Advertisement

ಮೇ 2ನೇ ವಾರ ಚುನಾವಣೆ? ಚುನಾವಣ ಆಯೋಗದಿಂದ ಸಿದ್ಧತೆ ಚುರುಕು

01:42 AM Jan 28, 2023 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿರುವಂತೆ ಚುನಾವಣ ಆಯೋಗವೂ ಸಿದ್ಧತೆಗಳನ್ನು ಚುರುಕುಗೊಳಿಸಿದ್ದು, ಮೇ 2ನೇ ವಾರದ ಲೆಕ್ಕಾಚಾರ ಇರಿಸಿಕೊಂಡಿದೆ.

Advertisement

ಹಾಲಿ ವಿಧಾನಸಭೆಯ ಅವಧಿ ಈ ವರ್ಷ ಮೇ 24ಕ್ಕೆ ಕೊನೆಗೊಳ್ಳಲಿದೆ. ಅದ ರೊಳಗೆ ಹೊಸ ವಿಧಾನಸಭೆ ರಚನೆ ಯಾಗಬೇಕು. ಕಳೆದ ಬಾರಿ, 2018ರಲ್ಲಿ ಮೇ 12ರಂದು ಮತದಾನ ನಡೆದಿತ್ತು. ಹೆಚ್ಚುಕಡಿಮೆ ಈ ಬಾರಿಯೂ ಇದೇ ಅವಧಿಯಲ್ಲಿ ನಡೆಯಬಹುದು. ಇದೇ ಆಧಾರದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಈಗ ಚುನಾವಣೆ ಸಿದ್ಧತೆಗಳಿಗೆ ಮತ್ತಷ್ಟು ವೇಗ ನೀಡಿದೆ.

ಚುನಾವಣ ಪ್ರಕ್ರಿಯೆಗೆ 3 ಲಕ್ಷ ಸಿಬಂದಿ ಅಗತ್ಯವಿದ್ದು, ಬಹುತೇಕ ಶಿಕ್ಷಕರು, ಉಪನ್ಯಾಸಕರನ್ನು ನಿಯೋಜಿ ಸಲಾಗುತ್ತದೆ. ಮಾ. 9ರಿಂದ 29ರ ವರೆಗೆ ದ್ವಿತೀಯ ಪಿಯುಸಿ ಮತ್ತು ಮಾ. 31ರಿಂದ ಎ.15ರ ವರೆಗೆ ಎಸೆಸೆಲ್ಸಿ ಪರೀಕ್ಷೆ ನಡೆಯಲಿದೆ. ಇದರ ಬಳಿಕವಷ್ಟೇ ಚುನಾವಣೆ ಎಂದು ಚುನಾವಣ ಆಯೋಗದ ಅಧಿಕಾರಿ ಗಳು ಹೇಳಿದ್ದಾರೆ.
ಚುನಾವಣೆಗೆ ಮತದಾರರ ಪಟ್ಟಿ ಮುಖ್ಯ. ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಆಯೋಗ ಸಿದ್ಧಪಡಿಸಿದೆ. ಆದರೂ ಅಂತಿಮ ಮತದಾರರ ಪಟ್ಟಿಯನ್ನು ಇನ್ನೊಮ್ಮೆ ಪರಿಶೀಲಿಸಿ ಲೋಪಗಳಿದ್ದರೆ ಸರಿಪಡಿಸಿಕೊಳ್ಳುವಂತೆ ಜಿಲ್ಲಾ ಚುನಾವಣಾಧಿ ಕಾರಿಗಳಿಗೆ ಆಯೋಗ ಸೂಚನೆ ನೀಡಿದೆ. ರಾಜಕೀಯ ಪಕ್ಷಗಳಿಗೂ ಮತದಾರರ ಪಟ್ಟಿಯನ್ನು ನೀಡಲಾಗಿದೆ.

