲಾ ಬಿಜೆಪಿ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಅವರುಆಚರಣೆಗಳ ಬದಲು, ಸಂಭ್ರಮಾಚರಣೆ ಬದಲಿಗೆ, ಕೊರೊನಾದಿಂದ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಅಭಿವೃದ್ಧಿಗಾಗಿ ಹೊಸ ಯೋಜನೆಗಳನ್ನು ಅಂದು ಘೋಷಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ:ಭೀಕರ ಸೈಕ್ಲೋನ್‌ ಆಗಿ ‘ಯಾಸ್‌’ ಪರಿವರ್ತನೆ : ಒಡಿಶಾ, ಕರಾವಳಿ ಹಾದು ಹೋಗಲಿದೆ ಚಂಡಮಾರುತ

Advertisement

Udayavani is now on Telegram. Click here to join our channel and stay updated with the latest news.

Next