ಮಣಿಪಾಲ: ಇತರ ರಾಜ್ಯಗಳಲ್ಲಿ ಇರುವವರು ಕರ್ನಾಟಕಕ್ಕೆ ಬರಲು ಅನುವು ಮಾಡಿಕೊಡುವುದು ಬೇರೆ ಸಮಸ್ಯೆಗೆ ಕಾರಣವಾಗುತ್ತದೆಯೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿವೆ.
ಗಿರೀಶ್ ಗೌಡ: ಇದ್ದಕ್ಕಿದ್ದಂತೆ ಕರೆದುಕೊಂಡು ಬಂದು ಮನೆಗಳಿಗೆ ತಲುಪಿಸುವ ಮೊದಲು, ಅವರಿಗೆ ವೈದ್ಯಕೀಯ ಚಿಕಿತ್ಸೆ ಮಾಡಿ, ಸಾಧ್ಯವಾದರೆ ಕ್ವಾರೆಂಟೈನ್ ಕೂಡ ಮಾಡಿ ನಂತರ ಅವರ ಮನೆಗಳಿಗೆ ತಲುಪಿಸಿ. ಈ ಕ್ವಾರೆಂಟೈನ್ ಜನರ ವಿವೇಚನೆಗೆ ಬಿಡದೆ, ಸರ್ಕಾರವೇ ಅವರ ಜವಾಬ್ದಾರಿ ಹೊರುವುದು ಅನಿವಾರ್ಯ.
ದಾವೂದ್ ಕೂರ್ಗ್: ಕರ್ನಾಟಕದವರು ಮತ್ತೆ ಎಲ್ಲಿಗೆ ಹೋಗಬೇಕು. ನಿಮ್ಮ ಮನೆಯವರು ಬೇರೆ ರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡರೆ ನೀವು ಈ ಪ್ರಶ್ನೆ ಕೇಳುತ್ತೀರಾ? ಅವರನ್ನು ಕ್ವಾರಂಟೈನ್ ಮಾಡುವ ವ್ಯವಸ್ಥೆ ಮಾಡಿ ಕರೆದುಕೊಂಡು ಬನ್ನಿ.
ಚಿ. ಮ. ವಿನೋದ್ ಕುಮಾರ್: ಹೌದು.ಇದರಿಂದ ಇಲ್ಲದಿರುವ ಸಮಸ್ಯೆಗಳನ್ನು ಮೈಮೇಲೆ ತೆಗೆದುಕೊಂಡು ಹಾಕಿಕೊಂಡಂತಾಗುತ್ತದೆ.
ಜೆಎಂ ಹರೀಶ: ಮೊದಲು ಮಾಡಿದ ತಪ್ಪನ್ನು ಇನ್ನೊಮ್ಮೆ ಮಾಡಬಾರದು ,ಹಾಗೆ ಕರೆತಂದವರನ್ನು ಪ್ರತ್ಯೇಕವಾಗಿ ಕ್ವಾರಂಟ್ಯೆನ್ ನಲ್ಲಿ ಇಟ್ಟು ಸೋಂಕು ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡ ನಂತರ ಅವರಿಗೆ ಸಾರ್ವಜನಿಕ ವಲಯದಲ್ಲಿ ಮುಕ್ತ ಅವಕಾಶ ನೀಡಬೇಕು.’
ಸೈಮನ್ ಫೆರ್ನಂಡಿಸ್: ದೇಶಕ್ಕೊಂದು ರಾಜ್ಯಕ್ಕೊಂದು ಉಳ್ಳವರಿಗೊಂದು ಇಲ್ಲದವರಿಗೊಂದು ನ್ಯಾಯ ಇರದೇ ಎಲ್ಲರಿಗು ಎಲ್ಲ ಕಡೆಗೂ ಒಂದೇ ಮಾದರಿ ಅನ್ವಯ ಆಗಬೇಕು.