ಇದಾದ ಬಳಿಕ ಇವಿಎಂಗಳ ಮೊದಲ ಹಂತದ ತಪಾಸಣೆ (ಎಫ್ಎಲ್‌ಸಿ) ಕಾರ್ಯವನ್ನು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಆರಂಭಿಸಲಿದ್ದು, ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಮುಂದೆ ಇವಿಎಂಗಳನ್ನು ಪರಿಶೀಲಿಸಲಾಗುತ್ತದೆ. ಗದಗ, ಧಾರವಾಡ, ಉತ್ತರಕನ್ನಡ, ಹಾವೇರಿ ಜಿಲ್ಲೆಗಳಲ್ಲಿ ಎಫ್ಎಲ್‌ಸಿ ಈಗಾಗಲೇ ಪೂರ್ಣಗೊಂಡಿದ್ದು ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ದಾವಣಗೆರೆ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ನಡೆಯುತ್ತಿದೆ. ಫೆಬ್ರವರಿ ಅಂತ್ಯಕ್ಕೆ ಈ ಕಾರ್ಯವನ್ನು ಮುಗಿಸುವ ಗುರಿಯನ್ನು ಆಯೋಗ ಹಾಕಿಕೊಂಡಿದೆ.

3 ಲಕ್ಷ ಸಿಬಂದಿ ಅಗತ್ಯ
ಈ ಬಾರಿ 60 ಸಾವಿರ ಮತಗಟ್ಟೆ ಗಳು ಇರಬಹುದು ಎಂದು ಅಂದಾ ಜಿಸಲಾಗಿದೆ. ಒಂದು ಮತಗಟ್ಟೆಗೆ ಕನಿಷ್ಟ ಐವರಂತೆ ಒಟ್ಟು 3 ಲಕ್ಷ ಸಿಬಂದಿ ಬೇಕಾಗಬಹುದು. ಅವರ ನಿಯೋಜನೆ ಮತ್ತು ತರಬೇತಿ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿ ಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಹೆಚ್ಚುವರಿ ವೀಕ್ಷಕರ ನೇಮಕ
ಮತದಾರರ ಪಟ್ಟಿ ಪರಿಷ್ಕರಣೆ, ಇವಿಎಂಗಳ ಎಫ್ಎಲ್‌ಸಿ, ಚುನಾವಣ ಸಿಬಂದಿಯ ನಿಯೋ ಜನೆ ಮತ್ತು ತರಬೇತಿಯ ಜತೆಗೆ ಸ್ಥಳೀಯ ರಾಜ ಕೀಯ ವಿದ್ಯಮಾನಗಳ ಬಗ್ಗೆ ನಿಗಾ ಇರಿಸಲು ಜಿಲ್ಲೆಗೆ 10ರಿಂದ 15 ಮಂದಿ ವೀಕ್ಷಕ ರನ್ನು ನಿಯೋಜಿಸಲಾಗಿದೆ. ಇವರ ಜತೆಗೆ ನಿರಂತರವಾಗಿ ಸಭೆಗಳನ್ನು ನಡೆಸಿ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ.

ಚುನಾವಣೆಗೆ ಸಿದ್ಧತೆಗಳನ್ನು ಈಗಾಗಲೇ ಪ್ರಾರಂಭಿಸ ಲಾಗಿದೆ. ಕಳೆದ ಚುನಾವಣೆ ಮೇ 12ರಂದು ಮತದಾನ ನಡೆದಿತ್ತು, ಮೇ 24ಕ್ಕೆ ಹಾಲಿ ವಿಧಾನಸಭೆ ಅವಧಿ ಮುಗಿಯಲಿದೆ ಎಂಬ ಅಂಶ ಚುನಾವಣ ಆಯೋಗದ ಗಮನದಲ್ಲಿದೆ.
– ಮನೋಜ್‌ ಕುಮಾರ್‌ ಮೀನಾ
ರಾಜ್ಯ ಮುಖ್ಯ ಚುನಾವಣಾಧಿಕಾರ

Advertisement

Udayavani is now on Telegram. Click here to join our channel and stay updated with the latest news.

Next