Advertisement

ಮ್ಯಾಕ್ಸ್‌ ವೆಲ್‌ಗೆ ಆಘಾತ: ಆಸೀಸ್‌ ಏಕದಿನ ತಂಡದಿಂದ ಔಟ್‌

10:03 AM Jan 04, 2018 | |

ಸಿಡ್ನಿ: ಏಕದಿನ ಕ್ರಿಕೆಟ್‌ನ ಖ್ಯಾತ ಆಟಗಾರರಾದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ಮ್ಯಾಥ್ಯೂ ವೇಡ್‌ ಅವರನ್ನು ಮುಂಬರುವ ಇಂಗ್ಲೆಂಡ್‌ ವಿರುದ್ಧ ನಡೆಯುವ ಏಕದಿನ ಸರಣಿಗಾಗಿ ಬುಧವಾರ ಪ್ರಕಟಗೊಂಡ ಆಸ್ಟ್ರೇಲಿಯಾ ಏಕದಿನ ತಂಡದಿಂದ ಕೈಬಿಡಲಾಗಿದೆ. ಅಸ್ಥಿರ ನಿರ್ವಹಣೆಯಿಂದಾಗಿ ಮ್ಯಾಕ್ಸ್‌ವೆಲ್‌ ಅವರನ್ನು ಕೈಬಿಡಲಾಗಿದೆ. ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ ಅಮೋಘ ನಿರ್ವಹಣೆ ನೀಡಿದ ಹಿನ್ನಲೆಯಲ್ಲಿ ಟಿಮ್‌ ಪೈನ್‌ ಅವರನ್ನು ವೇಡ್‌ ಜಾಗದಲ್ಲಿ ವಿಕೆಟ್‌ ಕೀಪರ್‌ ಆಗಿ ನೇಮಿಸಲಾಗಿದೆ ಎಂದು ಮುಖ್ಯ ಆಯ್ಕೆಗಾರ ಟ್ರೆವರ್‌ ಹಾನ್ಸ್‌
ಹೇಳಿದ್ದಾರೆ. ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್‌ಮನ್‌ಗಳಲ್ಲಿ ಒಬ್ಬರಾಗಿರುವ ಮ್ಯಾಕ್ಸ್‌ವೆಲ್‌ ಪಾಲಿಗೆ ಸುದ್ದಿ ಬಹಳ ಆಘಾತಕಾರಿಯಾಗಿದೆ. ಈಗಾಗಲೇ ಆಸ್ಟ್ರೇಲಿಯಾ ಟೆಸ್ಟ್‌ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಅವರಿಗೆ ಈಗಿನ ಬೆಳವಣಿಗೆ ಭವಿಷ್ಯಕ್ಕೆ ಮಾರಕವಾಗುವ ಸಾಧ್ಯತೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next