ಸೊಲ್ಲಾಪುರ: ಅಕ್ಕಲ್‌ಕೋಟೆಯ ಶ್ರೀ ಸ್ವಾಮಿ ಸಮರ್ಥ ಮಹಾರಾಜರ 141ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಮೇ 2ರಂದು ವಟವೃಕ್ಷ ಸ್ವಾಮಿ ಮಹಾರಾಜ ದೇವಸ್ಥಾನ ಹಾಗೂ ಸಮಾಧಿ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಲಿವೆ ಎಂದು ದೇವಸ್ಥಾನ ಅಧ್ಯಕ್ಷ ಮಹೇಶ ಇಂಗಳೆ ತಿಳಿಸಿದ್ದಾರೆ.
ಬೆಳಗ್ಗೆ 2ರಿಂದ ದೇವಸ್ಥಾನದಲ್ಲಿ ಕಾಕಡಾರತಿ, ಅನಂತರ ಮಂದಿರದಲ್ಲಿ ಸಾಮೂಹಿಕ ಶ್ರೀ ಸಮರ್ಥರ ನಾಮಸ್ಮರಣೆ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 3ರಿಂದ ನಗರ ಪ್ರದಕ್ಷಣೆ, ಮುಂಜಾನೆ 6 ರಿಂದ ಪಾರಂಪಾರಿಕ ಲಘುರುದ್ರ, ನಾಮಸ್ಮರಣೆ ಸಪ್ತಾಹ ಜ್ಯೋತಿ ಮಂಟಪದಲ್ಲಿ ಸಮಾಪ್ತಿ ಕಾರ್ಯಕ್ರಮ, ಮಂದಿರದ ಮುಖ್ಯ ಪೂಜಾರಿಗಳಾದ ಮೊಹನ್ ಪೂಜಾರಿ ಹಾಗೂ ಮಂಧಾರ ಮಹಾರಾಜರಿಂದ ಸಮರ್ಥರ ಪಾದುಕಾ ಅಭಿಷೇಕ ನಡೆಯಲಿದೆ.
ಪೂರ್ವಾಹ್ನ 11.30ರಿಂದ ಸಂಪ್ರದಾಯದಂತೆ ಅಕ್ಕಲ್‌ಕೋಟೆ ರಾಜ ಮನೆತನದ ಯುವರಾಜ ಮಾಲೋಜಿ ರಾಜೆ ಹಾಗೂ ಸುನಿತಾ ರಾಜೆ ಬೋಸ್ಲೆ ಇವರ ಹಸ್ತದಿಂದ ಸ್ವಾಮೀಜಿಗೆ ನೈವೇದ್ಯ ಮತ್ತು ಆರತಿ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12 ರಿಂದ 3ರವರೆಗೆ ಮಹಾಪ್ರಸಾದ, ಸಂಜೆ 5.30 ರಿಂದ ವಟವೃಕ್ಷ ದೇವಸ್ಥಾನದಿಂದ ಮುಖ್ಯ ರಸ್ತೆಯ ಮುಖಾಂತರ ಸಮಾಧಿ ಮಠದವರೆಗೆ ಶ್ರೀ ಸ್ವಾಮಿ ಸಮರ್ಥರ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಅಂದು ರಾತ್ರಿ 10ರಿಂದ ಮರಳಿ ದೇವಸ್ಥಾನ ತಲಪಲಿದ ಬಳಿಕಮಹಾಪ್ರಸಾದ ಕಾರ್ಯಕ್ರಮ ನಡೆಯಲಿದೆ.
ಮೇ 3ರಂದು ಅಪರಾಹ್ನ 3 ರಿಂದ ಸಂಜೆ 7ರವರೆಗೆ ದಹಿಹಂಡಿ ಕಾರ್ಯಕ್ರಮ ನಡೆಯಲಿದೆ. ಮೇ 4 ರಂದು ಮಧ್ಯಾಹ್ನ 12ರಿಂದ ಅಪ
ರಾಹ್ನ 3ರವರೆಗೆ ಮಂದಿರದ ಉಪಾಹಾರ ಗೃಹದಲ್ಲಿ ಸರ್ವ ಸ್ವಾಮಿ ಭಕ್ತರು, ಸೇವಕರು, ಭಜನೆಕಾರರು ಹಾಗೂ ದೇವಸ್ಥಾನದ ಸಿಬಂದಿಗಳಿಗೆ ಮಹಾಪ್ರಸಾದ ಭೋಜನ
ನಡೆಯಲಿದೆ. ಆದ್ದರಿಂದ ಸರ್ವಸ್ವಾಮಿ ಭಕ್ತರು ಸಮರ್ಥರ ದರ್ಶನ, ಪಲ್ಲಕ್ಕಿ ಮೆರವಣಿಗೆ ಹಾಗೂ ಮಹಾಪ್ರಸಾದ ಲಾಭ ಪಡೆದುಕೊಳ್ಳುವಂತೆ ದೇವ ಸ್ಥಾನ ಅಧ್ಯಕ್ಷ ಮಹೇಶ ಇಂಗಳೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.