Advertisement

ಮೇ 10 ನವ ಕರ್ನಾಟಕಕ್ಕೆ ಹೊಸ ದಿಕ್ಸೂಚಿಯ ದಿನ: ಡಿಕೆಶಿ

09:38 PM Mar 29, 2023 | Team Udayavani |

ಬೆಂಗಳೂರು: ಮೇ ತಿಂಗಳ 10ನೇ ತಾರೀಕು ರಾಜ್ಯದ ವಿಧಾನಸಭೆ ಮತದಾನದ ದಿನ ಮಾತ್ರವಲ್ಲ; ರಾಜ್ಯಕ್ಕೆ ಅಂಟಿಕೊಂಡಿರುವ ಬ್ರಹ್ಮಾಂಡ ಭ್ರಷ್ಟಾಚಾರದಿಂದ ಮುಕ್ತಗೊಳ್ಳುವ ಹಾಗೂ ನವ ಕರ್ನಾಟಕಕ್ಕೆ ಹೊಸ ದಿಕ್ಸೂಚಿ ನೀಡುವ ದಿನವೂ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿಶ್ಲೇಷಿಸಿದ್ದಾರೆ.

Advertisement

ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಅಧಿಕಾರಿ ಸರಕಾರದ ಅಡಿಯಾಳಾಗುವುದಿಲ್ಲ ಎಂಬ ನಂಬಿಕೆ ಇದೆ. ನಾಲ್ಕು ವರ್ಷಗಳಿಂದ ಡಬಲ್‌ ಎಂಜಿನ್‌ ಸರಕಾರದ ದಬ್ಟಾಳಿಕೆಗೆ ಜನ ಬೇಸತ್ತಿದ್ದು, ವೈಫ‌ಲ್ಯವಾಗಿರುವ ಎಂಜಿನ್‌ಗಳ ಬದಲಿಗೆ ಹೊಸ ಎಂಜಿನ್‌ ಅನ್ನು ಜನರೇ ನಿರ್ಮಾಣ ಮಾಡಲಿದ್ದಾರೆ ಎಂದರು.

ಸಿದ್ದು 2 ಕಡೆ ಸ್ಪರ್ಧೆ ಅವರಿಷ್ಟ
ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬಗ್ಗೆ ಕೇಳಿದಾಗ, ಅದು ಅವರ ಸ್ವಂತ ಅಭಿಪ್ರಾಯ. ನಾನೇಕೆ ಬದಲಾವಣೆ ಮಾಡಲಿ? ಯಾವ್ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂದು ತೀರ್ಮಾನಿಸಲು ಕೇಂದ್ರ ಚುನಾವಣ ಸಮಿತಿ ಇದೆ ಎಂದರು.

50 ಮತ ಹಾಕಿ ಬಳಿಕ ಪ್ರಯೋಗ?
ಚುನಾವಣ ಬೂತ್‌ ಕಾರ್ಯಾರಂಭ ಮಾಡುವ ಮುನ್ನ ಬೂತ್‌ ಏಜೆಂಟರಿಂದ 50 ಮತಗಳನ್ನು ಪರೀಕ್ಷಾರ್ಥವಾಗಿ ಚಲಾವಣೆ ಮಾಡುವುದಾಗಿ ಆಯೋಗ ಹೇಳಿದ್ದು, ಇದು ಸ್ವಾಗತಾರ್ಹ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಎ. 5ರಿಂದ ಸತ್ಯಮೇವ ಜಯತೆ:
ಎ. 5ರಂದು ರಾಹುಲ್‌ ಗಾಂಧಿ ಕೋಲಾರಕ್ಕೆ ಆಗಮಿಸಲಿದ್ದು, ಅಲ್ಲಿಂದಲೇ ಗಾಂಧೀಜಿ ಅವರ ಮೂಲಮಂತ್ರ ಸತ್ಯಮೇವ ಜಯತೆ ಹೋರಾಟ ಆರಂಭಿಸಲಿದ್ದಾರೆ ಎಂದು ಹೇಳಿದರು.

Advertisement

ನಾವು ಕೇವಲ ರಾಜ್ಯದ ಜನರ ಜತೆಗೆ ಹೊಂದಾಣಿಕೆಯಾಗಿದ್ದೇವೆ ಹೊರತು, ಬೇರೆ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, 40 ಪರ್ಸೆಂಟ್‌ ಕಮಿಷನ್‌ ಕಾಂಗ್ರೆಸ್‌ಗೆ ತಿರುಗುಬಾಣವಾಗಲಿದೆ ಎಂದ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 40 ಪರ್ಸೆಂಟ್‌ ಕಮಿಷನ್‌ ಎನ್ನುವುದು ಜನರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಲೋಕಾಯುಕ್ತ ಸಂಸ್ಥೆ ಅದಕ್ಕೆ ಸ್ಟಾಂಪ್‌ ಒತ್ತಿದ್ದಾರೆ’ ಎಂದರು.

ನಾವು (ಕಾಂಗ್ರೆಸ್‌ ನಾಯಕರು) ಕೋಲರದಿಂದಲೇ ಹೋರಾಟ ಆರಂಭಿಸಲು ಮನವಿ ಮಾಡಿದ್ದು, ರಾಹುಲ್‌ ಗಾಂಧಿ ಅವರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಅದರಂತೆ ರಾಹುಲ್‌ ಗಾಂಧಿ ಎಲ್ಲಿ ಭಾಷಣ ಮಾಡಿದರೋ ಅದೇ ಭೂಮಿಯಿಂದ ಮತ್ತೆ ಪ್ರಜಾಪ್ರಭುತ್ವ ಉಳಿಸುವ ಹೋರಾಟ ಮಾಡಲಿದ್ದಾರೆ. ಬಿಜೆಪಿ ಅಧಿಕಾರ ದುರ್ಬಳಕೆ ಪ್ರಜಾಪ್ರಭುತ್ವಕ್ಕೆ ಅಪಮಾನವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next