Advertisement

ಕೆ.ಆರ್‌.ಪುರದಲ್ಲಿ ಗರಿಷ್ಠ ಮಳೆ

12:01 PM Mar 31, 2018 | |

ಬೆಂಗಳೂರು: ನಗರದಲ್ಲಿ ಸತತ ಎರಡನೇ ದಿನವೂ ಮಳೆ ಮುಂದುವರಿದಿದ್ದು, ಕೆಲವೆಡೆ ಆಲಿಕಲ್ಲು ಮಳೆ ಕೂಡ ದಾಖಲಾಗಿದೆ. 

Advertisement

ಶುಕ್ರವಾರ ಸಂಜೆ ಕೆ.ಆರ್‌.ಪುರದಲ್ಲಿ 46 ಮಿ.ಮೀ, ಹೂಡಿ-ಮಹದೇವಪುರದಲ್ಲಿ 50 ಮಿ.ಮೀ, ಬಸವನಪುರ 38.5, ಬ್ಯಾಟರಾಯನಪುರ 12, ಹೆಸರಘಟ್ಟ 14.5, ಶಿವಕೋಟೆ 26, ಬಾಗಲುಕುಂಟೆ 31, ರಾಜಾನುಕುಂಟೆ 13, ಎಚ್‌ಎಸ್‌ಆರ್‌ ಲೇಔಟ್‌ 8, ನಂದಿನಿ ಲೇಔಟ್‌ 4 ಮಿ.ಮೀ. ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ. 

ಮೇಲ್ಮೆ„ ಸುಳಿಗಾಳಿ ಮತ್ತು ಟ್ರಫ್ನಿಂದ ಮಳೆ ಬೀಳುತ್ತಿದ್ದು, ಇನ್ನೂ ಶನಿವಾರ ಕೂಡ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ರಮೇಶ್‌ಬಾಬು ಹೇಳಿದ್ದಾರೆ. 

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಬಿಸಿಲಿನ ಧಗೆ ಇತ್ತು. ಸಂಜೆ 4ರ ಹೊತ್ತಿಗೆ ದಿಢೀರ್‌ ಮೋಡಕವಿಯಿತು. ಕೆಲವೇ ಹೊತ್ತಿನಲ್ಲಿ ಗುಡುಗು ಸಹಿತ ಗಾಳಿ-ಮಳೆ ಅಬ್ಬರ ಶುರುವಾಯಿತು. ಆದರೆ, ಮಳೆ ಕೆಲ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿತ್ತು. ಉಳಿದೆಡೆ ಕೇವಲ ಮೋಡಕವಿದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next