Advertisement

ಇಂಗ್ಲೆಂಡ್ ಪ್ರವಾಸಕ್ಕೆ ಆಸೀಸ್‌ ತಂಡ ಪ್ರಕಟ: ಮರಳಿದ ಮ್ಯಾಕ್ಸ್‌ವೆಲ್‌, ಸ್ಟೋಯಿನಿಸ್‌

04:37 PM Aug 14, 2020 | keerthan |

ಮೆಲ್ಬರ್ನ್: ಮುಂದಿನ ತಿಂಗಳ ಇಂಗ್ಲೆಂಡ್‌ ಕ್ರಿಕೆಟ್‌ ಪ್ರವಾಸಕ್ಕಾಗಿ ಆಸ್ಟ್ರೇಲಿಯ ತನ್ನ ಸೀಮಿತ ಓವರ್‌ ಪಂದ್ಯಗಳ ತಂಡವನ್ನು ಅಂತಿಮಗೊಳಿಸಿದೆ. 21 ಸದಸ್ಯರನ್ನು ಇದು ಹೊಂದಿದ್ದು, ಅನುಭವಿ ಆಲ್‌ರೌಂಡರ್‌ಗಳಾದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ಮಾರ್ಕಸ್‌ ಸ್ಟೋಯಿನಿಸ್‌ ತಂಡಕ್ಕೆ ಮರಳಿದ್ದಾರೆ. ಆದರೆ ಡಿ ಆರ್ಸಿ ಶಾರ್ಟ್‌ ಅವರನ್ನು ಕೈಬಿಡಲಾಗಿದೆ.

Advertisement

ತಂಡದಲ್ಲಿ ಮೂವರು ಹೊಸಬರಿದ್ದಾರೆ. ಇವರೆಂದರೆ ಜೋಶ್‌ ಫಿಲಿಪ್‌, ಡೇನಿಯಲ್‌ ಸ್ಯಾಮ್ಸ್‌ ಮತ್ತು ರಿಲೀ ಮೆರಿಡಿತ್‌.

ಸೆ. 4-16ರ ಅವಧಿಯಲ್ಲಿ ಆಸ್ಟ್ರೇಲಿಯ-ಇಂಗ್ಲೆಂಡ್‌ ತಂಡಗಳು 3 ಟಿ20 ಮತ್ತು 3 ಏಕದಿನ ಪಂದ್ಯಗಳಲ್ಲಿ ಪಾಲ್ಗೊಳ್ಳಲಿವೆ.

ಆಸ್ಟ್ರೇಲಿಯ ತಂಡ: ಆರನ್‌ ಫಿಂಚ್‌ (ನಾಯಕ), ಸೀನ್‌ ಅಬೋಟ್‌, ಆ್ಯಶrನ್‌ ಅಗರ್‌, ಅಲೆಕ್ಸ್‌ ಕ್ಯಾರಿ, ಪ್ಯಾಟ್‌ ಕಮಿನ್ಸ್‌, ಜೋಶ್‌ ಹ್ಯಾಝಲ್‌ವುಡ್‌, ಮಾರ್ನಸ್‌ ಲಬುಶೇನ್‌, ನಥನ್‌ ಲಿಯೋನ್‌, ಮಿಚೆಲ್‌ ಮಾರ್ಷ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ರಿಲೀ ಮೆರಿಡಿತ್‌, ಜೋಶ್‌ ಫಿಲಿಪ್‌, ಡೇನಿಯಲ್‌ ಸ್ಯಾಮ್ಸ್‌, ಕೇನ್‌ ರಿಚರ್ಡ್‌ಸನ್‌, ಸ್ಟೀವನ್‌ ಸ್ಮಿತ್‌, ಮಿಚೆಲ್‌ ಸ್ಟಾರ್ಕ್‌, ಮಾರ್ಕಸ್‌ ಸ್ಟೋಯಿನಿಸ್‌, ಆ್ಯಂಡ್ರೂé ಟೈ, ಮ್ಯಾಥ್ಯೂ ವೇಡ್‌, ಡೇವಿಡ್‌ ವಾರ್ನರ್‌ ಮತ್ತು ಆ್ಯಡಂ ಝಂಪ.

Advertisement

Udayavani is now on Telegram. Click here to join our channel and stay updated with the latest news.

Next