Advertisement

ರಾಜ್ಯ ಸಾರಿಗೆ ನೌಕರರಿಗೆ ಗರಿಷ್ಠ ವೇತನ ಪರಿಷ್ಕರಣೆ ಕೊಡುಗೆ?

12:14 AM Apr 05, 2021 | Team Udayavani |

ಬೆಂಗಳೂರು: ಗರಿಷ್ಠ ಪ್ರಮಾಣದ ವೇತನ ಪರಿಷ್ಕರಣೆ ಪ್ರಸ್ತಾವವನ್ನು ಮುಷ್ಕರ ನಿರತ ಸಾರಿಗೆ ನೌಕರರ ಮುಂದಿರಿಸಿ ಮನವೊಲಿಸಲು ಸರಕಾರ ಚಿಂತನೆ ನಡೆಸಿದೆ. ಶೇ. 15ರಿಂದ ಶೇ. 18ರ ವರೆಗೂ ವೇತನ ಹೆಚ್ಚಳದ ಬಗ್ಗೆ ಲೆಕ್ಕಾಚಾರ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Advertisement

6ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಿದರೆ ಆರ್ಥಿಕ ಹೊರೆ ಆಗಲಿದ್ದು, ಪರ್ಯಾಯವಾಗಿ ಈ ಕ್ರಮ ಅನುಸರಿಸುವ ಚಿಂತನೆ ಇದೆ. ಪ್ರಸ್ತುತ 4 ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡಲಾಗುತ್ತಿದೆ. 2020ರ ಜನವರಿಯಲ್ಲಿ ಆಗಬೇಕಿದ್ದ ವೇತನ ಪರಿಷ್ಕರಣೆ ಕೊರೊನಾ ಮತ್ತಿತರ ಕಾರಣಗಳಿಂದ ಆಗಿರಲಿಲ್ಲ. ಈಗ ಪೂರ್ವಾನ್ವಯ ಆಗುವಂತೆ ವೇತನ ಪರಿಷ್ಕರಿಸಿ, ಹಿಂಬಾಕಿಯನ್ನೂ ಪಾವತಿಸಿ ನೌಕರರ ಮನವೊಲಿಕೆ ಯತ್ನ ನಡೆಯಲಿದೆ.

6ನೇ ವೇತನ ಆಯೋಗ ಶಿಫಾರಸುಗಳ ಅನ್ವಯಕ್ಕೆ ಸಂಬಂಧಿಸಿ ಕೆಲವು ತಾಂತ್ರಿಕ ಸಮಸ್ಯೆಗಳಿವೆ. ವೇತನ ಪರಿಷ್ಕರಣೆ ಮಾಡಿದರೂ ಎಷ್ಟು ಮಾಡಬೇಕು, ಅದು ಪ್ರಸ್ತುತ ಸಂದರ್ಭದಲ್ಲಿ ಸಾಧ್ಯವೇ ಇತ್ಯಾದಿ ಹಲವು ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಸರಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next