Advertisement

ಜನನ-ಮರಣ ಪ್ರಮಾಣ ಪತ್ರ ಪಡೆಯಲು ಗರಿಷ್ಠ 10 ರೂ. ಶುಲ್ಕ

11:55 AM Nov 06, 2017 | |

ಬೆಂಗಳೂರು: ಜನನ ಮರಣ ಪ್ರಮಾಣ ಪತ್ರಗಳ ಶುಲ್ಕಗಳನ್ನು ಮರು ನಿಗದಿ ಮಾಡಿ ಬಿಬಿಎಂಪಿ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈವರೆಗೆ ಪ್ರಮಾಣ ಪತ್ರವನ್ನು ಉಚಿತವಾಗಿ ನೀಡಲಾಗುತ್ತಿತ್ತು. ನೂತನ ಆದೇಶದಂತೆ ಜನನ ಅಥವಾ ಮರಣ ಸಂಭವಿಸಿದ ದಿನದಿಂದ 21 ದಿನದೊಳಗೆ ನೋಂದಣಿ ಮಾಡಿಸಿದರೆ ಉಚಿತವಾಗಿ ಪ್ರಮಾಣ ಪತ್ರ ನೀಡಲಾಗುತ್ತದೆ.

Advertisement

22ನೇ ದಿನದಿಂದ 31ನೇ ದಿನದೊಳಗೆ ನೋಂದಣಿ ಮಾಡಿಸಿದರೆ 2 ರೂ., 31ನೇ ದಿನದಿಂದ ಒಂದು ವರ್ಷದೊಳಗೆ ಪಡೆದರೆ 5 ರೂ., ಹಾಗೂ ಒಂದು ವರ್ಷ ಮೇಲ್ಪಟ್ಟು ನೋಂದಣಿಗೆ 10 ರೂ. ಶುಲ್ಕ ನಿಗದಿಪಡಿಸಲಾಗಿದೆ. ಪ್ರಮಾಣ ಪತ್ರಗಳ ವಿತರಣೆಗೆ ಮೊದಲನೆ ವರ್ಷದ ಶೋಧನೆಗಾಗಿ 2 ರೂ. ನಿಗದಿಪಡಿಸಲಾಗಿದ್ದು, ಮುಂದುವರಿಸಿದ ಪ್ರತಿಯೊಂದು ವರ್ಷಕ್ಕೂ ಹೆಚ್ಚುವರಿ 2 ರೂ. ನಿಗದಿ ಮಾಡಲಾಗಿದೆ.

ಜತೆಗೆ ಪ್ರತಿ ಜನನ ಪ್ರಮಾಣ ಪತ್ರಕ್ಕೆ 5 ರೂ. ಹಾಗೂ ಅಲಭ್ಯ ಪ್ರಮಾಣ ಪತ್ರ ನೀಡಿಕೆಗಾಗಿ 2 ರೂ. ನಿಗದಿಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next